ನವದೆಹಲಿ: 2021ರ ಕೊನೆಯ ಸೂರ್ಯಗ್ರಹಣ ಶನಿವಾರ(ಡಿ.4)ದಂದು ಸಂಭವಿಸಿದೆ. ಇದೀಗ ಮುಂದಿನ ಸೂರ್ಯ-ಚಂದ್ರಗ್ರಹಣ(Solar Eclipse 2022) ಯಾವಾಗ ಸಂಭವಿಸಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಈ ವರ್ಷದಂತೆ ಮುಂದಿನ ವರ್ಷವೂ 4 ಗ್ರಹಣಗಳು ಸಂಭವಿಸಲಿವೆ. ಮುಂದಿನ ವರ್ಷ 2 ಸೂರ್ಯಗ್ರಹಣ ಹಾಗೂ 2 ಚಂದ್ರಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲಿ ಕೆಲವು ಭಾರತದಲ್ಲಿ ಗೋಚರಿಸುತ್ತವೆ ಮತ್ತು ಕೆಲವು ಗೋಚರಿಸುವುದಿಲ್ಲ. ಗ್ರಹಣದ ಸಂದರ್ಭದಲ್ಲಿ ಯಾವ ಪರಿಸ್ಥಿತಿ ಇರುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಮೊದಲ ಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ


ಮೊದಲ ಸೂರ್ಯಗ್ರಹಣ: 2022ರ ಮೊದಲ ಗ್ರಹಣವು ಸೂರ್ಯಗ್ರಹಣ(Solar Eclipse)ವಾಗಿರುತ್ತದೆ. ಈ ಸೂರ್ಯಗ್ರಹಣ ಏಪ್ರಿಲ್ 30ರಂದು ನಡೆಯಲಿದೆ. ಆದಾಗ್ಯೂ ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ದರಿಂದ ಇದರ ಸೂತಕದ ಅವಧಿಯು ಮಾನ್ಯವಾಗುವುದಿಲ್ಲ. ಈ ಗ್ರಹಣವು ವೃಷಭ ರಾಶಿಯಲ್ಲಿ ನಡೆಯುತ್ತದೆ, ಆದರೆ ಇದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆಯೂ ಇರಲಿದೆ. 2022ರ ಮೊದಲ ಸೂರ್ಯಗ್ರಹಣವು ದಕ್ಷಿಣ ಅಮೇರಿಕಾ, ಪಶ್ಚಿಮ-ದಕ್ಷಿಣ ಅಮೆರಿಕ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮತ್ತು ಅಂಟಾರ್ಕ್ಟಿಕ್ ಸಾಗರದಲ್ಲಿ ಗೋಚರಿಸುತ್ತದೆ.


ಇದನ್ನೂ ಓದಿ: Horoscope: ದಿನಭವಿಷ್ಯ 05-12-2021 Today Astrology


ಮೊದಲ ಚಂದ್ರಗ್ರಹಣ: ವರ್ಷದ ಮೊದಲ ಚಂದ್ರಗ್ರಹಣ(Lunar Eclipse)ವು 15 ಮೇ 2022ರಂದು ಸಂಭವಿಸುತ್ತದೆ. ಅಂದರೆ 30 ಏಪ್ರಿಲ್ 2022ರ ಸೂರ್ಯಗ್ರಹಣದ 15 ದಿನಗಳ ನಂತರ. ಈ ಪೂರ್ಣ ಚಂದ್ರಗ್ರಹಣ ವೃಶ್ಚಿಕ ರಾಶಿಯಲ್ಲಿ ನಡೆಯಲಿದ್ದು, ಭಾರತದಲ್ಲಿಯೂ ಗೋಚರಿಸಲಿದೆ. ಇದಲ್ಲದೆ ಈ ಚಂದ್ರಗ್ರಹಣವು ನೈಋತ್ಯ ಯುರೋಪ್, ನೈಋತ್ಯ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಅಂಟಾರ್ಕ್ಟಿಕಾ ಮತ್ತು ಅಟ್ಲಾಂಟಿಕ್ ಮಹಾಸಾಗರದ ಬಹುತೇಕ ಭಾಗಗಳಲ್ಲಿ ಗೋಚರಿಸುತ್ತದೆ.


