Astrology Remedies for Money : ಕೆಲವರು ಹಗಲು-ಇರುಳು ಎನ್ನದೇ ಕಷ್ಟ ಪಟ್ಟು ದುಡಿಯುತ್ತಾರೆ. ಆದ್ರೆ, ಅವರಿಗೆ ಬಡತನದಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ದುಡಿದ ಹಣ್ಣವನ್ನೂ ಸಹ ಉಳಿಸಿಕೊಳ್ಳಲು ಸಹ ಆಗುವುದಿಲ್ಲ.. ನೀವೂ ಈ ರೀತಿಯ ತೊಂದರೆಯಿಂದ ಬಳಲುತ್ತಿದ್ದೀರಾ..? ಬೇಸರ ಮಾಡಿಕೊಳ್ಳಬೇಡಿ.. ಈ ಕೆಳಗೆ ನೀಡಿರುವ ಪರಿಹಾರ ಮಾಡಿ..


COMMERCIAL BREAK
SCROLL TO CONTINUE READING

ಹೌದು.. ಪರಿಶ್ರಮದ ಜೊತೆ ಅದೃಷ್ಟವೂ ಕೈ ಹಿಡಿಯಬೇಕು, ಈ ನಿಟ್ಟಿನಲ್ಲಿ ನಿಮಗೆ ಕೆಲವೊಂದಿಷ್ಟು ಪರಿಹಾರ ಕ್ರಮಗಳನ್ನು ಹೇಳುತ್ತೇವೆ.. ಕೇಳಿ.. ಶುಕ್ರವಾರವನ್ನು ಲಕ್ಷ್ಮಿ ದೇವಿಯ ದಿನ ಎಂದು ಪರಿಗಣಿಸಲಾಗುತ್ತದೆ. ತಾಯಿ ಲಕ್ಷ್ಮಿ ಸಂಪತ್ತಿನ ದೇವತೆ. ಪಂಚಾಂಗದ ಪ್ರಕಾರ, ಈ ದಿನದಂದು ಶ್ರೀನಿವಾಸನ ಪತ್ನಿಯನ್ನು ಪ್ರಾಮಾಣಿಕವಾಗಿ ಪೂಜಿಸಿ ಅವಳನ್ನು ಸಂತೃಪ್ತಿ ಪಡಿಸಿದರೆ, ನೀವು ಬೇಡಿದ ವರಗಳನ್ನು ನೀಡುತ್ತಾಳೆ.


ಇದನ್ನೂ ಓದಿ: ಹುಣಸೆ ಇದ್ದರೆ ಸಾಕು… ಕೇವಲ 10 ನಿಮಿಷದಲ್ಲಿ ಬಿಳಿಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು!


ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯನ್ನು ದಾನ ಮಾಡಿ : ನೀವು ಶುಕ್ರವಾರದಂದು ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯಂತಹ ಬಿಳಿ ವಸ್ತುವನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ತಾಯಿಯ ಕೃಪೆ ನಿಮ್ಮ ಮೇಲಿರುತ್ತದೆ. ಶುಕ್ರವಾರದಂದು ಹಸುಗಳಿಗೆ ರೊಟ್ಟಿಯನ್ನು ತಿನ್ನಿಸುವ ಮೂಲಕ ಲಕ್ಷ್ಮೀ ಕೃಪೆಗೆ ಪಾತ್ರರಾಗಿ.


ಲಕ್ಷ್ಮಿಗೆ ಅನ್ನವನ್ನು ಅರ್ಪಿಸಿ : ಶುಕ್ರವಾರದಂದು ಲಕ್ಷ್ಮಿ ದೇವಿಗೆ ಅನ್ನವನ್ನು ಅರ್ಪಿಸಬೇಕು. ಆದರೆ, ಭತ್ತದ ಕಾಳುಗಳು ಒಡೆಯದಂತೆ ಎಚ್ಚರಿಕೆ ವಹಿಸಬೇಕು. ಈ ದಿನ ನೀವು ಅಗತ್ಯವಿರುವವರಿಗೆ ಸಹಾಯ ಮಾಡಬಹುದು. ಇದರಿಂದ ಲಕ್ಷ್ಮಿಗೆ ತುಂಬಾ ಸಂತೋಷವಾಗುತ್ತದೆ. ಶೀಘ್ರದಲ್ಲೇ ನಿಮ್ಮ ಹಣದ ತೊಂದ್ರೆ ಪರಿಹಾರವಾಗುತ್ತದೆ. 


ಇದನ್ನೂ ಓದಿ:ಮೆಹಂದಿ ರಂಗು ಬರ್ತಾ ಇಲ್ವಾ ಹಾಗಾದರೆ, ಈ ಟಿಪ್ಸ್‌ ಫಾಲೋ ಮಾಡಿ...


ನವಿಲು ನರ್ತಿಸುವ ಜಾಗದಿಂದ ಮಣ್ಣನ್ನು ತನ್ನಿ : ನೀವು ಶುಕ್ರವಾರ ಬೆಳಿಗ್ಗೆ ನವಿಲು ನರ್ತಿಸುವ ಸ್ಥಳದಿಂದ ಮಣ್ಣನ್ನು ಕೆಂಪು ಬಟ್ಟೆಯಲ್ಲಿ ತಂದು ಮನೆಯಲ್ಲಿ ಪವಿತ್ರ ಸ್ಥಳದಲ್ಲಿ ಇರಿಸಿ ಮತ್ತು ಆ ಮಣ್ಣಿನ್ನು ಪ್ರತಿದಿನ ಪೂಜೆ ಮಾಡಿ.. ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚುತ್ತದೆ. ಈ ಮಣ್ಣನ್ನು ಪಡೆದವರ ಹಣೆಬರಹವೇ ಬದಲಾಗುತ್ತದೆ ಎಂದೂ ಹೇಳಲಾಗುತ್ತದೆ. 


ಮನೆಯಲ್ಲಿ ಪೊರಕೆಯನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ : ಮನೆಯಲ್ಲಿ ಇಡುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ನೀವು ಪ್ರತಿದಿನ ಮನೆಯ ಹೊರಗಿನ ಧೂಳು-ಮಣ್ಣು ಮತ್ತು ನಕಾರಾತ್ಮಕತೆಯನ್ನು ಸ್ವಚ್ಛಗೊಳಿಸಿದ ಕಾರಣ ಪೊರಕೆಯನ್ನು ಕೊಳಕು ಸ್ಥಳದಲ್ಲಿ ಇಡಬೇಡಿ. ಯಾರೂ ಕಾಲಿಡದ ಜಾಗದಲ್ಲಿ ಇಡಿ. ಪೊರಕೆ ಹಳೆಯದಾದರೆ ಅದನ್ನು ಹೂಳಬೇಕು.


(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಗಳು ಸಾಮಾನ್ಯ ಜ್ಞಾನ ಮತ್ತು ನಂಬಿಕೆಗಳನ್ನು ಆಧರಿಸಿವೆ. Zee Kannada news ಇದನ್ನು ಖಚಿತಪಡಿಸುವುದಿಲ್ಲ) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.