Ear Cleaning Tips: ನಿಮ್ಮ ಕಿವಿಯನ್ನು ಕ್ಲೀನ್ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!
How To Clean Ear Wax: ಮ್ಯಾಚ್ ಸ್ಟಿಕ್ ಅಥವಾ ಇನ್ನಾವುದೇ ವಸ್ತುವಿನಿಂದ ಇಯರ್ ವ್ಯಾಕ್ಸ್ ಸ್ವಚ್ಛಗೊಳಿಸಲು ಪ್ರಯತ್ನಿಸಬೇಡಿ. ಇದು ಕಿವಿಯೋಲೆಯನ್ನು ಛಿದ್ರಗೊಳಿಸಿ ತೀವ್ರ ನೋವನ್ನುಂಟು ಮಾಡುತ್ತದೆ.
ನವದೆಹಲಿ: ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ಆದರೆ ಈ ವಿಚಾರದಲ್ಲಿ ಕೆಲವರು ಮತ್ತೆ ಮತ್ತೆ ಕಿವಿ ಕ್ಲೀನ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ ಇದು ತಪ್ಪು. ಕಿವಿ ಗುಗ್ಗೆ (ಇಯರ್ ವ್ಯಾಕ್ಸ್)ಯ ಕೆಲಸ ಬಹಳಷ್ಟಿದೆ ಅನ್ನೋದನ್ನು ತಿಳಿಯಿರಿ. ಈ ಇಯರ್‌ವಾಕ್ಸ್ ಒಂದು ರೀತಿಯ ನೈಸರ್ಗಿಕ ಸೋರಿಕೆಯಾಗಿದೆ.
ಕಿವಿ ಗುಗ್ಗೆಯನ್ನು ಸ್ವಚ್ಛಗೊಳಿಸುವಾಗ ನೀವು ಕೊಂಚ ತಪ್ಪು ಮಾಡಿದ್ರೂ ಅದು ತೀವ್ರ ನೋವನ್ನುಂಟು ಮಾಡುತ್ತದೆ. ಇದಲ್ಲದೇ ಶ್ರವಣ ಶಕ್ತಿಯೂ ಹೋಗಬಹುದು. ಕಿವಿಯಲ್ಲಿ ಇರುವ ಕೊಳೆ ನಮ್ಮ ಕಿವಿಗಳನ್ನು ಆರೋಗ್ಯವಾಗಿರಿಸುತ್ತದೆ. ಕಲ್ಮಶವು ಕಿವಿಯಲ್ಲಿ ಇರುವ ಕೊಳವೆಗಳ ಮೇಲಿನ ಪದರವನ್ನು ಒಣಗಿಸುವುದನ್ನು ತಡೆಯುತ್ತದೆ. ಇದಲ್ಲದೆ ಈ ಕೊಳೆಯು ನೀರು ಮತ್ತು ಧೂಳಿನ ಕಣಗಳನ್ನು ಪ್ರವೇಶಿಸದಂತೆ ತಡೆಯುತ್ತದೆ. ಇದು ನಿಮಗೆ ಸೋಂಕು ಉಂಟುಮಾಡುವುದಿಲ್ಲ. ಕಿವಿಯಲ್ಲಿ ಹೆಚ್ಚು ಕೊಳಕು ಇದ್ದರೆ ಅದನ್ನು ಹೇಗೆ ಎಚ್ಚರಿಕೆಯಿಂದ ಸ್ವಚ್ಛಗೊಳಿಸಬಹುದು ಎಂಬುದರ ಬಗ್ಗೆ ತಿಳಿಯಿರಿ.
ಇದನ್ನೂ ಓದಿ: Chanakya Niti: ಚಾಣಕ್ಯನ ಈ ನೀತಿಗಳನ್ನು ಅನುಸರಿಸಿದರೆ ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ
ಇಯರ್‌ವಾಕ್ಸ್ ಸ್ವಚ್ಛಗೊಳಿಸುವುದು ಹೇಗೆ?
ಕಿವಿಯ ಕೊಳೆ ತಾನಾಗಿಯೇ ಹೊರಬರುತ್ತದೆ. ನಾವು ಆಹಾರ ತಿನ್ನುವಾಗ ಮತ್ತು ಅಗಿಯುವಾಗ, ಕಿವಿಯಲ್ಲಿನ ಕೊಳಕು ನಿಧಾನವಾಗಿ ಕಿವಿ ರಂಧ್ರದ ಕಡೆಗೆ ಬರಲು ಪ್ರಾರಂಭಿಸುತ್ತದೆ. ಒಣಗಿದ ನಂತರ ಈ ಕಲ್ಮಶವು ಕಿವಿಯಿಂದ ಹೊರಬರುತ್ತದೆ. ಕೆಲವೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚು ಕೊಳೆ ಕಿವಿಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಸ್ವಚ್ಛಗೊಳಿಸಲು ಸರಿಯಾದ ಮಾರ್ಗ ಯಾವುದು ಎಂದು ತಿಳಿಯುವುದು ಮುಖ್ಯ. ಮ್ಯಾಚ್ ಸ್ಟಿಕ್ ಅಥವಾ ಇನ್ನಾವುದೇ ವಸ್ತುವಿನಿಂದ ಇಯರ್ ವ್ಯಾಕ್ಸ್ ಸ್ವಚ್ಛಗೊಳಿಸಲು ಪ್ರಯತ್ನಿಸಬೇಡಿ. ಇದು ಕಿವಿಯೋಲೆಯನ್ನು ಛಿದ್ರಗೊಳಿಸಿ ತೀವ್ರ ನೋವನ್ನುಂಟು ಮಾಡುತ್ತದೆ.
