Drumstick Leaves A Super Food: ಕೊರೊನಾ ಕಾಲದಲ್ಲಿ ಈ ಸೊಪ್ಪು ಮತ್ತು ಅದರ ಪೌಡರ್ ಒಂದು ಸೂಪರ್ ಫುಡ್
Drumstick Leaves A Super Food - ಕರೋನಾ ಸಾಂಕ್ರಾಮಿಕ ರೋಗದಿಂದಾಗಿ, ಜನರು ಮನೆಯಲ್ಲಿಯೇ ತಮ್ಮ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಮತ್ತು ಯಾವುದೇ ವ್ಯಾಯಾಮ ಮಾಡದ ಕಾರಣ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ನವದೆಹಲಿ: Drumstick Leaves A Super Food - ಕರೋನಾ ಸಾಂಕ್ರಾಮಿಕ (Corona Epidemic) ರೋಗದಿಂದಾಗಿ, ಜನರು ಮನೆಯಲ್ಲಿಯೇ ತಮ್ಮ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮನೆಯಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಮತ್ತು ಯಾವುದೇ ವ್ಯಾಯಾಮ ಮಾಡದ ಕಾರಣ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಮತ್ತು ಉತ್ತಮ ಆಹಾರ ಮತ್ತು ವ್ಯಾಯಾಮವನ್ನು ಸಹ ಮಾಡಬೇಕು. ಇಂದು ನಾವು ನಿಮಗೆ ಒಂದು ಸೂಪರ್ಫುಡ್ ಬಗ್ಗೆ ಮಾಹಿತಿ ನೀಡಲಿದ್ದೇವೆ . ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹೌದು ನಾವು ಮೊರಿಂಗ (Moringa Leaves) ಅಥವಾ ನುಗ್ಗೆ ಸೊಪ್ಪಿನ (Drumstick Powder)ಪುಡಿಯ ಬಗ್ಗೆ ಮಾತನಾಡುತ್ತಿದ್ದೇವೆ. ಮೊರಿಂಗಾ ಪುಡಿಯನ್ನು ನುಗ್ಗೆ ಮರದ ಎಲೆಗಳಿಂದ ತಯಾರಿಸಲಾಗುತ್ತದೆ ಮತ್ತು ಇದು ಹಲವು ರೀತಿಯ ಔಷಧಿಯ ಗುಣಗಳನ್ನು (Medicinal Benefits Of Moringa) ಹೊಂದಿದೆ. ಹಾಗಾದರೆ ಬನ್ನಿ ಇದರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ.
ಇದನ್ನೂ ಓದಿ-Curry Leaves Benefits : ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ 5 ಪ್ರಯೋಜನಗಳು!
- ನುಗ್ಗೆ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಬಿ 6 ಹಾಗೂ ರೈಬೋಫ್ಲೆವಿನ್ ಇರುತ್ತದೆ. ಇದಲ್ಲದೆ ಇದು ಪೊಟ್ಯಾಸಿಯಂ, ವಿಟಮಿನ್ ಎ, ವಿಟಮಿನ್ ಇ ಹಾಗೂ ಮ್ಯಾಗ್ನೆಸಿಯಂಗಳ ಆಗರವಾಗಿದೆ.
- ನುಗ್ಗೆ ಸೊಪ್ಪಿನ ಎಲೆಗಳಿಂದ ತಯಾರಿಸಲಾಗಿರುವ ಪೌಡರ್ ಹೇರಳ ಪ್ರಮಾಣದಲ್ಲಿ ಪ್ರೋಟಿನ್ ಹೊಂದಿದೆ. ಒಂದು ದೊಡ್ಡ ಸ್ಪೂನ್ ಪೌಡರ್ ನಲ್ಲಿ 3 ಗ್ರಾಂ ಪ್ರೋಟಿನ್ ಹಾಗೂ ಅತ್ಯಾವಶ್ಯಕ ಅಮೈನೊ ಆಸಿಡ್ ಗಳನ್ನು ಹೊಂದಿರುತ್ತದೆ. ಇವು ದೇಹದ ಖಂಡಗಳಗಳಿಗೆ ಶಕ್ತಿ ನೀಡಿ ಉತ್ಪಾದನೆ ಹಾಗೂ ಮನಸ್ಥಿತಿಯನ್ನು ಸುಧಾರಿಸುತ್ತದೆ.
- ನುಗ್ಗೆ ಸೊಪ್ಪಿನಲ್ಲಿ ಜಠರದ ಆಕ್ಸಿಕರಣವನ್ನು ತಡೆಯಲು ಪಾಲಿಫೆನೋಲ್ಸ್ ಗಳ ಹೈ ಕಾಂಸನ್ಟ್ರೆಶನ್ ಇರುತ್ತದೆ. ಲಿವರ್ ಫೈಫ್ರೋಸಿಸ್ ಕಡಿಮೆ ಮಾಡಲು ಹಾಗೂ ಲೀವರ್ ಗೆ ಆಗುವ ಹಾನಿ ತಪ್ಪಿಸಲು ನುಗ್ಗೆ ಸೊಪ್ಪು ಸೇವಿಸುವುದು ಉತ್ತಮ.
- ನುಗ್ಗೆ ಸೊಪ್ಪಿನ ಪೌಡರ್ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ದೂರಗೊಳಿಸುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ.
- ಇದು ನಮ್ಮ ತ್ವಚೆಯನ್ನು ಕೂಡ ಸುಂದರಗೊಳಿಸುತ್ತದೆ. ನುಗ್ಗೆಸೊಪ್ಪಿನ ಪೌಡರ್ ನಿಂದ ತಯಾರಿಸಲಾಗಿರುವ ಫೆಸ್ ಪ್ಯಾಕ್ ನಿಂದ ಮೊಡವೆ, ಕಲೆಗಳು ಹಾಗೂ ಪಿಂಪಲ್ಸ್ ಗಳಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಇದರಿಂದ ತ್ವಚೆಗೆ ಪೋಷಣೆ ಸಿಗುತ್ತದೆ ಮತ್ತು ನೈಸರ್ಗಿಕವಾಗಿ ತ್ವಚೆ ಹೊಳೆಯಲಾರಂಭಿಸುತ್ತದೆ.
- ಚಳಿಗಾಲದ ದಿನಗಳಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ವೈರಲ್ ಇನ್ಫೆಕ್ಷನ್ ಗಳಂತಹ ಸಮಸ್ಯೆಗಳು ಸಾಮಾನ್ಯ. ಇಂತಹುದರಲ್ಲಿ ನುಗ್ಗೆ ಸೊಪ್ಪಿನ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದಾಗಿದೆ.
ಇದನ್ನೂ ಓದಿ-ನೆಲಗಡಲೆ ನೆನೆಸಿ ತಿಂದರೆ ಆರೋಗ್ಯಕ್ಕೇನು ಲಾಭ.?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.