ಕೂದಲುದುರುವಿಕೆ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ನಿಮ್ಮ ಮನೆಯಲ್ಲಿರುವ ಈ ಪದಾರ್ಥಗಳು!
Hair Fall Treatment At Home: ಇತ್ತೀಚಿನ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಒಂದು ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ಆದರೆ, ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
Hair Loss Treatment: ಸುಂದರ್ ಕೇಶರಾಶಿಯನ್ನು ಹೊಂದಬೇಕು ಎಂಬುದು ಪ್ರತಿ ಹೆಣ್ಣು ಮಕ್ಕಳ ಬಯಕೆ ಆಗಿರುತ್ತದೆ. ಆದರೆ, ಬದಲಾದ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ ಆಗಿದೆ. ಆದಾಗ್ಯೂ, ನೀವು ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೂದಲು ಉದುರುವಿಕೆಯಿಂದ ಪರಿಹಾರ ಪಡೆಯಬಹುದು.
ಕೂದಲುದುರುವಿಕೆ ಸಮಸ್ಯೆಗೆ ನೈಸರ್ಗಿಕ ಪರಿಹಾರ (Natural Remedy For Hair Fall) ನೀಡಬಲ್ಲ ಪರಿಣಾಮಕಾರಿ ಪದಾರ್ಥಗಳೆಂದರೆ...
* ನೆಲ್ಲಿಕಾಯಿ:
ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಹೇರಳವಾಗಿದ್ದು ಇದರ ಬಳಕೆಯಿಂದ ಕೂದಲಿನ ಕಿರುಚೀಲಗಳಿಗೆ ಪೋಷಕಾಂಶ ದೊರೆತು ಕೂದಲುದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
* ಈರುಳ್ಳಿ ರಸ:
ಈರುಳ್ಳಿಯಲ್ಲಿ ಸಲ್ಫರ್ ಸಮೃದ್ಧವಾಗಿದ್ದು, ಕೊಬ್ಬರಿ ಎಣ್ಣೆಯಲ್ಲಿ ಈರುಳ್ಳಿ ರಸವನ್ನು ಬೆರೆಸಿ ಕೂದಲಿಗೆ ಬಳಸುವುದರಿಂದ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ಕೂದಲ ಬೆಳವಣಿಗೆಯನ್ನು (Hair Growth) ಉತ್ತೇಜಿಸುತ್ತದೆ.
ಇದನ್ನೂ ಓದಿ- ಮೊಡವೆಗಳಿಂದ ಮುಕ್ತಿ ಹೊಂದಲು ನಿಮ್ಮ ಡಯಟ್ನಲ್ಲಿರಲಿ ಈ 5 ಆಹಾರ
* ಕೊಬ್ಬರಿ ಎಣ್ಣೆ:
ನಿಯಮಿತವಾಗಿ ಕೂದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದಲೂ ಕೂದಲುದುರುವಿಕೆ ಸಮಸ್ಯೆಯಿಂದ (Hairfall Problem) ಪರಿಹಾರ ಪಡೆಯಬಹುದು.
* ಅಲೋವೇರಾ:
ಅಲೋವೇರಾ ಜೆಲ್ ಅನ್ನು ನೆತ್ತಿಗೆ ಅನ್ವಯಿಸುವುದರಿಂದ ಇದು ನೆತ್ತಿಯ pH ಮಟ್ಟವನ್ನು ಸುಧಾರಿಸಿ, ಕೂದಲುದುರುವಿಕೆ ಸಮಸ್ಯೆ ನಿವಾರಿಸುತ್ತದೆ. ಅಷ್ಟೇ ಅಲ್ಲ, ನೆತ್ತಿಯ ತುರಿಕೆ, ಉರಿಯೂತ ಮತ್ತು ತಲೆಹೊಟ್ಟಿನ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ- ಮಾನ್ಸೂನ್‌ನಲ್ಲಿ ಎಣ್ಣೆಯುಕ್ತ ಚರ್ಮದಿಂದ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ!
* ಬೀಟ್ರೂಟ್ ರಸ:
ಬೀಟ್ರೂಟ್ ಉತ್ತಮ ಆರೋಗ್ಯಕ್ಕಷ್ಟೇ ಅಲ್ಲ, ಕೂದಲಿನ ಆರೋಗ್ಯಕ್ಕೂ ಪರಿಣಾಮಕಾರಿ ನೈಸರ್ಗಿಕ ಮದ್ದು. ಕೊಬ್ಬರಿ ಎಣ್ಣೆ, ಅಲೋವೆರಾ ಜೆಲ್ ಜೊತೆಗೆ ಬೀಟ್ರೂಟ್ ರಸವನ್ನು ಬೆರೆಸಿ ಕೂದಲಿನ ಬುಡದಿಂದಲೂ ಹಚ್ಚಿ. ಅದು ಒಣಗಿದ ನಂತರ ಹೇರ್ ವಾಶ್ ಮಾಡುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.