ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ಫಿಟ್‌ನೆಸ್ ಬಗ್ಗೆ ತುಂಬಾ ನಿಗಾ ವಹಿಸುತ್ತಾರೆ. ಹಾಗಾಗಿ ಸಾಕಷ್ಟು ಮಂದಿ ನಿಯಮಿತ ವ್ಯಾಯಾಮ ಮಾಡುತ್ತಾರೆ. ಆದರೆ ಹಲವು ಬಾರಿ ಏನಾದರೊಂದು ಕಾರಣಕ್ಕೆ ವ್ಯಾಯಾಮದಿಂದ ವಿರಾಮ ತೆಗೆದುಕೊಳ್ಳುವಂತಾಗುತ್ತದೆ. ಆದರೆ ದೀರ್ಘ ವಿರಾಮದ ನಂತರ ಮತ್ತೆ ವ್ಯಾಯಾಮವನ್ನು ಪ್ರಾರಂಭಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷವಾದ ಗಮನ ಹರಿಸಬೇಕಾಗುತ್ತದೆ. ಅಂತಹ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ-


COMMERCIAL BREAK
SCROLL TO CONTINUE READING

ಆರಂಭದಲ್ಲಿ ಸುಲಭವಾದ ವ್ಯಾಯಾಮಗಳನ್ನು ಮಾಡಿ :- 
ನೀವು ಬಹಳ ಸಮಯದ ನಂತರ ವ್ಯಾಯಾಮವನ್ನು (Exercise) ಪ್ರಾರಂಭಿಸುತ್ತಿದ್ದರೆ, ಮೊದಲು ಸುಲಭವಾದ ವ್ಯಾಯಾಮಗಳೊಂದಿಗೆ ಪ್ರಾರಂಭಿಸಿ. ಒಂದೇ ಬಾರಿಗೆ ಹೆಚ್ಚು ಕಷ್ಟಪಟ್ಟು ವ್ಯಾಯಾಮ ಮಾಡಬೇಡಿ.


ಇದನ್ನೂ ಓದಿ - Beauty Benefits of Chikoo: ಉತ್ತಮ ಚರ್ಮ, ಕೂದಲಿಗಾಗಿ ಬಳಸಿ ಸಪೋಟಾ ಮಾಸ್ಕ್


5 ನಿಮಿಷಗಳ ನಿಯಮವನ್ನು ಅನುಸರಿಸಿ  :-  
ಆರಂಭದಲ್ಲೇ ನೀವು ಬಹಳ ಕಷ್ಟದ ವ್ಯಾಯಾಮಗಳನ್ನು ಮಾಡಲು ಆರಂಭಿಸಿದರೆ  ನೀವು ಶೀಘ್ರದಲ್ಲೇ ದಣಿಯುತ್ತೀರಿ. ದೀರ್ಘಕಾಲದ ನಂತರ ವ್ಯಾಯಾಮವನ್ನು ಪ್ರಾರಂಭಿಸಲು (How to Start Exercise), ಮೊದಲು 5 ನಿಮಿಷಗಳ ನಿಯಮವನ್ನು ಅನುಸರಿಸಿ. ಅಂದರೆ ಮೊದಲಿಗೆ ಕೇವಲ 5 ನಿಮಿಷಗಳು ಮಾತ್ರ ಸಣ್ಣ-ಪುಟ್ಟ ವ್ಯಾಯಾಮ ಮಾಡುವ ಮೂಲಕ ಆರಂಭಿಸಿ.  ವ್ಯಾಯಾಮದ ಸಮಯವನ್ನು ಕ್ರಮೇಣ ಹೆಚ್ಚಿಸಿ.


ಇದನ್ನೂ ಓದಿ- Curry Leaves Benefits : ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ 5 ಪ್ರಯೋಜನಗಳು!


ನಿಗದಿತವಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ:- 
ಯಾವುದೇ ಕೆಲಸವನ್ನು ಆರಂಭಿಸುವಾಗ ಬಹಳ ಉತ್ಸಾಹದಿಂದಲೇ ಆರಂಭಿಸುತ್ತೇವೆ. ಆದರೆ ಕೆಲವು ದಿನಗಳ ನಂತರ ಒಂದು ರೀತಿಯ ಸೋಮಾರಿತನ ಹಲವರಲ್ಲಿ ಮೂಡುತ್ತದೆ. ವ್ಯಾಯಾಮವೂ ಕೂಡ ಇದಕ್ಕೆ ಹೊರತಲ್ಲ. ತೂಕ ಕಳೆದುಕೊಳ್ಳುವ ದೃಷ್ಟಿಯಿಂದ ಮಾತ್ರವಲ್ಲ. ಉತ್ತಮ ಆರೋಗ್ಯಕ್ಕೂ ಕೂಡ ನಿಯಮಿತ ಆರೋಗ್ಯ ಬಹಳ ಮುಖ್ಯ. ಹಾಗಾಗಿ ಯಾವುದೇ ಕಾರಣಗಳಿಂದಾಗಿ ನಿಮ್ಮ ಜೀವನಕ್ರಮಗಳು ನಿಲ್ಲದಂತೆ ನೀವು ಕಾಳಜಿ ವಹಿಸಬೇಕು ಮತ್ತು ನಿಮ್ಮ ಗಮನವು ಅದರಿಂದ ವಿಚಲಿತರಾಗಬಾರದು. ಅದಕ್ಕಾಗಿ ಪ್ರತಿನಿತ್ಯ ನಿಗದಿತ ಸಮಯವನ್ನು ನಿಮ್ಮ ವ್ಯಾಯಾಮಕ್ಕಾಗಿ ಮೀಸಲಿಡಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.