Durga Ashtami 2022: ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಿಂದ ಮಹಾಲಕ್ಷ್ಮಿ ವ್ರತ ಆರಂಭವಾಗುತ್ತದೆ. ತಾಯಿ ಲಕ್ಷ್ಮಿಗೆ ಸಮರ್ಪಿತವಾದ ಈ ಹಬ್ಬವನ್ನು 16 ದಿನಗಳ ಕಾಲ ಆಚರಿಸಲಾಗುತ್ತದೆ. ಈ 16 ದಿನಗಳ ಕಾಲ ಉಪವಾಸವನ್ನು ಕೈಗೊಳ್ಳುವ ಮೂಲಕ ತಾಯಿ ಲಕ್ಷ್ಮಿಯನ್ನು ವಿಧಿವಿಧಾನಗಳ ಮೂಲಕ ಪೂಜಿಸಲಾಗುತ್ತದೆ. ಈ ವ್ರತದ ಪ್ರಭಾವದಿಂದ ದಾರಿದ್ರ್ಯ ತೊಲಗುತ್ತದೆ ಹಾಗೂ ಸುಖ-ಸಮೃದ್ಧಿಯಲ್ಲಿ ಹೆಚ್ಚಳವಾಗುತ್ತದೆ. ಈ ವ್ರತ ಅಖಂಡ ಸೌಭಾಗ್ಯವನ್ನು ದಯಪಾಲಿಸುತ್ತದೆ.


COMMERCIAL BREAK
SCROLL TO CONTINUE READING

ಮಹಾಲಕ್ಷ್ಮಿ ವ್ರತದ ವೈಶಿಷ್ಟ್ಯವನ್ನು ಶ್ರೀಕೃಷ್ಣನು ಪಾಂಡವರಿಗೆ ಹೇಳಿದ್ದಾನೆ. ಪಗಡೆಯ ಆಟದಲ್ಲಿ ಪಾಂಡವರು ಕೌರವರಿಂದ ಸೋಲಿಸಲ್ಪಟ್ಟಾಗ, ಧರ್ಮರಾಜ ಯುಧಿಷ್ಠಿರನು ಶ್ರೀಕೃಷ್ಣನಿಗೆ ಹಣವನ್ನು ಪಡೆಯುವ ಮಾರ್ಗಗಳ ಕುರಿತು ವಿಚಾರಿಸುತ್ತಾನೆ. ಆಗ ಶ್ರೀಕೃಷ್ಣನು ಮಹಾಲಕ್ಷ್ಮಿ ವ್ರತವನ್ನು ಆಚರಿಸುವಂತೆ ಧರ್ಮರಾಜನಿಗೆ ಸಲಹೆ ನೀಡುತ್ತಾನೆ. ಈ ವ್ರತವನ್ನು ಆಚರಿಸುವುದರಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಮತ್ತು ಆರ್ಥಿಕ ತೊಂದರೆಗಳನ್ನು ದೂರಮಾಡುತ್ತಾಳೆ. 


ಇದನ್ನೂ ಓದಿ-Touch Me not Benefits: ಆರೋಗ್ಯದ ಖನಿ ಈ 'ಮುಟ್ಟಿದರೆ ಮುನಿ', ಇಲ್ಲಿವೆ ಅದರ ಅದ್ಭುತ ಲಾಭಗಳು

ಈ ವ್ರತದ ಪೂಜೆಯನ್ನು ಸಂಜೆಯ ಹೊತ್ತು ನೆರವೇರಿಸಲಾಗುತ್ತದೆ. ಸಂಜೆ ಸ್ನಾನದ ನಂತರ, ಪೂಜಾ ಸ್ಥಳದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ. ಕುಂಕುಮ ಮಿಶ್ರಿತ ಶ್ರೀಗಂಧದಿಂದ ಅಷ್ಟಭುಜಾಕೃತಿಯನ್ನು ರಚಿಸಿ, ನೀರು ತುಂಬಿದ ಕಲಶವನ್ನು ಇಟ್ಟುಕೊಳ್ಳಿ. ಕಲಶದ ಬಳಿ ಅರಿಶಿನದಿಂದ ಕಮಲವನ್ನು ಕಮಲವನ್ನು ರಚಿಸಿ ತಾಯಿಯ ವಿಗ್ರಹವನ್ನು ಇರಿಸಿ. ಪೂಜಾ ಸ್ಥಳದಲ್ಲಿ ಲಕ್ಷ್ಮಿ ದೇವಿಯ ವಿಗ್ರಹದ ಮುಂದೆ ಶ್ರೀ ಯಂತ್ರವನ್ನು ಇರಿಸಿ. ಕಮಲದ ಹೂವಿನಿಂದ ತಾಯಿಯನ್ನು ಪೂಜಿಸಿ. 


ಇದನ್ನೂ ಓದಿ-Vastu Tips: ಮನೆಗೆ ಶ್ರೆಯೋಭಿವೃದ್ಧಿ ತರುತ್ತದೆ ಈ ವೃಕ್ಷ, ಆದರೆ ವಾಸ್ತು ನಿಯಮಗಳ ಬಗ್ಗೆ ಕಾಳಜಿವಹಿಸಿ


ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ತಾಯಿಯ ಪಾದಗಳಿಗೆ ಕಮಲದ ಹೂವುಗಳನ್ನು ಅರ್ಪಿಸಿ. ತಾಯಿಗೆ ಬತಾಶ, ಶಂಖ, ಕಮಲಗಟ್ಟೆ, ಶಂಖ, ಮಖನಾ ಇತ್ಯಾದಿಗಳನ್ನು ಅರ್ಪಿಸಿ. ಈ ವ್ರತದಲ್ಲಿ ಮಹಾಲಕ್ಷ್ಮಿ ದೇವಿಯ ಎಲ್ಲಾ ಎಂಟು ರೂಪಗಳನ್ನು ಪೂಜಿಸಲಾಗುತ್ತದೆ. ಈ ವ್ರತದ ಪ್ರಭಾವದಿಂದ ಜೀವನದಲ್ಲಿ ಎಂದಿಗೂ ಕೂಡ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ. ಯಶಸ್ಸು, ಕೀರ್ತಿ ಮತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ. 16 ನೇ ದಿನ, ವ್ರತವನ್ನು ಮುಕ್ತಾಯಗೊಳಿಸಲಾಗುತ್ತದೆ. ನಿಮಗೆ 16 ದಿನಗಳ ಕಾಲ ವರವನ್ನು ಮಾಡಲು ಆಗದಿದ್ದರೆ, ನೀವು ಆರಂಭಿಕದ ಮೂರು ದಿನಗಳು ಅಥವಾ ಕೊನೆಯ ಮೂರು ದಿನಗಳವರೆಗೆ ವ್ರತವನ್ನು ಆಚರಿಸಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.