2ನೇ ಸೂರ್ಯಗ್ರಹಣ: 2022ರ 2ನೇ ಸೂರ್ಯಗ್ರಹಣ ಅಕ್ಟೋಬರ್ 25ರಂದು ನಡೆಯಲಿದೆ. ಇದು ಕೂಡ ಭಾಗಶಃ ಸೂರ್ಯಗ್ರಹಣವಾಗಿದ್ದು, ಹಿಂದಿನ ಚಂದ್ರಗ್ರಹಣದಂತೆ ವೃಶ್ಚಿಕ ರಾಶಿಯಲ್ಲಿಯೂ ಇರುತ್ತದೆ. ಈ ಸೂರ್ಯಗ್ರಹಣ ಭಾರತದಲ್ಲಿಯೂ ಗೋಚರಿಸುವುದಿಲ್ಲ. ಈ ಸೂರ್ಯಗ್ರಹಣ ಯುರೋಪ್, ನೈಋತ್ಯ ಏಷ್ಯಾ, ಈಶಾನ್ಯ ಆಫ್ರಿಕಾ ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಗೋಚರಿಸುತ್ತದೆ.


2ನೇ ಚಂದ್ರಗ್ರಹಣ : ವರ್ಷದ ಕೊನೆಯ ಮತ್ತು 2ನೇ ಚಂದ್ರಗ್ರಹಣ ನವೆಂಬರ್ 7-8 ರಂದು ನಡೆಯಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ವೃಷಭ ರಾಶಿಯಲ್ಲಿ ಇರುತ್ತದೆ. ಭಾರತದ ಕೆಲವು ಭಾಗಗಳಲ್ಲಿ ಇದನ್ನು ಕಾಣಬಹುದು. ಇದಲ್ಲದೆ ಈಶಾನ್ಯ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾದ ಹೆಚ್ಚಿನ ಭಾಗಗಳು, ಪೆಸಿಫಿಕ್, ಅಟ್ಲಾಂಟಿಕ್, ಆರ್ಕ್ಟಿಕ್, ಅಂಟಾರ್ಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿಯೂ ಸಹ ಕಾಣಬಹುದು.


ಇದನ್ನೂ ಓದಿ: Personality by Zodiac Sign: ಈ 4 ರಾಶಿಯ ಹುಡುಗಿಯರು ಹುಡುಗರಿಗೆ ಅತ್ಯಂತ ಆಕರ್ಷಣೆಯಾಗಿರುತ್ತಾರೆ


ಗ್ರಹಣಗಳಿಂದ ದೊಡ್ಡ ಪರಿಣಾಮ


ಮುಂದಿನ ವರ್ಷ ಸಂಭವಿಸಲಿರುವ 4 ಗ್ರಹಣ(4 Eclipses)ಗಳಲ್ಲಿ 2 ಗ್ರಹಣಗಳು ವೃಷಭ ರಾಶಿಯಲ್ಲಿ ಮತ್ತು 2 ಗ್ರಹಣಗಳು ವೃಶ್ಚಿಕ ರಾಶಿಯಲ್ಲಿ ಬರಲಿವೆ. ಆದ್ದರಿಂದ ಈ ಗ್ರಹಣಗಳ ಗರಿಷ್ಠ ಪರಿಣಾಮವು ವೃಷಭ ಮತ್ತು ವೃಶ್ಚಿಕ ರಾಶಿಯವರ ಮೇಲೂ ಇರುತ್ತದೆ. ಇದರಲ್ಲಿ ಮೊದಲ ಸೂರ್ಯಗ್ರಹಣವು 30 ಏಪ್ರಿಲ್ 2022ರಂದು ವೃಷಭ ರಾಶಿಯಲ್ಲಿ ಸಂಭವಿಸಲಿದೆ ಮತ್ತು ಶನಿಯು ಈ ತಿಂಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಆದ್ದರಿಂದ ಈ ಎರಡೂ ದೊಡ್ಡ ಜ್ಯೋತಿಷ್ಯ ಬದಲಾವಣೆಗಳು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.