Dream Interpretation: ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿಗೆ ಒಂದೊಂದು ಅರ್ಥ ಕಲ್ಪಿಸಲಾಗಿದೆ. ಕೆಲವು ಕನಸುಗಳನ್ನು ತುಂಬಾ ಮುಖ್ಯ ಎಂದೂ ಕೂಡ  ಹೇಳಲಾಗುತ್ತದೆ. ಏಕೆಂದರೆ ಅವು ವ್ಯಕ್ತಿಯ ಭವಿಷ್ಯದ ಮೇಲೆ ಗಾಢ ಪ್ರಭಾವ ಬೀರುತ್ತವೆ. ಕನಸಿನಲ್ಲಿ ಹಾವು ಕಂಡರೆ ತುಂಬಾ ವಿಶೇಷ ಎನ್ನಲಾಗುತ್ತದೆ. ಹಾವನ್ನು ಕನಸಿನಲ್ಲಿ ನೋಡುವುದು ಅನೇಕ ಶುಭ ಮತ್ತು ಅಶುಭ ಅರ್ಥಗಳನ್ನು ಹೊಂದಿದೆ. ಆದರೆ ಕನಸಿನಲ್ಲಿ ಹಾವಿನ ಬಣ್ಣ ಮತ್ತು ಅದು ಹೇಗೆ ವರ್ತಿಸುತ್ತಿದೆ ಎಂಬುದು ಶುಭ-ಅಶುಭಗಳನ್ನು ನಿರ್ಧರಿಸುತ್ತವೆ. ಏಕೆಂದರೆ ಸಾಮಾನ್ಯವಾಗಿ ಹಾವನ್ನು ಸಂಪತ್ತಿನ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಬನ್ನಿ ಹಾವಿನ ಕನಸುಗಳ ಕುರಿತು ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಹಾವಿನ ಕನಸಿನ ಅರ್ಥ
ಕನಸಿನಲ್ಲಿ ಬಿಳಿ ಬಣ್ಣದ ಹಾವು ಕಂಡರೆ ಏನರ್ಥ:
ಕನಸಿನಲ್ಲಿ ಬಿಳಿ ಬಣ್ಣದ ಹಾವು ಕಂಡರೆ ತುಂಬಾ ಶುಭ. ನಿಮ್ಮ ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ, ಶೀಘ್ರದಲ್ಲೇ ನೀವು ಸಾಕಷ್ಟು ಹಣವನ್ನು ಪಡೆಯಲಿರುವಿರಿ ಎಂಬುದರ ಸಂಕೇತವಾಗಿದೆ. ಉದ್ಯೋಗ-ವ್ಯವಹಾರದಲ್ಲಿ ನೀವು ದೊಡ್ಡ ಪ್ರಗತಿಯನ್ನು ಸಾಧಿಸುವಿರಿ ಎಂದರ್ಥ.


ಕನಸಿನಲ್ಲಿ ಹಸಿರು ಹಾವನ್ನು ನೋಡುವುದರ ಅರ್ಥ: ಕನಸಿನಲ್ಲಿ ಹಸಿರು ಹಾವು ಕಂಡರೆ ಶೀಘ್ರದಲ್ಲೇ ನಿಮಗೆ ಹೊಸ ಉದ್ಯೋಗ ಸಿಗಲಿದೆ ಎಂದರ್ಥ. ನಿರುದ್ಯೋಗಿಗಳಾಗಿದ್ದಾರೆ ಹೊಸ ಉದ್ಯೋಗ ಸಿಗಲಿದೆ ಎಂಬುದು ಇದರ ಅರ್ಥ.


ಕನಸಿನಲ್ಲಿ ವರ್ಣರಂಜಿತ ಹಾವನ್ನು ನೋಡುವುದರ ಅರ್ಥ: ಕನಸಿನಲ್ಲಿ ಬಣ್ಣಬಣ್ಣದ ಹಾವು ಕಾಣಿಸಿಕೊಂಡರೆ, ಅದು ನಿಮ್ಮ ಜೀವನದಲ್ಲಿ ಸುವರ್ಣ ದಿನಗಳು ಪ್ರಾರಂಭವಾಗುವ ಸಂಕೇತವಾಗಿದೆ. ಇಂತಹ  ಕನಸನ್ನು ಕಂಡ ವ್ಯಕ್ತಿಗೆ ಉನ್ನತ ಸ್ಥಾನಮಾನ, ಘನತೆ-ಗೌರವ ಮತ್ತು ಹಣ ಪ್ರಾಪ್ತಿಯಾಗುತ್ತದೆ. 


