Dry Fruits For Reducing Bad Cholesterol: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆ ತುಂಬಾ ಅಸಡ್ಡೆಯ ಮನೋಭಾವವನ್ನು ಹೊಂದಿದ್ದಾರೆ, ಇದರ ಹೊರತಾಗಿ ದೈಹಿಕ ಚಟುವಟಿಕೆಗಳು ಸಹ ಬಹಳಷ್ಟು ಕಡಿಮೆಯಾಗಿವೆ. ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಸಿಹಿ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅಪಧಮನಿಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ ಮತ್ತು ನಂತರ ರಕ್ತವು ಹೃದಯವನ್ನು ತಲುಪಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಹೇಳುವ ಪ್ರಕಾರ, ನಾವು ಕೆಲ ವಿಶೇಷ ಡ್ರೈ ಫ್ರೂಟ್ ಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಡ್ರೈ ಫ್ರೂಟ್ ಗಳನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ
1. ಪಿಸ್ತಾ

ಪಿಸ್ತಾ ಒಂದು ಅತ್ಯಂತ ಆರೋಗ್ಯಕರ ಡ್ರೈ ಫ್ರೂಟ್ ಆಗಿದೆ, ಅದರ ರುಚಿ ಅನೇಕ ಜನರನ್ನು ಆಕರ್ಷಿಸುತ್ತದೆ. ಪಿಸ್ತಾ ತಿನ್ನುವುದರಿಂದ ದೀರ್ಘಕಾಲದವರೆಗೆ ಹಸಿವಿನ ಅನುಭವ ಉಂಟಾಗುವುದಿಲ್ಲ, ಇದರಿಂದಾಗಿ ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿತ್ತವೆ.


2. ಬಾದಾಮಿ
ಬಾದಾಮಿಯನ್ನು ಆರೋಗ್ಯದ ಕೀಲಿ ಎಂದು ಪರಿಗಣಿಸಲಾಗುತ್ತದೆ, ಬಾದಾಮಿಯನ್ನು ನೆನೆಹಾಕಿ ನೀವು ಸೇವಿಸಬಹುದು. ಇದು ಅಮೈನೋ ಆಮ್ಲವನ್ನು ಹೊಂದಿರುತ್ತದೆ, ಇದರಿಂದಾಗಿ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ನೀವು ಪ್ರತಿದಿನ ಒಂದು ಹಿಡಿ ಬಾದಾಮಿಯನ್ನು ಸೇವಿಸಿದರೆ, ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ತ್ವರಿತವಾಗಿ ಕಡಿಮೆಯಾಗುತ್ತದೆ.


3. ವಾಲ್ನಟ್
ನೀವು ಫಿಟ್ ಆಗಿರಲು ಬಯಸಿದರೆ, ಇಂದಿನಿಂದಲೇ ವಾಲ್‌ನಟ್‌ಗಳನ್ನು ಸೇವಿಸಲು ಪ್ರಾರಂಭಿಸಿ, ಏಕೆಂದರೆ ತನ್ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು ಇದರಲ್ಲಿ ಕಂಡುಬರುತ್ತವೆ, ಇದು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.


ಇದನ್ನೂ ಓದಿ-Winter Season Tips: ಚಳಿಗಾಲದಲ್ಲಿ ಮರೆತೂ ಕೂಡ ಫ್ರಿಡ್ಜ್ ನಲ್ಲಿ ತರಕಾರಿಗಳನ್ನು ಇಡಬೇಡಿ, ಕಾರಣ ಇಲ್ಲಿದೆ


4. ಕಡಲೆಕಾಳು
ಇತರೆ ಡ್ರೈ ಫ್ರೂಟ್ಸ್ ಗೆ ಹೋಲಿಸಿದರೆ ಶೇಂಗಾ ಖರೀದಿಸುವುದು ಜೇಬಿಗೆ ಹೆಚ್ಚಿನ ಹೊರೆ ಎನಿಸುವುದಿಲ್ಲ. ಹೀಗಾಗಿ ಎಲ್ಲರೂ ಸುಲಭವಾಗಿ ಅದನ್ನು ಸೇವಿಸಬಹುದು. ದಿನನಿತ್ಯದ ತಿಂಡಿಗಳಲ್ಲಿ ಶೇಂಗಾ ತಿಂದರೆ ಕೊಲೆಸ್ಟ್ರಾಲ್ ಕಡಿಮೆ ಆಗುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳೂ ದೂರಾಗುತ್ತವೆ.


ಇದನ್ನೂ ಓದಿ-Health News: ನೀವೂ ಕೂಡ ಮೊಳಕೆಯೊಡೆದ ಮೆಂತ್ಯ ಹಾಗೂ ಹೆಸರುಬೇಳೆ ಸೇವಿಸುತ್ತೀರಾ? ಹಾಗಾದ್ರೆ ಈ ವರದಿ ಓದಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.