DOG BITE: ನಾಯಿ ಕಚ್ಚಿದಾಗ ಅನೇಕರು ತುಂಬಾ ಹೆದರುತ್ತಾರೆ. ಏಕೆಂದರೆ ನಾಯಿ ಕಡಿತದಿಂದ ರೇಬೀಸ್ ಅಪಾಯವು ತುಂಬಾ ಹೆಚ್ಚು. ರೇಬೀಸ್‌ನಿಂದ ಸಾವಿನ ಅಪಾಯವೂ ಹೆಚ್ಚು. ನಾಯಿ ಕಚ್ಚಿದ ನಂತರ ಕೆಲವು ಸಲಹೆಗಳನ್ನು ಅನುಸರಿಸುವುದು ರೇಬೀಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ.


COMMERCIAL BREAK
SCROLL TO CONTINUE READING

ಬೀದಿ ನಾಯಿಗಳು ಸಾಂದರ್ಭಿಕವಾಗಿ ಜನರ ಮೇಲೆ ದಾಳಿ ಮಾಡಿ ಕಚ್ಚಿಬಿಡುತ್ತವೆ. ಪ್ರತಿದಿನ ಹಲವಾರು ಜನರು ನಾಯಿಗಳಿಂದ ಕಡಿತಕ್ಕೆ ಒಳಗಾಗುತ್ತಾರೆ. ಆದರೆ ಕೆಲವೊಮ್ಮೆ ನಾಯಿಯ ಕಡಿತ ತುಂಬಾ ಅಪಾಯಕಾರಿ. ಇದು ರೇಬೀಸ್ ಆಗಿ ಬದಲಾಗುತ್ತದೆ ಹಾಗೂ ನಿಮ್ಮ ಪ್ರಾಣವನ್ನೆ ತೆಗೆದುಬಿಡುತ್ತದೆ. 


ರೇಬೀಸ್ ಎಂಬುದು ನಾಯಿ, ಬೆಕ್ಕು, ನರಿ ಮತ್ತು ಹದ್ದುಗಳ ಕಡಿತದಿಂದ ಉಂಟಾಗುವ ಕಾಯಿಲೆ. ರೇಬಿಸ್ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 28 ರಂದು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಮೊದಲ ರೇಬೀಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಫ್ರೆಂಚ್ ಜೀವಶಾಸ್ತ್ರಜ್ಞ ಲೂಯಿಸ್ ಪಾಶ್ಚರ್ ಅವರ ಮರಣ ವಾರ್ಷಿಕೋತ್ಸವದಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. 


ಸಾಕುಪ್ರಾಣಿಗಳು, ಬೀದಿನಾಯಿಗಳು ಮತ್ತು ಬೆಕ್ಕುಗಳು ಕಚ್ಚುವ ಘಟನೆಗಳೂ ಹೆಚ್ಚು. ಹೀಗೆ ಇವುಗಳ ಕಡಿತಕ್ಕೆ ಒಳಗಾಗುವುದರಿಂದ  ರೇಬೀಸ್ ಅಪಾಯ ಹೆಚ್ಚುತ್ತದೆ. ಚಿಕಿತ್ಸೆ ನೀಡದಿದ್ದರೆ, ಅದು ವ್ಯಕ್ತಿಗೆ ಅಪಾಯಕಾರಿ. ಅದರ ಚಿಕಿತ್ಸೆಗಾಗಿ ತಕ್ಷಣವೇ ಚುಚ್ಚುಮದ್ದನ್ನು ತೆಗೆದುಕೊಳ್ಳುವುದು ಅವಶ್ಯಕ .


ನಾಯಿ ಕಚ್ಚಿದ ನಂತರ ಗಾಯವನ್ನು ಸೋಪಿನಿಂದ ಸ್ವಚ್ಛಗೊಳಿಸಿ. ಧೂಳು, ಬ್ಯಾಕ್ಟೀರಿಯಾ ಹಾಗೂ ಎಂಜಲನ್ನು  ತೆಗೆದುಹಾಕಲು ಸೋಪ್‌ ಬಳಸಿ ಗಾಯವನ್ನು ಸ್ವಚ್ಛಗೊಳಿಸಿ.  ನಾಯಿ ಕಡಿತದಿಂದ ರಕ್ತಸ್ರಾವವಾಗುತ್ತಿದ್ದರೆ, ಸ್ವಚ್ಛವಾದ ಬಟ್ಟೆಯಿಂದ ಮೃದುವಾಗಿ ಒತ್ತಡ ನೀಡಿ ಆ ಜಾಗವನ್ನು ಕ್ಲೀನ್‌ ಮಾಡಿ. 


