ಅನೇಕರ ಮನೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಾಷಿಂಗ್‌ ಮೆಷಿನ್‌ಗಳನ್ನು ಬಳಕೆ ಮಾಡಲಾಗುತ್ತದೆ.  ಕೆಲವೇ ನಿಮಿಷಗಳಲ್ಲಿ ಬಟ್ಟೆಗಳನ್ನು ಒಗೆದು ಹೊಳಪು ಮಾಡಲು ವಾಷಿಂಗ್ ಮೆಷಿನ್ ಉತ್ತಮ ಆಯ್ಕೆ. ಆದರೆ ಒಂಟಿಯಾಗಿ ವಾಸಿಸುವ ಅಥವಾ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡುವ ಜನರು ವಾಷಿಂಗ್‌ ಮೆಷಿನ್‌ಗಳನ್ನು ಖರೀದಿಸುವ ಬದಲು ಕೈಯಿಂದ ಬಟ್ಟೆ ಒಗೆಯುತ್ತಾರೆ. ನೀವು ಸಹ ಅಂತಹ ಜನರಲ್ಲಿ ಒಬ್ಬರಾಗಿದ್ದರೆ, ನಾವು ನಿಮಗಾಗಿ ಉತ್ತಮ ಉತ್ಪನ್ನದ ಬಗ್ಗೆ ತಿಳಿಸುತ್ತಿದ್ದೇವೆ. ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. ಇಂದು ನಾವು ನಿಮಗೆ ಪೋರ್ಟಬಲ್ ವಾಷಿಂಗ್ ಮೆಷಿನ್ ಬಗ್ಗೆ ಹೇಳಲಿದ್ದೇವೆ. ಇದು ಬಕೆಟ್ ಗಾತ್ರದಲ್ಲಿ ಬರುತ್ತದೆ. ಈ ವಾಷಿಂಗ್ ಮೆಷಿನ್‌ಗಳು ಅಗ್ಗ ಮತ್ತು ಒಯ್ಯಬಹುದಾದ, ಅತ್ಯಂತ ಚಿಕ್ಕದಾಗಿರುವ ವಸ್ತು. ಅಷ್ಟೇ ಅಲ್ಲದೆ, ಯಾವುದೇ ತೊಂದರೆಯಿಲ್ಲದೆ ಬಳಸಬಹುದು.


COMMERCIAL BREAK
SCROLL TO CONTINUE READING

ಇದನ್ನು ಓದಿ: Weather Update: ಹಲವು ರಾಜ್ಯಗಳು ಉಷ್ಣಾಂಶದ ಹೊಡೆತಕ್ಕೆ ತತ್ತರಿಸಲಿವೆ


ಬಕೆಟ್ ಗಾತ್ರದ ವಾಷಿಂಗ್‌ ಮೆಷಿನ್‌: 
ಹಿಲ್ಟನ್ 3 ಕೆಜಿ ಅರೆ-ಸ್ವಯಂಚಾಲಿತ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಬಕೆಟ್‌ನಷ್ಟು ಚಿಕ್ಕದಾಗಿದೆ. ನೀವು ಅದನ್ನು ಮನೆಯ ಯಾವುದೇ ಮೂಲೆಯಲ್ಲಿ ಇರಿಸಬಹುದು. ಈ ಅರೆ-ಸ್ವಯಂಚಾಲಿತ ವಾಷಿಂಗ್ ಮೆಷಿನ್ 3 ಕೆಜಿ ಸಾಮರ್ಥ್ಯದೊಂದಿಗೆ ಬರುತ್ತದೆ.ನೀವು ಒಮ್ಮೆಗೆ ಐದರಿಂದ ಆರು ಬಟ್ಟೆಗಳನ್ನು ತೊಳೆಯಬಹುದು.


