Skin Care Tips: ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳ ಅಗತ್ಯವೇ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳ ರಸಗಳನ್ನು ಬಳಸಿಯೂ ನೀವು ತ್ವಚೆ ಸಂಬಂಧಿತ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.


COMMERCIAL BREAK
SCROLL TO CONTINUE READING

ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವು ಹಣ್ಣು-ತರಕಾರಿಗಳಲ್ಲಿ, ಗಿಡಮೂಲಿಕೆಗಳಲ್ಲಿ ವಿಟಮಿನ್ ಸಿ (Vitamin C) ಹೆಚ್ಚಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲ, ಇವುಗಳಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತದ ಗುಣಲಕ್ಷಣಗಳು ಕೂಡ ಹೇರಳವಾಗಿ ಕಂಡು ಬರುತ್ತದೆ. ಇವುಗಳನ್ನು ಸ್ಕ್ವೀಝ್ ಮಾಡಿ ಅದರ ಒಂದೆರಡು ಹನಿ ರಸದಿಂದ  ಮೊಡವೆ, ತ್ವಚೆಯಲ್ಲಿ ಮೂಡಿರುವ ಕಲೆಗಳನ್ನು ಹೇಳ ಹೆಸರಿಲ್ಲದಂತೆ ನಿವಾರಿಸಬಹುದು. 


ಸುಂದರ, ಕೋಮಲ ತ್ವಚೆಗಾಗಿ ತುಂಬಾ ಪ್ರಯೋಜನಕಾರಿ ಈ ರಸಗಳು: 
ಅಲೋವೆರಾ ರಸ: 

ನಿತ್ಯ ಕೊಂಚ ಅಲೋವೆರಾ ರಸವನ್ನು ಮುಖಕ್ಕೆ ಲೇಪಿಸುವುದರಿಂದ ಚರ್ಮ ಸಂಬಂಧಿತ ಸಮಸ್ಯೆಗಳಿಂದ (Skin Problems) ದೂರ ಉಳಿಯಬಹುದು. ಬೇಕೆಂದರೆ ಅಲೋವೆರಾ ರಸದಲ್ಲಿ ಚಿಟಿಕೆ ಅರಿಶಿನವನ್ನು ಕೂಡ ಬೆರೆಸಬಹುದು. 


ಇದನ್ನೂ ಓದಿ- Weight Loss: ಹೊಟ್ಟೆ ಸುತ್ತಲಿನ ಫ್ಯಾಟ್ ಕರಗಿಸಲು ಸಂಜೀವಿನಿ ಇದ್ದಂತೆ ಈ ಹಣ್ಣು


ಕಲ್ಲಂಗಡಿ ರಸ
ಬೇಸಿಗೆಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಎನ್ನಲಾಗುವ ಕಲ್ಲಂಗಡಿಯು ಚರ್ಮದ ಆರೋಗ್ಯಕ್ಕೆ (Healthy Skin) ಪ್ರಯೋಜನಕಾರಿಯಾದ ಕೆಲವು ಜೀವಸತ್ವಗಳನ್ನು ಹೊಂದಿರುತ್ತದೆ. ಇದರ ರಸವನ್ನು ಮುಖಕ್ಕೆ ಲೇಪಿಸಿ, 10-15 ನಿಮಿಷಗಳ ಬಳಿಕ ಮುಖ ತೊಳೆಯುವುದರಿಂದ ಮೃದುವಾದ ಚರ್ಮವನ್ನು ಹೊಂದಲು ಸಹಾಯಕವಾಗಿದೆ. 


ಟೊಮಾಟೊ ರಸ: 
ನಿತ್ಯ ಅಡುಗೆಯಲ್ಲಿ ಬಳಸುವ ಟೊಮಾಟೊ ಹಣ್ಣಿನ ರಸವನ್ನು ಮುಖಕ್ಕೆ ಲೇಪಿಸುವುದರಿಂದ ಮೊಡವೆ, ಕಲೆ, ಡೆಡ್ ಸ್ಕಿನ್ ನಂತಹ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. 


ಇದನ್ನೂ ಓದಿ- Weight Loss: ಈ ರೀತಿ ಅನ್ನ ತಿಂದರೆ ಎಂದಿಗೂ ತೂಕ ಹೆಚ್ಚಾಗಲ್ಲ


ನಿಂಬೆ ರಸ: 
ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ನಿಂಬೆ ರಸ ನೈಸರ್ಗಿಕವಾಗಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದು ಮುಖದಲ್ಲಿ ಕಪ್ಪು ಕಲೆಗಳನ್ನು ನಿವಾರಿಸಲು ಹೆಚ್ಚು ಪ್ರಯೋಜನಕಾರಿ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.