ಹೈಡ್ರೋಜನ್ ಪೆರಾಕ್ಸೈಡ್ ಅಥವಾ ಆಲ್ಕೋಹಾಲ್ನೊಂದಿಗೆ ಗಾಯವನ್ನು ಸ್ವಚ್ಛಗೊಳಿಸಿ, ನಂತರ ಟೆಟನಸ್ ಇಂಜೆಕ್ಷನ್ ಪಡೆಯುವುದು ಅವಶ್ಯಕ. ರೇಬೀಸ್ ಲಸಿಕೆಯನ್ನು ಐದು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ನಾಯಿ ಕಚ್ಚಿದ  ದಿನ ನೀಡಲಾಗುತ್ತದೆ, ನಂತರ ಮೂರನೇ ದಿನಕ್ಕೆ ಒಂದು ಲಸಿಕೆ ಏಳನೇ ದಿನ, ಹದಿನಾಲ್ಕನೇ ದಿನ ಮತ್ತು 30 ನೇ ದಿನದಲ್ಲಿ ಒಂದು ಲಸಿಕೆ ನೀಡಲಾಗುತ್ತದೆ. 


ನಾಯಿ ಕಚ್ಚಿದ ನಂತರ ಯಾವುದೇ ಸಮಯದಲ್ಲಿ ರೇಬೀಸ್ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಆರಂಭವಾಗಬಹುದು. ರೇಬೀಸ್ ಚುಚ್ಚುಮದ್ದನ್ನು ಯಾವುದೇ ವಿಳಂಭವಿಲ್ಲದೆ ಪಡೆಯುವುದು ಉತ್ತಮ.  ರೇಬೀಸ್ ಸೋಂಕಿಗೆ ಒಳಗಾದ ನಂತರ , ಜ್ವರ ಮತ್ತು ತಲೆನೋವು ಬಂದು ಹೋಗುತ್ತದೆ. ಸಮಸ್ಯೆ ಮೆದುಳಿನಿಂದ ಪ್ರಾರಂಭವಾಗುತ್ತದೆ. ಮೆನಿಂಜೈಟಿಸ್ ಸಂಭವಿಸುತ್ತದೆ. ಇದು ನಿದ್ರಾಹೀನತೆ, ಮಾನಸಿಕ ಆಂದೋಲನ, ಮತಿವಿಕಲ್ಪ, ಪ್ಯಾನಿಕ್ ಅಟ್ಯಾಕ್ ಮತ್ತು ಭಾಗಶಃ ಪಾರ್ಶ್ವವಾಯುಗಳಿಗೆ ಕಾರಣವಾಗುತ್ತದೆ.


ರೇಬೀಸ್ ಅನ್ನು ನಾಯಿ ಕಡಿತದಿಂದ ಮಾತ್ರವಲ್ಲ, ಅದರ ಲಾಲಾರಸದ ಮೂಲಕವೂ ಹರಡಬಹುದು. ನಾಯಿಗೆ ರೇಬೀಸ್ ಇದ್ದರೆ, ಅದು ತನ್ನ ಲಾಲಾರಸದ ಮೂಲಕ ಇತರ ಪ್ರಾಣಿಗಳಿಗೆ ರೇಬೀಸ್ ಅನ್ನು ಹರಡುತ್ತದೆ. ಪ್ರಪಂಚದಾದ್ಯಂತ, ರೇಬೀಸ್‌ನಿಂದ ಪ್ರತಿ ವರ್ಷ 59,000 ಜನರು ಸಾಯುತ್ತಾರೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ನಾಯಿ ಕಡಿತದ ಘಟನೆಗಳು ದಾಖಲಾಗುತ್ತವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.