Honey Purity Check: ಸಿಹಿ ತಿನಿಸುಗಳನ್ನು ತಯಾರಿಸಲು ಸಕ್ಕರೆಗೆ ಅತ್ಯುತ್ತಮ ಪರ್ಯಾಯ ಎಂದರೆ ಜೇನು ತುಪ್ಪ. ಆರೋಗ್ಯದ ಗಣಿ ಎಂದು ಪರಿಗಣಿಸಲಾಗಿರುವ ಜೇನುತುಪ್ಪ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಾಗಿಯೇ, ಆರೋಗ್ಯ ತಜ್ಞರು ನಿಯಮಿತವಾಗಿ ಜೇನುತುಪ್ಪ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ, ಪ್ರಸ್ತುತ ಈ ಕಲಬೆರಕೆ ಯುಗದಲ್ಲಿ ನೀವು ಸೇವಿಸುವ ಜೇನುತುಪ್ಪ ಎಷ್ಟು ಶುದ್ಧವಾಗಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ... ನೀವು ಸೇವಿಸುತ್ತಿರುವ ಜೇನುತುಪ್ಪ ಅಸಲಿಯೋ ಅಥವಾ ಕಲಬೆರಕೆಯೋ ಎಂದು ನೀವು ಸುಲಭವಾಗಿ ಪತ್ತೆ ಹಚ್ಚಬಹುದು.


COMMERCIAL BREAK
SCROLL TO CONTINUE READING

ಈ ಸರಳ ತಂತ್ರಗಳ ಮೂಲಕ ಜೇನುತುಪ್ಪದ ಶುದ್ಧತೆಯನ್ನು ಸುಲಭವಾಗಿ  ಪರಿಶೀಲಿಸಿ:
* ಬ್ರೆಡ್ ಮೂಲಕ ಪತ್ತೆ ಹಚ್ಚಿ: 

ನೀವು ನಿತ್ಯ ಸೇವಿಸುವ ಬ್ರೆಡ್ ಕೂಡ ನೀವು ಬಳಸುತ್ತಿರುವ ಜೇನುತುಪ್ಪ ಅಸಲಿಯೋ/ನಕಲಿಯೋ ಎಂದು ಸುಲಭವಾಗಿ ತಿಳಿಸುತ್ತದೆ. ಇದಕ್ಕಾಗಿ ಜೇನುತುಪ್ಪವನ್ನು ಬ್ರೆಡ್ ಮೇಲೆ ಹಾಕಿ ಚೆನ್ನಾಗಿ ಸ್ಪ್ರೆಡ್ ಮಾಡಬೇಕು. ಜೇನುತುಪ್ಪವನ್ನು ಬ್ರೆಡ್‌ಗೆ ಹಚ್ಚಿದ ತಕ್ಷಣ ಅದು ಗಟ್ಟಿಯಾದರೆ ಅದು ಶುದ್ಧವಾದ ಜೇನುತುಪ್ಪ ಎಂದರ್ಥ.
 
ಇದನ್ನೂ ಓದಿ- ಇದೇ ನೋಡಿ ಮಧುಮೇಹಿಗಳೂ ಸಹ ಮನಃಪೂರ್ತಿ ಸೇವಿಸಬಹುದಾದ ಸಿಹಿ ಹಣ್ಣು


* ಬೆರಳಿನಿಂದ ಈ ರೀತಿ ಪರೀಕ್ಷಿಸಿ:
ಜೇನು ತುಪ್ಪದ ಶುದ್ಧತೆಯನ್ನು ನಿಮ್ಮ ಬೆರಳಿನ ಸಹಾಯದಿಂದಲೂ ಪರೀಕ್ಷಿಸಬಹುದು. ಇದಕ್ಕಾಗಿ ಒಂದೇ ಒಂದು ಜೇನುತುಪ್ಪವನ್ನು ತೆಗೆದುಕೊಂಡು ನೀವು ಸಕ್ಕರೆ ಪಾಕವನ್ನು ಪರೀಕ್ಷಿಸುವಂತೆ ಪರೀಕ್ಷಿಸಿ. ಒಂದೊಮ್ಮೆ ಜೇನುತುಪ್ಪ ದಪ್ಪವಾಗಿದ್ದರೆ ಅದು ನಕಲಿ ಜೇನುತುಪ್ಪ. ವಾಸ್ತವವಾಗಿ, ಅಸಲಿ ಜೇನುತುಪ್ಪವು ಜಿಗುಟಾಗಿ ತೆಳುವಾಗಿರುತ್ತದೆ. 


* ಬಿಸಿ ನೀರಿನ ಪರೀಕ್ಷೆ:
ಗಾಜಿನ ಲೋಟದಲ್ಲಿ ಒಂದು ಲೋಟ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಹಾಕಿ. ಜೇನು ತುಪ್ಪ ಅಸಲಿಯಾಗಿದ್ದರೆ ಅದು ಲೋಟದ ತಳಭಾಗದಲ್ಲಿ ಶೇಖರಗೊಳ್ಳುತ್ತದೆ. ಒಂದೊಮ್ಮೆ ಅದು ಕಲಬೆರಕೆ ಜೇನುತುಪ್ಪವಾಗಿದ್ದರೆ ಸ್ವಲ್ಪ ಸಮಯದಲ್ಲಿಯೇ ನೀರಿನಲ್ಲಿ ಕರಗುತ್ತದೆ. 


ಇದನ್ನೂ ಓದಿ- Obesity: 2035ರ ವೇಳೆಗೆ ವಿಶ್ವದ ಅರ್ಧದಷ್ಟು ಜನರು ಬೊಜ್ಜು ಹೊಂದಿರುತ್ತಾರೆ!


* ಅಗ್ನಿ ಪರೀಕ್ಷೆ:
ಅಗ್ನಿ ಪರೀಕ್ಷೆಯ ಮುಖಾಂತರ ನೀವು ಜೇನು ತುಪ್ಪದ ಶುದ್ಧತೆಯನ್ನು ಪರಿಶೀಲಿಸಬಹುದು. ಇದಕ್ಕಾಗಿ, ಮೊದಲು ಹತ್ತಿ ಉಂಡೆಗಳನ್ನು ತೆಗೆದುಕೊಂಡು ಅದನ್ನು ಜೇನುತುಪ್ಪದಲ್ಲಿ ಅದ್ದಿ ಬಳಿಕ ಬೆಂಕಿಗೆ ಒಡ್ಡಿ. ಒಂದೊಮ್ಮೆ ಹತ್ತಿಗೆ ಬೆಂಕಿ ಹೊತ್ತಿಕೊಂಡರೆ ಅದು ಶುದ್ಧವಾದ ಜೇನುತುಪ್ಪ. ಇಲ್ಲವಾದರೆ, ಅದು ಅಸಲಿ ಜೇನುತುಪ್ಪವಲ್ಲ ಎಂದು ಅರ್ಥ ಮಾಡಿಕೊಳ್ಳಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.