Mercury: ನಿಮಗೂ ಬುಧ ದುರ್ಬಲನಾಗಿರುವನೇ? ಈ ಚಿಹ್ನೆಗಳೊಂದಿಗೆ ಗುರುತಿಸಿ
Effects And Remedies For A Weak Mercury: ಜೀವನದಲ್ಲಿ ಕೆಲವು ಘಟನೆಗಳು ಅನಿರೀಕ್ಷಿತವಾಗಿರುತ್ತವೆ ಮತ್ತು ಒಳ್ಳೆಯ ಜೀವನವನ್ನು ತೊಂದರೆಗಳಿಂದ ತುಂಬುತ್ತವೆ. ಸಂಬಂಧಪಟ್ಟ ಗ್ರಹದ ದುರ್ಬಲತೆಯೇ ಇದರ ಹಿಂದಿನ ಕಾರಣ.
Effects And Remedies For A Weak Mercury: ಜ್ಯೋತಿಷ್ಯದಲ್ಲಿ, ಜೀವನದ ಪ್ರತಿಯೊಂದು ಅಂಶವನ್ನು ಕೆಲವು ಗ್ರಹಗಳು ಪ್ರತಿನಿಧಿಸುತ್ತವೆ. ಆ ಗ್ರಹ ದುರ್ಬಲವಾಗಿದ್ದರೆ ಆ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳು ವ್ಯಕ್ತಿಯನ್ನು ಸುತ್ತುವರೆದಿರುತ್ತವೆ. ಅವರು ಅನಗತ್ಯ ನಷ್ಟ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ, ವ್ಯಕ್ತಿಯ ಅಭ್ಯಾಸಗಳು ಸಹ ಗ್ರಹಗಳಿಗೆ ಸಂಬಂಧಿಸಿವೆ. ಅದೇ ಸಮಯದಲ್ಲಿ, ಗ್ರಹಗಳ ಬಲ ಮತ್ತು ದುರ್ಬಲತೆಯ ಪರಿಣಾಮವು ವ್ಯಕ್ತಿಯ ಜೀವನದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇವುಗಳಲ್ಲಿ ಬುಧ ಗ್ರಹವೂ ಒಂದು. ಅದು ದುರ್ಬಲವಾಗಿದ್ದರೆ, ವ್ಯಕ್ತಿಯು ಇದ್ದಕ್ಕಿದ್ದಂತೆ ಹಣವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ. ಅವನು ಸಾಲಕ್ಕೆ ಸಿಲುಕುತ್ತಾನೆ, ರೋಗಗಳು ಅವನನ್ನು ಬೆಂಬಿಡದಂತೆ ಭಾದಿಸುತ್ತವೆ ಎಂದು ಹೇಳಲಾಗುತ್ತದೆ.
ಬುಧ ಗ್ರಹದ ದುರ್ಬಲತೆಯ ಸೂಚನೆ ನೀಡುತ್ತವೆ ಈ ಚಿಹ್ನೆಗಳು:
ಬುಧ ಗ್ರಹವು (Budh Grah) ಬುದ್ಧಿವಂತಿಕೆ, ಮಾತು, ಸೌಂದರ್ಯ ಮತ್ತು ಸಂಪತ್ತಿಗೆ ಕಾರಣವಾದ ಗ್ರಹವಾಗಿದೆ. ಆದ್ದರಿಂದ, ನಿಮ್ಮ ಜೀವನದಲ್ಲಿ ಹಠಾತ್ ಹಣದ ಕೊರತೆ ಉಂಟಾದರೆ ಮತ್ತು ನೀವು ಸಾಲದ ಹೊರೆ ಇದ್ದಕ್ಕಿದ್ದಂತೆ ಹೆಚ್ಚಾದರೆ ನಿಮ್ಮ ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಇದನ್ನೂ ಓದಿ- Remedy Of Salt: 'ರಾಹು'ವಿನ ಅಶುಭ ಪರಿಣಾಮವನ್ನು ಚಿಟಿಕೆಯಲ್ಲಿ ನಿವಾರಿಸುತ್ತದೆ 'ಉಪ್ಪು'!
ಹಠಾತ್ ಗೌರವದ ನಷ್ಟ ಉಂಟಾದರೆ, ಜನರು ನಿಮ್ಮನ್ನು ಗೌರವಿಸುವುದನ್ನು ನಿಲ್ಲಿಸುವುದು ಕೂಡ ದುರ್ಬಲ ಬುಧದ ಸಂಕೇತವಾಗಿದೆ.
