ಬೆಂಗಳೂರು : ಇನ್ನೇನು ಎರಡು ದಿನಗಳಲಿ ಕ್ರಿಸ್ ಮಸ್ ಸಡಗರ. ಅದು ಮುಗಿಯುತ್ತಿದ್ದಂತೆಯೇ ಹೊಸ ವರ್ಷದ ಸಂಭ್ರಮಾಚರಣೆ. ಈ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಪಾರ್ಟಿ ಮಾಡುತ್ತಾರೆ. ಹೀಗೆ ಪಾರ್ಟಿ ಮಾಡುವಾಗ ಮನೆಯಲ್ಲಿಯೇ ಸುಲಭವಾಗಿ ಸ್ಪೆಷಲ್ ಅಡುಗೆಗಳನ್ನು ಮಾಡಿದರೆ ತಿನ್ನಲೂ ರುಚಿ. ಖರ್ಚು ಕೂಡಾ ಕಡಿಮೆ. ಅಲ್ಲದೆ, ರುಚಿಯೊಂದಿಗೆ ಶುಚಿಯತ್ತ ಕೂಡಾ ಸಂಪೂರ್ಣ ಗಮನ ಹರಿಸಬಹುದು.  ಈ ಸಂದರ್ಭಗಳಲ್ಲಿ ಚಿಕನ್ ಐಟಂ ಮಾಡಲಾಗುತ್ತದೆ. ಇಂದು ನಾವು ಮನೆಯಲ್ಲಿಯೇ ಸುಲಭವಾಗಿ ಚಿಕನ್ ಟಿಕ್ಕಾ ತಯಾರಿಸುವ ರೆಸಿಪಿ ಹಂಚಿಕೊಳ್ಳುತ್ತಿದ್ದೇವೆ. ಈ ರೆಸಿಪಿ ಮಾಡುವ ವಿಧಾನವೂ ಸರಳ. ತಗಲುವ ಖರ್ಚು, ಸಮಯ ಎರಡೂ ಕಡಿಮೆ. 


COMMERCIAL BREAK
SCROLL TO CONTINUE READING

ಚಿಕನ್ ಟಿಕ್ಕಾ ಮಸಾಲಾ ತಯಾರಿಸಲು ಬೇಕಾಗುವ ಸಾಮಗ್ರಿಗಳು : 
2  ಚಿಕನ್ ಬ್ರೆಸ್ಟ್ (ನೆನಪಿರಲಿ ಇದು ವಿದ್ ಸ್ಕಿನ್ ಇರಲಿ) 
3 ಟೀಸ್ಪೂನ್ ಸಿಂಗಲ್ ಕ್ರೀಮ್
2 ಟೀಸ್ಪೂನ್ - ಕರಿ ಅಥವಾ ತಂದೂರಿ ಪೇಸ್ಟ್
2 ಟೀಸ್ಪೂನ್ - ಮೊಸರು
3 ಟೀಸ್ಪೂನ್ ಆಲಿವ್ ಎಣ್ಣೆ
2  ಪಲಾವ್ ಎಲೆಗಳು
1 ಮಧ್ಯಮ ಗಾತ್ರದ ಈರುಳ್ಳಿ
200 ಗ್ರಾಂ - ಟೊಮೆಟೊ ಹಣ್ಣು 
1/2 ಟೀಸ್ಪೂನ್ ಜೀರಿಗೆ ಪುಡಿ 
1/2 ಟೀಸ್ಪೂನ್ ಕೊತ್ತಂಬರಿ ಪುಡಿ 
1 /2 ಟೀಸ್ಪೂನ್ ಗರಂ ಮಸಾಲಾ
2 ಟೀಸ್ಪೂನ್ ಶುಂಠಿ
2 ಬೆಳ್ಳುಳ್ಳಿ 
2 ಮಧ್ಯಮ ಗಾತ್ರದ ಕೆಂಪು ಮೆಣಸಿನಕಾಯಿಗಳು
1/4 ಟೀಸ್ಪೂನ್ ಅರಿಶಿನ
1/4 ಟೀಸ್ಪೂನ್ ಕೆಂಪುಮೆಣಸು
1/4 ಟೀಸ್ಪೂನ್ ಉಪ್ಪು


