Drinking Water In Morning Health Benefits: ನಾವು ಪ್ರತಿದಿನ ಬೆಳಗ್ಗೆ ಎದ್ದು ಹಲ್ಲುಜ್ಜುತ್ತೇವೆ, ಇದು ನಮ್ಮ ಹಲ್ಲು ಮತ್ತು ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಎಲ್ಲಾ ರೀತಿಯ ದುರ್ವಾಸನೆಗಳನ್ನು ಹೋಗಲಾಡಿಸುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಬ್ರಶ್ ಮಾಡದೆಯೇ ಬೆಳಗಿನ ಉಪಾಹಾರವನ್ನು ಮಾಡಬಾರದು ಎಂಬ ಸಲಹೆ ನೀಡಲಾಗುತ್ತದೆ. ಏಕೆಂದರೆ ಸೂಕ್ಷ್ಮ ಜೀವಿಗಳು ಬಾಯಿಯಲ್ಲಿ ಇರುತ್ತವೆ ಮತ್ತು ಅವು ಆಹಾರದ ಮೂಲಕ ಹೊಟ್ಟೆಯನ್ನು ತಲುಪುತ್ತವೆ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಹೀಗಿರುವಾಗ ಬೆಳಗ್ಗೆ ಎದ್ದು ಹಳ್ಳುಜ್ಜದೆಯೇ ನೀರು ಕುಡಿಯಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ಎದುರಾಗುತ್ತದೆ. (Health News In Kannada)

COMMERCIAL BREAK
SCROLL TO CONTINUE READING

ಕುಡಿಯುವ ನೀರು ಆರೋಗ್ಯಕ್ಕೆ ಬಹಳ ಮುಖ್ಯ
ಖ್ಯಾತ ಡಯಟೀಶಿಯನ್ ನಿಖಿಲ್ ವ್ಯಾಟ್ಸ್ ಹೇಳುವ ಪ್ರಕಾರ ಪ್ರಕಾರ, 'ಓರ್ವ ಆರೋಗ್ಯವಂತ ವ್ಯಕ್ತಿ ದಿನಕ್ಕೆ 8 ರಿಂದ 10 ಗ್ಲಾಸ್ ನೀರುಕುಡಿಯಬೇಕು, ಇದು ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ ಮತ್ತು ಬೇಸಿಗೆಯಲ್ಲಿ ಇದನ್ನು ಅನುಸರಿಸುವುದ ತುಂಬಾ ಮುಖ್ಯವಾಗಿದೆ' ಎನ್ನುತ್ತಾರೆ. ಈ ಕಾರಣದಿಂದಲೇ ಬೆಳಗ್ಗೆ ಎದ್ದಾಗ ನಮಗೆ ತುಂಬಾ ಬಾಯಾರಿಕೆಯಾಗುತ್ತಿದೆ, ಆಗ ನಾವು ಬ್ರಷ್ ಮಾಡಿದ್ದೇವೋ ಅಥವಾ  ಇಲ್ಲವೋ ಎಂಬುದರ ಕುರಿತು ಹೆಚ್ಚಾಗಿ ಯೋಚಿಸುವುದಿಲ್ಲ .


ಹಲ್ಲುಜ್ಜದೆ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು
ಬೆಳಗ್ಗೆ ಎದ್ದು ಬ್ರಶ್ ಮಾಡದೆ ನೀರು ಕುಡಿದರೆ ಅದರಿಂದ ಯಾವುದೇ ಹಾನಿ ಇಲ್ಲ  ಮತ್ತು ಅದರಿಂದ ಸಾಕಷ್ಟು ಲಾಭಗಳಿವೆ (Health Benefits) ಎಂದು ನಿಮಗೆ ಹೇಳಿದರೆ, ನಿಮಗೂ ಕೂಡ ಆಶ್ಚರ್ಯವಾಗಬಹುದು.

1. ಬೆಳಗ್ಗೆ ಹಲ್ಲುಜ್ಜುವ ಮೊದಲು ಒಂದು ಲೋಟ ನೀರು ಕುಡಿದರೆ, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ರೀತಿಯ ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ.


2. ಬ್ರಶ್ ಮಾಡದೆಯೇ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮಗೊಳ್ಳುತ್ತದೆ, ಜೊತೆಗೆ ಇದು ಬಾಯಿಯ ವಾಸನೆಯನ್ನು ಸಹ ತೆಗೆದುಹಾಕುತ್ತದೆ.


3. ಹಲ್ಲುಜ್ಜದೆ ನೀರು ಕುಡಿಯುವುದರಿಂದ ಕೂದಲು ಸ್ಟ್ರಾಂಗ್ ಆಗುತ್ತವೆ ಮತ್ತು ಹೊಳೆಯುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.


4. ಈ ರೀತಿ ನೀರು ಕುಡಿಯುವುದರಿಂದ ಮುಖ ಮತ್ತು ತ್ವಚೆಯಲ್ಲಿ ಅದ್ಭುತವಾದ ಹೊಳಪು ಬರುತ್ತದೆ ಮತ್ತು ಮುಖ ಕಾಂತಿಯುತವಾಗಿ ಕಾಣಿಸಲು ಆರಂಭಿಸುತ್ತದೆ.


5. ನೀವು ಮಧುಮೇಹಿಗಳಾಗಿದ್ದರೆ, ನೀವು ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯಿರಿ ಮತ್ತು ಅದಕ್ಕಾಗಿ ಬ್ರಷ್ ಮಾಡಲು ಕಾಯಬೇಡಿ.


6. ಈ ರೀತಿ ನೀರು ಕುಡಿಯುವುದರಿಂದ ಬೊಜ್ಜು ಕೂಡ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.


ಇದನ್ನೂ ಓದಿ-Cinnamon Tea Benefits: ತೂಕ ಇಳಿಕೆ ಅಷ್ಟೇ ಅಲ್ಲ, ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತೇ ಈ ಚಹಾ!


7. ಬ್ರಶ್ ಮಾಡದೆ ನೀರು ಕುಡಿಯುವುದರಿಂದ ಮಲಬದ್ಧತೆ, ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳೂ ನಿವಾರಣೆಯಾಗುತ್ತವೆ. 


ಇದನ್ನೂ ಓದಿ-Weight Loss Remedy ಏನೂ ತಿನ್ನದೇ ಕೂಡ ತೂಕ ಹೆಚ್ಚಾಗುತ್ತಿದೆಯಾ? ಅದಕ್ಕೆ ಕಾರಣ ಇಲ್ಲಿದೆ!


(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