Feng Shui: ಮನೆಯಲ್ಲಿ ಈ 9 ಮೀನು ಸಾಕಿದ್ರೆ ನೀವು ಅಪಾರ ಸಂಪತ್ತಿನ ಒಡೆಯರಾಗುತ್ತೀರಿ..!
ಚೀನೀ ವಾಸ್ತು ಶಾಸ್ತ್ರದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಹಲವು ಮಾರ್ಗಗಳಿವೆ. ಈ ಪರಿಹಾರ ಪೈಕಿ ಫಿಶ್ ಟ್ಯಾಂಕ್ ಅಥವಾ ಫಿಶ್ ಅಕ್ವೇರಿಯಂ ಮನೆಯಲ್ಲಿ ಇಡುವುದಾಗಿದೆ.
ನವದೆಹಲಿ: ಪ್ರತಿಯೊಬ್ಬರೂ ಮನೆಯಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸಮೃದ್ಧಿ ಹೊಂದಿರಬೇಕೆಂದು ಬಯಸುತ್ತಾರೆ. ಆದರೆ ವ್ಯಕ್ತಿಯ ಕರ್ಮ, ಅದೃಷ್ಟ, ವಾಸ್ತು ದೋಷಗಳು, ಜಾತಕದಲ್ಲಿನ ಗ್ರಹಗಳು ಅನೇಕ ಬಾರಿ ಅಡಚಣೆಯಾಗುತ್ತವೆ. ಇಂತಹ ನಕಾರಾತ್ಮಕ ಪರಿಸ್ಥಿತಿ ಎದುರಿಸಲು ಜ್ಯೋತಿಷ್ಯ, ವಾಸ್ತು ಶಾಸ್ತ್ರದಂತಹ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ಚೀನಾದ ವಾಸ್ತುಶಾಸ್ತ್ರ ಫೆಂಗ್ ಶೂಯಿಯಲ್ಲಿ ನೀಡಲಾಗಿದೆ. ಫೆಂಗ್ ಶೂಯಿಯಲ್ಲಿ ಉಲ್ಲೇಖಿಸಲಾದ ಈ ವಿಷಯಗಳು ಮನೆಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತವೆ ಮತ್ತು ಸಂತೋಷ ಮತ್ತು ಸಮೃದ್ಧಿಯ ಹೊಸ ಮಾರ್ಗಗಳನ್ನು ನಿಮಗೆ ನೀಡುತ್ತವೆ.
ಮೀನು ಅಕ್ವೇರಿಯಂ
ಫೆಂಗ್ ಶೂಯಿಯಲ್ಲಿ ಮೀನು ಅಕ್ವೇರಿಯಂ ಅನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಮೀನಿನ ಅಕ್ವೇರಿಯಂ ಇದ್ದರೆ ಅನೇಕ ಪ್ರಯೋಜನಗಳಿವೆ. ಫೆಂಗ್ ಶೂಯಿ ಪ್ರಕಾರ, ನೀವು ಮನೆಯಲ್ಲಿ ಮೀನಿನ ಅಕ್ವೇರಿಯಂ ಇರಿಸಿದರೆ 9 ಮೀನುಗಳನ್ನು ಸಾಕಬೇಕು. ಈ ಪೈಕಿ 8 ಕಪ್ಪು ಮತ್ತು 1 ಚಿನ್ನದ ಬಣ್ಣದ ಮೀನು ಇರಬೇಕು. ಅಕ್ವೇರಿಯಂನಲ್ಲಿ ಮೀನಿನ ಈ ಸಂಯೋಜನೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ.
ಇದನ್ನೂ ಓದಿ: Numerology: ಈ ದಿನಾಂಕಗಳಲ್ಲಿ ಜನಿಸಿದವರಿಗೆ ಜುಲೈ 3ನೇ ವಾರ ಉತ್ತಮವಾಗಿದೆ
ಈ ಸ್ಥಳದಲ್ಲಿ ಅಕ್ವೇರಿಯಂ ಇರಿಸಿ
ಅಕ್ವೇರಿಯಂನ್ನು ನಿಮ್ಮ ಡ್ರಾಯಿಂಗ್ ರೂಮಿನಲ್ಲಿ 9 ಮೀನುಗಳ ಸಮೇತ ಇರಿಸಲು ಪ್ರಯತ್ನಿಸಿ. ಕೋಣೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ಇದು ಸಾಧ್ಯವಾಗದಿದ್ದರೆ ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಫಿಶ್ ಅಕ್ವೇರಿಯಂ ಇಡುವುದರಿಂದ ಉತ್ತಮ ಫಲಿತಾಂಶ ನೀಡುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಅದೃಷ್ಟ ಬರುತ್ತದೆ. ಹಣದ ಒಳಹರಿವು ವೇಗವಾಗಿ ಹೆಚ್ಚಾಗುತ್ತದೆ.
ಆದರೆ ಅಪ್ಪಿತಪ್ಪಿಯೂ ಮಲಗುವ ಕೋಣೆಯಲ್ಲಿ ಅಕ್ವೇರಿಯಂ ಇಡಬಾರದು. ಹೀಗೆ ಮಾಡುವುದರಿಂದ ನೀವು ಒತ್ತಡ ಸೇರಿದಂತೆ ಹಲವು ಸಮಸ್ಯೆಗಳಿಗೆ ಬಲಿಯಾಗಬಹುದು. ಇದಲ್ಲದೆ ಮೀನಿನ ಅಕ್ವೇರಿಯಂ ಸುತ್ತಲೂ ಯಾವುದೇ ಕೊಳಕು ಇರಬಾರದು. ಯಾವುದೇ ಶುಭಕಾರಿ ವಸ್ತುವಿನ ಸುತ್ತ ಸ್ವಚ್ಛತೆಯ ಕೊರತೆಯು ಲಾಭದ ಬದಲು ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ನೀವು ಇಡುವ ಅಕ್ವೇರಿಯಂ ಸುತ್ತಮುತ್ತ ಸ್ವಚ್ಛತೆ ಇರಬೇಕು.
ಇದನ್ನೂ ಓದಿ: Palmistry: ಅಂಗೈನಲ್ಲಿರುವ ಈ ಗುರುತು ನೀವು ಎಷ್ಟು ಶ್ರೀಮಂತರಾಗುತ್ತೀರಿ ಎಂಬುದನ್ನು ತಿಳಿಸುತ್ತದೆ!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.