ಇದನ್ನೂ ಓದಿ : Weight Loss: ದಿನನಿತ್ಯ ಒಂದು ಕಪ್‌ ಈ ಟೀ ಕುಡಿಯಿರಿ, ಕೆಲವೇ ದಿನಗಳಲ್ಲಿ ತೂಕ ಇಳಿಸಿಕೊಳ್ಳಿ


ಚಿಕನ್  ಟಿಕ್ಕಾ ಮಸಾಲಾ ತಯಾರಿಸುವ ವಿಧಾನ : 
-ಮೊದಲಿಗೆ ತಂದೂರಿ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ  ಬೀಟ್ ಮಾಡಿಕೊಳ್ಳಿ. 
-ಈಗ ಚಿಕನ್ ತುಂಡುಗಳನ್ನು ಆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ.  ನಂತರ ಈ ಮಿಶ್ರಣವನ್ನು ಫ್ರಿಜ್ ನಲ್ಲಿ 2 ಗಂಟೆಗಳ ಕಾಲ ಇರಿಸಿ.
- ಈಗ ಒವನ್  ಅನ್ನು 180 ಡಿಗ್ರಿ ಸೆಲ್ಸಿಯಸ್ ಗೆ ಸೇಟ್ ಮಾಡಿ ಚಿಕನ್ ಅನ್ನು 10 ನಿಮಿಷಗಳವರೆಗೆ ಬೇಕ್ ಮಾಡಿ. 
-ಈಗ ಟೊಮೆಟೊ, ಶುಂಠಿ, ಬೆಳ್ಳುಳ್ಳಿ ಮತ್ತು  ಕ್ರೀಂ ಹಾಕಿ ರುಬ್ಬಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. 
- ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ,  ಪಲಾವ್ ಎಲೆ ಮತ್ತು ಈರುಳ್ಳಿ ಹಾಕಿ  ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಮಿಶ್ರಣಕ್ಕೆ ಮೆಣಸಿನಕಾಯಿ, ಅರಿಶಿನ, ಉಪ್ಪು, ಜೀರಿಗೆ, ಕೊತ್ತಂಬರಿ, ಗರಂ ಮಸಾಲಾ ಪುಡಿಗಳನ್ನು ಸೇರಿಸಿ.
- ಈಗ ಮಸಾಲೆಗೆ ಚಿಕನ್ ಸೇರಿಸಿ ಫ್ರೈ ಮಾಡಿ. 5 ನಿಮಿಷಗಳ ನಂತರ ಟೊಮೆಟೊ ಮತ್ತು ಕ್ರೀಮ್ ಮಿಶ್ರಣವನ್ನು ಸೇರಿಸಿ ಮಂದ ಉರಿಯಲ್ಲಿ ಬೇಯಿಸಿ.
- ಮಸಾಲೆ ಕೆಂಪಾಗಿ ಕ್ರೀಂ ಕಾಣಿಸಲು ಆರಂಭವಾದಾಗ ನೀರು ಸೇರಿಸಿ ಮತ್ತೆ  1 ನಿಮಿಷ ಬೇಯಿಸಿ. ನೀರು ಸೇರಿಸುವಾಗ ಕರಿ ದಪ್ಪವಾಗಿರಬೇಕು ಎನ್ನುವುದು ನೆನಪಿರಲಿ.  
- ಕೊನೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿ ಗ್ಯಾಸ್ ನಿಂದ ಕೆಳಗಿಳಿಸಿ. 


ಇದನ್ನೂ ಓದಿ : Heart Attack: ಚಳಿಗಾಲದಲ್ಲಿ ಹೃದಯಾಘಾತದಿಂದ ಪಾರಾಗಲು ಈ ತರಕಾರಿ ಸೇವಿಸಿ


ಇಷ್ಟಾದ ಮೇಲೆ ನೀವು ಹೊಟೇಲ್ ನಲ್ಲಿ ಸವಿಯುವ ಚಿಕನ್ ಟಿಕ್ಕಾ ಮಸಾಲ ಮನೆಯಲ್ಲಿಯೇ ರೆಡಿಯಾಗಿರುತ್ತದೆ. ನಿಮಗಿಷ್ಟವಾದ ಕಾಂಬಿನೇಶನ್ ನೊಂದಿಗೆ ತಿನ್ನಲು ಬಡಿಸಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.