ಬೆಲೆ ತುಂಬಾ ಕಡಿಮೆ: 
ಇದರಲ್ಲಿ, ನೀವು ಬಟ್ಟೆಗಳನ್ನು ಒಣಗಿಸಲು ಬಳಸಬಹುದಾದ ವಿಶೇಷ ಸ್ಪಿನ್ನರ್ ಸಹ ನೀಡಲಾಗುತ್ತದೆ. ಪ್ಲಗ್ ಇನ್ ಮಾಡುವ ಮೂಲಕ ಇದನ್ನು ಸುಲಭವಾಗಿ ಬಳಸಬಹುದು, ಇದು ಅತ್ಯಂತ ಹಗುರವಾಗಿದೆ ಮತ್ತು ಸ್ವಯಂಚಾಲಿತ ಪವರ್ ಆಫ್ ಅನ್ನು ಸಹ ಹೊಂದಿದೆ. ಈ ಮೂಲಕ ವಿದ್ಯುತ್ ಉಳಿತಾಯವೂ ಆಗುತ್ತದೆ. ಡ್ರೈಯರ್ ಬಾಸ್ಕೆಟ್‌ನೊಂದಿಗೆ ಬರುವ ವಾಷಿಂಗ್ ಮೆಷಿನ್ ಬೆಲೆ 5,999 ರೂ. ಆದರೆ ಅಮೆಜಾನ್‌ನಿಂದ 4,590 ರೂ.ಗೆ ಖರೀದಿಸಬಹುದು, ಇದರಲ್ಲಿ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳು ಸೇರಿವೆ.


ಇದನ್ನು ಓದಿ: ಮಕ್ಕಳನ್ನು ಕೆಟ್ಟ ಸಾಂಗತ್ಯದಿಂದ ದೂರವಿರಿಸಬೇಕೆ? ಹಾಗಾದ್ರೆ ಪೋಷಕರು ಈ ಸಲಹೆ ಪಾಲಿಸಿ


ಫೋಲ್ಡಬಲ್ ವಾಷಿಂಗ್ ಮೆಷಿನ್ ಟಿಫಿನ್‌ನಷ್ಟು ಚಿಕ್ಕ:
ಅಮೆಜಾನ್‌ನಲ್ಲಿ ನೀವು ಮತ್ತೊಂದು ವಿಶಿಷ್ಟವಾದ ತೊಳೆಯುವ ಯಂತ್ರವನ್ನು ಕಾಣಬಹುದು. ಅದನ್ನು ನೀವು ಬಳಸಿದ ನಂತರ ಮಡಚಿ ಇಡಬಹುದು. ಓಪನ್ಜಾ ಮಿನಿ ಫೋಲ್ಡಬಲ್ ಪೋರ್ಟಬಲ್ ವಾಷಿಂಗ್ ಮೆಷಿನ್ ಎಂಬ ಹೆಸರಿನ ಮೆಷಿನ್ ಇದಾಗಿದ್ದು, ಬಳಸಿದ ನಂತರ ಅದನ್ನು ಟಿಫಿನ್‌ನಷ್ಟು ಚಿಕ್ಕದಾಗಿ ಮಾಡಿ ಕಬೋರ್ಡ್‌ನಲ್ಲಿ ಇಡಬಹುದು. ಇದು ಯುಎಸ್‌ಬಿ ಚಾಲಿತ, ಟಾಪ್ ಲೋಡ್ ಸ್ವಯಂಚಾಲಿತ ವಾಷಿಂಗ್ ಮೆಷಿನ್ ಆಗಿದ್ದು 10 ನಿಮಿಷಗಳಲ್ಲಿ ಬಟ್ಟೆ ಒಗೆಯುತ್ತದೆ. ಇದು ವಿದ್ಯುತ್ ಮತ್ತು ನೀರು ಎರಡನ್ನೂ ಉಳಿಸುತ್ತದೆ. ಅಮೆಜಾನ್‌ನಲ್ಲಿ ನೀವು ಇನ್ನೂ ಅನೇಕ ಪೋರ್ಟಬಲ್ ವಾಷಿಂಗ್ ಮೆಷಿನ್ ಆಯ್ಕೆಗಳನ್ನು ಕಾಣಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.