ಕನಸಿನಲ್ಲಿ ಹಳದಿ ಹಾವನ್ನು ನೋಡುವುದರ ಅರ್ಥ: ಕನಸಿನಲ್ಲಿ ಹಳದಿ ಬಣ್ಣದ ಹಾವು ಕಂಡರೆ, ಅದು ನಿಮ್ಮ ಮನೆಯಿಂದ ದೂರ ಹೊಗಲಿರುವಿರಿ ಎಂಬುದನ್ನೂ ಸೂಚಿಸುತ್ತದೆ. ಅಧ್ಯಯನ, ಉದ್ಯೋಗ-ವ್ಯಾಪಾರ ಅಥವಾ ಇನ್ನಾವುದೇ ಕಾರಣದಿಂದ ನೀವು ನಿಮ್ಮ ಮನೆಯನ್ನು ಬಿಡಬೇಕಾಗಬಹುದು.


ಕನಸಿನಲ್ಲಿ ಕೆಂಪು ಹಾವನ್ನು ನೋಡುವುದರ ಅರ್ಥ: ಕನಸಿನಲ್ಲಿ ಕೆಂಪು ಹಾವನ್ನು ನೋಡುವುದು ಎಂದರೆ ನೀವು ಶೀಘ್ರದಲ್ಲೇ ನಿಮಗೆ ದೊಡ್ಡ ಜವಾಬ್ದಾರಿ ಸಿಗಲಿದೆ ಎಂದರ್ಥ ಮತ್ತು ನೀವು ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು.


ಕನಸಿನಲ್ಲಿ ಕಪ್ಪು ಹಾವು ಕಂಡರೆ ಏನರ್ಥ ಕನಸಿನಲ್ಲಿ ಉದ್ದನೆಯ ಕಪ್ಪು ಹಾವು ಕಂಡರೆ ಆ ವ್ಯಕ್ತಿಗೆ ಉದ್ಯೋಗದಲ್ಲಿ ಬಡ್ತಿ, ದೊಡ್ಡ ವೇತನ ಸಿಗಲಿದೆ ಎಂದರ್ಥ. ಇದು ಹಾಳಾದ ಕೆಲಸದ ಸಂಕೇತವೂ ಹೌದು.


ಇದನ್ನೂ ಓದಿ-Budhaditya Rajyog In Aries: ಸೂರ್ಯ ಹಾಗೂ ಬುದ್ಧನ ಮೈತ್ರಿಯಿಂದ ಈ ರಾಶಿಗಳ ಭಾಗ್ಯ ಫಳಫಳ ಹೊಳೆಯಲಿದೆ!


ಕನಸಿನಲ್ಲಿ ಚಿನ್ನದ ಬಣ್ಣದ ಹಾವು ಕಂಡರೆ ಏನರ್ಥ: ನಿಮ್ಮ ಕನಸಿನಲ್ಲಿ ಚಿನ್ನದ ಬಣ್ಣದ ಹಾವು ಕಾಣಿಸಿಕೊಂಡರೆ, ನೀವು ಧಾರ್ಮಿಕ ಸ್ಥಳದಲ್ಲಿ ನೈವೇದ್ಯವನ್ನು ಅರ್ಪಿಸಲಿರುವಿರಿ ಎಂಬುದರ ಸಂಕೇತವಾಗಿದೆ, ಆದ್ದರಿಂದ ಶೀಘ್ರದಲ್ಲೇ ಅದನ್ನು ಪೂರೈಸಿಕೊಳ್ಳಿ.


ಇದನ್ನೂ ಓದಿ-Shani Shadashtak:ಎಚ್ಚರ! ಶನಿ ಹಾಗೂ ಮಂಗಳರಿಂದ ಅಪಾಯಕಾರಿ ಷಡಾಷ್ಟಕ ಯೋಗ ನಿರ್ಮಾಣ, ಈ ರಾಶಿಯವರಿಗೆ ಧನಹಾನಿ ಸಾಧ್ಯತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.