ಹಲ್ಲುಗಳ ಮೇಲಿನ ಹಳದಿ ಕಲೆ ಮತ್ತು ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದೇ ಮನೆ ಮದ್ದು!
ಹಲ್ಲಿನಲ್ಲಿರುವ ಹಳದಿ ಕಲೆ ಮತ್ತು ಬಾಯಿಯ ದುರ್ವಾಸನೆ ಹೋಗಲಾಡಿಸಲು ಹೆಚ್ಚು ಶ್ರಮ ಪಡಬೇಕಿಲ್ಲ. ಸರಳ ಮನೆ ಮದ್ದಿನ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಬೆಂಗಳೂರು : ಮುತ್ತಿನಂತೆ ಹೊಳೆಯುವ ಹಲ್ಲುಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಲ್ಲುಗಳನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಅವುಗಳ ಮೇಲೆ ಹಳದಿ ಪದರ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಇದು ಬಾಯಿಯ ಕೆಟ್ಟ ವಾಸನೆಗೂ ಕಾರಣವಾಗುತ್ತದೆ. ಇದರಿಂದಾಗಿ ಜನರು ನಿಮ್ಮೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಆದ್ದರಿಂದ, ಒರಲ್ ಹೆಲ್ತ್ ಅನ್ನು ಎಂದಿಗೂ ನಿರ್ಲಕ್ಷಿಸಬಾರದು. ಹಲ್ಲಿನಲ್ಲಿರುವ ಹಳದಿ ಕಲೆ ಮತ್ತು ಬಾಯಿಯ ದುರ್ವಾಸನೆ ಹೋಗಲಾಡಿಸಲು ಹೆಚ್ಚು ಶ್ರಮ ಪಡಬೇಕಿಲ್ಲ. ಸರಳ ಮನೆ ಮದ್ದಿನ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಹಳದಿ ಹಲ್ಲುಗಳನ್ನು ತೆಗೆದುಹಾಕಲು ಕಲ್ಲು ಉಪ್ಪು:
ರಾಕ್ ಸಾಲ್ಟ್ : ದಂತ ಸಮಸ್ಯೆಗಳಿಂದ ಪರಿಹಾರ ಪಡೆಯಲು ಕಲ್ಲು ಉಪ್ಪನ್ನು ಬಳಸಬಹುದು. ಹಲ್ಲಿನ ಸಮಸ್ಯೆಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.
ಬೇಕಾಗುವ ಪದಾರ್ಥಗಳು:
1 ಟೀಚಮಚ ಅಡಿಗೆ ಸೋಡಾ
1 ಟೀಚಮಚ ಬೆಂಟೋನೈಟ್ ಕ್ಲೇ ಪೌಡರ್
1 ಟೀಚಮಚ ಕ್ಯಾಲ್ಸಿಯಂ ಪುಡಿ
½ ಟೀಚಮಚ ಕಲ್ಲು ಉಪ್ಪು
½ ಟೀಚಮಚ ಪುದೀನ ಮತ್ತು ದಾಲ್ಚಿನ್ನಿ ಪುಡಿ
ಇದನ್ನೂ ಓದಿ : ಪ್ರತಿದಿನ ರಾತ್ರಿ ಹೊಕ್ಕಳಿಗೆ ಈ ಎಣ್ಣೆಯನ್ನು ಹಚ್ಚಿದರೆ ಏಳೇ ದಿನಗಳಲ್ಲಿ ಬಿಳಿ ಕೂದಲು ಕಪ್ಪಾಗುವುದು !
ಮಲ್ಟಿ ಪೌಡರ್ ರೆಸಿಪಿ:
ಮೊದಲು, ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾ ಮತ್ತು ಉಪ್ಪನ್ನು ಹಾಕಿ. ಈಗ ಉಳಿದ ಪದಾರ್ಥಗಳನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದನ್ನು ಜಾರ್ ನಲ್ಲಿ ಸಂಗ್ರಹಿಸಿ.