ಕೆಲವರು ಇಯರ್‌ವಾಕ್ಸ್ ಅನ್ನು ಹತ್ತಿ ಮೊಗ್ಗುಗಳಿಂದ ಸ್ವಚ್ಛಗೊಳಿಸುತ್ತಾರೆ. ಆದರೆ ಕಿವಿ ಕಾಲುವೆಗಳನ್ನು ಹತ್ತಿ ಮೊಗ್ಗುಗಳಿಂದ ಸ್ವಚ್ಛಗೊಳಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ಬಗ್ಗೆ ಹತ್ತಿ ಮೊಗ್ಗುಗಳ ಪ್ಯಾಕೆಟ್‌ನಲ್ಲಿಯೂ ಸಹ ವಿವರಿಸಲಾಗಿರುತ್ತದೆ.
ಇಯರ್‌ವಾಕ್ಸ್ ಸ್ವಚ್ಛಗೊಳಿಸಲು ಕೆಲವರು ಇಯರ್ ಕ್ಯಾಂಡಲ್‌ಗಳ ಸಹಾಯವನ್ನೂ ತೆಗೆದುಕೊಳ್ಳುತ್ತಾರೆ. ಆದರೆ ಇಯರ್ ವ್ಯಾಕ್ಸ್ ಅನ್ನು ಇಯರ್ ಕ್ಯಾಂಡಲ್ ನಿಂದ ಶುಚಿಗೊಳಿಸುವುದು ಅಪಾಯಕಾರಿ. ಇದರಿಂದ ನಿಮ್ಮ ಕಿವಿ ಮತ್ತು ಮುಖ ಸುಟ್ಟುಹೋಗುವ ಅಪಾಯವಿರುತ್ತದೆ.
ಕಿವಿಗಳನ್ನು ಸ್ವಚ್ಛಗೊಳಿಸಲು ನೀವು ಇಯರ್ ಡ್ರಾಪ್ಸ್ ಸಹಾಯ ಸಹ ತೆಗೆದುಕೊಳ್ಳಬಹುದು. ಇಯರ್ ಡ್ರಾಪ್ಸ್ ನಿಮ್ಮ ಕಿವಿಯ ಗುಗ್ಗೆಯನ್ನು ತೇವಗೊಳಿಸುತ್ತದೆ ಮತ್ತು ತಾನಾಗಿಯೇ ಹೊರಬರಲು ಪ್ರಾರಂಭಿಸುತ್ತದೆ. ಆದರೆ ಅನೇಕ ಇಯರ್ ಡ್ರಾಪ್ಸ್ ಸೋಡಿಯಂ ಕ್ಲೋರೈಡ್ ಅಥವಾ ಸೋಡಿಯಂ ಬೈಕಾರ್ಬನೇಟ್ ಹೊಂದಿರುತ್ತವೆ. ಇದು ಕಿವಿಯ ಸೂಕ್ಷ್ಮ ಚರ್ಮವನ್ನು ಹಾನಿಗೊಳಿಸುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ಬಾದಾಮಿ ಮತ್ತು ಆಲಿವ್ ಎಣ್ಣೆಯು ಇಯರ್‌ವಾಕ್ಸ್ ಸ್ವಚ್ಛಗೊಳಿಸಲು ಪರಿಣಾಮಕಾರಿ. ಕಿವಿಯ ಗುಗ್ಗೆಯು ಎಣ್ಣೆಯಿಂದ ತೇವವಾಗುತ್ತದೆ ಮತ್ತು ಕಿವಿಯಿಂದ ಹೊರಬರುತ್ತದೆ. ಆದರೆ ಎಣ್ಣೆಯನ್ನು ಕಿವಿಗೆ ಹಾಕುವ ಮೊದಲು ಎಣ್ಣೆಯ ಉಷ್ಣತೆಯು ನಿಮ್ಮ ದೇಹದ ಉಷ್ಣತೆಯನ್ನು ಮೀರಿರಬಾರದು ಎಂಬುದನ್ನು ನೆನಪಿನಲ್ಲಿಡಿ.
ಕಿವಿಯನ್ನು ಸ್ವಚ್ಛಗೊಳಿಸಲು ವೈದ್ಯರ ಸಲಹೆಯನ್ನು ಸಹ ನೀವು ತೆಗೆದುಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ವೈದ್ಯರು ನೀರಿನಿಂದ ಕಿವಿಯನ್ನು ಸ್ವಚ್ಛಗೊಳಿಸುತ್ತಾರೆ. ಈ ಪ್ರಕ್ರಿಯೆಯನ್ನು ಸಿರಿಂಗಿಂಗ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಕಿವಿ ಕಾಲುವೆಗಳ ಮೇಲೆ ನೀರು ಸಿಂಪಡಿಸಲಾಗುತ್ತದೆ. ಆದರೆ ಇದರಿಂದ ಕಿವಿಯ ಪರದೆಗೆ ಹಾನಿಯಾಗುವ ಅಪಾಯವಿರುತ್ತದೆ.
ಇದನ್ನೂ ಓದಿ: Special Tea: ತೂಕ ಇಳಿಕೆಯಿಂದ ಹಿಡಿದು ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಈ ಟೀ ರಾಮಬಾಣ ಔಷಧಿ
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇಲ್ಲಿನ ಸಲಹೆಗಳನ್ನು ಪಾಲಿಸುವ ಮೊದಲು ನೀವು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.