ವ್ಯಕ್ತಿಯ ಆತ್ಮ ವಿಶ್ವಾಸ ಕಡಿಮೆಯಾದರೆ, ಅವನು ತನ್ನ ಸ್ವಂತ ಬುದ್ಧಿವಂತಿಕೆ ಮತ್ತು ನಿರ್ಧಾರಗಳನ್ನು ಅನುಮಾನಿಸಲು ಪ್ರಾರಂಭಿಸುತ್ತಾನೆ, ಆಗಲೂ ಬುಧ ಗ್ರಹ ದುರ್ಬಲಗೊಳ್ಳುವುದು (Weak Mercury Symptoms) ಇದರ ಹಿಂದಿನ ಕಾರಣ.
ಸಹೋದರಿ, ಅತ್ತೆ, ಚಿಕ್ಕಮ್ಮ ಮುಂತಾದ ಸ್ತ್ರೀ ಸಂಬಂಧಿಗಳೊಂದಿಗೆ ಸಂಬಂಧ ಹದಗೆಡುವುದು ಸಹ ದುರ್ಬಲ ಬುಧದ ಸಂಕೇತವಾಗಿದೆ.
ಬುಧ ಗ್ರಹವು ವ್ಯಕ್ತಿತ್ವದ ಅಂಶವೂ ಆಗಿದೆ. ಅದು ದುರ್ಬಲಗೊಳ್ಳಲು ಪ್ರಾರಂಭಿಸಿದರೆ ವ್ಯಕ್ತಿಯ ತೇಜಸ್ಸು ಕೊನೆಗೊಳ್ಳುತ್ತದೆ. ಅವನ ಮುಖ ಕೆಳಗೆ ನೋಡಲು ಪ್ರಾರಂಭಿಸುತ್ತದೆ.
ಬುಧ ನೀಚನಾಗಿದ್ದಾಗ ಮಾತನಾಡುವ ಮತ್ತು ಶ್ರವಣಕ್ಕೆ ಸಂಬಂಧಿಸಿದ ಅಂಗಗಳಲ್ಲಿ ತೊಂದರೆಗಳು ಉಂಟಾಗುತ್ತವೆ. ಅವರ ಮಾತುಗಳು ಇತರರ ಮೇಲೆ ಪರಿಣಾಮ ಬೀರುವುದಿಲ್ಲ.
ದುರ್ಬಲ ಬುಧನು ವ್ಯಾಪಾರದಲ್ಲಿಯೂ ನಷ್ಟವನ್ನು ಉಂಟುಮಾಡುತ್ತಾನೆ.
ಇದನ್ನೂ ಓದಿ- ಈ ರಾಶಿಯವರಿಗೆ 2022ರಲ್ಲಿ ಭಾರೀ ಆರ್ಥಿಕ ಲಾಭ, ಮಂಗಳನ ಕೃಪೆಯಿಂದ ಬೆಳಗಲಿದೆ ಅದೃಷ್ಟ
ಬುಧ ಗ್ರಹವನ್ನು ಹೇಗೆ ಬಲಪಡಿಸುವುದು?
ಬುಧ ಗ್ರಹವು ದುರ್ಬಲವಾಗಿದ್ದರೆ, ಅದನ್ನು ಬಲಪಡಿಸಲು ಸಾಧ್ಯವಾದಷ್ಟು ಬೇಗ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ, ಸಾಧ್ಯವಾದಷ್ಟು ಹಸಿರು ವಸ್ತುಗಳನ್ನು ಬಳಸಿ, ಹಾಗೆಯೇ ಅವುಗಳನ್ನು ದಾನ ಮಾಡಿ. ಉದಾಹರಣೆಗೆ, ಹಸಿರು ಕಾಳು, ಪಾಲಾಕ್ ಸೊಪಪು ಹೀಗೆ ಹಸಿರು ಬಣ್ಣದ ವಸ್ತುಗಳನ್ನು ದಾನ ಮಾಡಿ. ಮಹಿಳೆಯರಿಗೆ ಹಸಿರು ಬಳೆಗಳನ್ನು ನೀಡಿ. ಸೌತೆಕಾಯಿ, ಹಸಿರು ತರಕಾರಿಗಳು, ಹಣ್ಣುಗಳನ್ನು ಸೇವಿಸಿ. ಹಸಿರು ಬಟ್ಟೆಗಳನ್ನು ಧರಿಸಿ. ಈ ಕ್ರಮಗಳು ಬುಧ ಗ್ರಹವನ್ನು ಬಳಪಡಿಸಲು ಸಹಕಾರಿಯಾಗಿವೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