ಈ 3 ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಹಿಂದೆಂದೂ ಕಂಡಿರದಷ್ಟು ಅಪಾಯ ಎದುರಾಗಲಿದೆ: ಈ ಜನರ ಪ್ರಾಣಕ್ಕೂ ಇದೆ ಕುತ್ತು!
Surya-Guru-Rahu Yoga: ಏಪ್ರಿಲ್ 22 ರಂದು, ಮೇಷ ರಾಶಿಯಲ್ಲಿ ಸೂರ್ಯ, ಗುರು ಮತ್ತು ರಾಹುವಿನ ಸಂಯೋಗವು ರೂಪುಗೊಳ್ಳಲಿದೆ. ಈ ಸಂಯೋಜನೆಯ ಮೇಲೆ ಶನಿದೇವ ಕಣ್ಣಿಟ್ಟಿರುವುದರಿಂದ ದೇಶ ಮತ್ತು ಪ್ರಪಂಚದ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.
Surya-Guru-Rahu Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಗ್ರಹಗಳ ಮಿಲನವನ್ನು ಯುತಿ ಎನ್ನುತ್ತಾರೆ. ಗ್ರಹಗಳ ಈ ಸಂಯೋಜನೆಯು ಕೆಲವೊಮ್ಮೆ ಶುಭ ಮತ್ತು ಕೆಲವೊಮ್ಮೆ ಅಶುಭವೆಂದು ಸಾಬೀತುಪಡಿಸುತ್ತದೆ. ಗ್ರಹಗಳ ಮೈತ್ರಿಯು ಎಲ್ಲಾ 12 ರಾಶಿಗಳಿಗೆ ಮಾತ್ರವಲ್ಲ, ದೇಶ ಮತ್ತು ಜಗತ್ತಿಗೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದರೆ ನೀವು ನಂಬುತ್ತೀರಾ?
ಇದನ್ನೂ ಓದಿ: Surya Grahan 2023: ವರ್ಷದ ಮೊದಲ ಸೂರ್ಯಗ್ರಹಣದಿಂದ ಅಲ್ಲೋಲ ಕಲ್ಲೋಲವಾಗುತ್ತೆ ಈ ರಾಶಿಯವರ ಜೀವನ!
ಏಪ್ರಿಲ್ 22 ರಂದು, ಮೇಷ ರಾಶಿಯಲ್ಲಿ ಸೂರ್ಯ, ಗುರು ಮತ್ತು ರಾಹುವಿನ ಸಂಯೋಗವು ರೂಪುಗೊಳ್ಳಲಿದೆ. ಈ ಸಂಯೋಜನೆಯ ಮೇಲೆ ಶನಿದೇವ ಕಣ್ಣಿಟ್ಟಿರುವುದರಿಂದ ದೇಶ ಮತ್ತು ಪ್ರಪಂಚದ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.
ಮೇಷ ರಾಶಿಯಲ್ಲಿ ಸೂರ್ಯ-ಗುರು-ರಾಹು ಸಂಯೋಗದ ಋಣಾತ್ಮಕ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತವೆ. ಈ ಮೂರು ಗ್ರಹಗಳ ಮೈತ್ರಿಯಿಂದಾಗಿ ರಾಜಕೀಯ ಮೇಲಾಟವನ್ನು ಕಾಣಬಹುದು. ಅಷ್ಟೇ ಅಲ್ಲ, ಸರ್ಕಾರದ ಯಾವುದೇ ಪ್ರಮುಖ ನಿರ್ಧಾರ ಸಾರ್ವಜನಿಕರನ್ನು ಕೆರಳಿಸುವ ಸಾಧ್ಯತೆಯೂ ಇದೆ. ಆ ವೇಳೆ ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಯಿದೆ.
ಜ್ಯೋತಿಷ್ಯದಲ್ಲಿ, ಗುರುವನ್ನು ಆಯುಷ್ಯ ನೀಡುವ ಮತ್ತು ಜೀವನದ ರಕ್ಷಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಗ್ರಹ ರಾಹುವಿನೊಡನೆ ಇರುವುದರಿಂದಲೇ ದೇಶ, ಪ್ರಪಂಚದಲ್ಲಿ ಕೆಲ ಸಮಸ್ಯೆ ಬರಬಹುದು, ಇದರಿಂದ ಸಾವಿರಾರು ಜನರ ಪ್ರಾಣಕ್ಕೆ ಅಪಾಯ ಕೂಡ ಎದುರಾಗಬಹುದು ಎಂದು ಹೇಳಲಾಗುತ್ತದೆ.
ಈ ಗ್ರಹಗಳ ಸಂಯೋಗದ ಸಮಯದಲ್ಲಿ, ಅನೇಕ ದೇಶಗಳ ಆರ್ಥಿಕ ಸ್ಥಿತಿಯ ಮೇಲೆ ಬಿಕ್ಕಟ್ಟು ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ, ಈ ಅವಧಿಯಲ್ಲಿ ಷೇರುಪೇಟೆ ಮತ್ತು ಚಿನ್ನದ ಬೆಲೆಯಲ್ಲಿ ಹಠಾತ್ ದೊಡ್ಡ ಬದಲಾವಣೆಗಳಾಗುತ್ತವೆ. ಇದು ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟಿಗೆ ನಾಂದಿ ಹಾಡಿದಂತಾಗುತ್ತದೆ.
ಮೇಷ ರಾಶಿಯಲ್ಲಿ ಈ ಮೂರು ಗ್ರಹಗಳ ಸಂಯೋಜನೆಯು ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿಯಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Bathroom Vastu Tips: ಬಾತ್ ರೂಂ ವಾಸ್ತುವಿನಲ್ಲಿ ಅಡಗಿದೆ ನಿಮ್ಮ ಆರೋಗ್ಯ-ಆರ್ಥಿಕತೆಯ ಗುಟ್ಟು! ಎಂದಿಗೂ ಇಂಥಾ ತಪ್ಪು ಮಾಡದಿರಿ
ಈ ಮೂರು ಗ್ರಹಗಳ ಮೈತ್ರಿಯು ಮೇಷ ರಾಶಿಯಲ್ಲಿ ಏಪ್ರಿಲ್ 22 ರಂದು ಸಂಭವಿಸಲಿದೆ. ಈ ಸಮಯದಲ್ಲಿ, ಬೇರೆ ದೇಶದಲ್ಲಿ ಯುದ್ಧದ ಸಾಧ್ಯತೆಯೂ ಉಂಟಾಗಬಹುದು. ಭಾರತದ ಯಾವುದೇ ನೆರೆಯ ರಾಷ್ಟ್ರದೊಂದಿಗೆ ಸಂಘರ್ಷ ಇತ್ಯಾದಿಗಳಿರಬಹುದು, ಅಥವಾ ಭಯೋತ್ಪಾದಕ ಕೃತ್ಯಗಳೂ ಸಂಭವಿಸಬಹುದು ಎಂದು ಹೇಳಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.