ಹೊಳೆಯುವ ಹಲ್ಲುಗಳಿಗಾಗಿ ಇದನ್ನು ಕೂಡಾ ಪ್ರಯತ್ನಿಸಿ:
ಕಿತ್ತಳೆ ಸಿಪ್ಪೆ:
ಕಿತ್ತಳೆ ಸಿಪ್ಪೆಯ ಬಿಳಿ ಭಾಗವು ವಿಟಮಿನ್ ಸಿ, ಪೆಕ್ಟಿನ್, ಲಿಮೋನೆನ್, ಗ್ಲುಕೋನೇಟ್ ಮತ್ತು ಕರಗುವ ಫೈಬರ್ ಅನ್ನು ಹೊಂದಿರುತ್ತದೆ. ಇದು ಹಲ್ಲುಗಳನ್ನು ನೈಸರ್ಗಿಕವಾಗಿ ಬಿಳುಪಾಗಿಸಲು ಸಹಾಯ ಮಾಡುತ್ತದೆ.
ಬಳಸುವುದು ಹೇಗೆ?
ಕಿತ್ತಳೆ ಸಿಪ್ಪೆಯ ಬಿಳಿ ಭಾಗವನ್ನು ನಿಮ್ಮ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಹಲ್ಲುಜ್ಜುವ ಮೊದಲು 3-4 ನಿಮಿಷಗಳ ಕಾಲ ನಿಮ್ಮ ಹಲ್ಲುಗಳ ಮೇಲೆ ಅದರ ರಸವನ್ನು ಬಿಡಿ. ಇದು ಹಲ್ಲುಗಳಿಂದ ಫ್ಲೆಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಹೇರ್ ಕಂಡೀಷನರ್ ಹಾಕುವಾಗ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ಇರಲಿ
ಸಾಸಿವೆ ಎಣ್ಣೆ ಮತ್ತು ಉಪ್ಪು:
ಹಲ್ಲುಗಳನ್ನು ಸ್ವಚ್ಛಗೊಳಿಸಲು, ಅರ್ಧ ಚಮಚ ಸಾಸಿವೆ ಎಣ್ಣೆಯನ್ನು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ ಹಲ್ಲುಗಳನ್ನು ಚೆನ್ನಾಗಿ ಮಸಾಜ್ ಮಾಡಿ. ಬೆರಳುಗಳಿಂದ ಹಲ್ಲು ಮತ್ತು ಒಸಡುಗಳ ಮೇಲೆ ಉಜ್ಜಬಹುದು ಅಥವಾ ಬ್ರಷ್ ಕೂಡ ಬಳಸಬಹುದು. ಸುಮಾರು 4-5 ನಿಮಿಷಗಳ ಕಾಲ ನಿಮ್ಮ ಹಲ್ಲುಗಳನ್ನು ಉಜ್ಜಿಕೊಳ್ಳಿ ಮತ್ತು ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
ಬಾಳೆಹಣ್ಣಿನ ಸಿಪ್ಪೆ:
ಬಾಳೆಹಣ್ಣು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಅದರ ಚರ್ಮವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬಾಳೆಹಣ್ಣಿನ ಸಿಪ್ಪೆಯನ್ನು ಹಲ್ಲುಗಳನ್ನು ಬಿಳುಪುಗೊಳಿಸಲು ಬಳಸಬಹುದು. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ಪ್ರತಿದಿನ 1 ಅಥವಾ 2 ನಿಮಿಷಗಳ ಕಾಲ ಹಲ್ಲುಗಳ ಮೇಲೆ ಉಜ್ಜಬೇಕು. ನಂತರ ಬ್ರಶ್ ಮಾಡಬೇಕು.
ಇದನ್ನೂ ಓದಿ : ಮೊಟ್ಟೆಗಳನ್ನು ಬಹಳ ದಿನ ಇಟ್ಟುಕೊಳ್ಳಬೇಕೇ..? ಈ ವಿಧಾನಗಳಲ್ಲಿ ಮೊಟ್ಟೆಗಳನ್ನು ಸಂಗ್ರಹಿಸಿ, ಅವು ಹಾಳಾಗುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews