ಬೆಂಗಳೂರು : ಬದಲಾಗುತ್ತಿರುವ ಋತುವಿನಲ್ಲಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ, ಅದರಲ್ಲಿಯೂ ತಲೆಹೊಟ್ಟು ಸಮಸ್ಯೆಯಿಂದ ಎಲ್ಲರೂ ತೊಂದರೆಗೊಳಗಾಗುತ್ತಾರೆ. ಅನೇಕ ಬಾರಿ, ಕೂದಲನ್ನು ಮುಟ್ಟಿದ ತಕ್ಷಣ, ತಲೆಯಿಂದ ತಲೆಹೊಟ್ಟು ಉದುರಲು ಪ್ರಾರಂಭಿಸುತ್ತದೆ. ಇದರಿಂದ ಅದೆಷ್ಟೋ ಬಾರಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಮಲಾಸೆಜಿಯಾ ಎಂಬ ಶಿಲೀಂಧ್ರವು ತಲೆಹೊಟ್ಟಿಗೆ ಕಾರಣವಾಗಿದೆ. ಇದು ಚಳಿಗಾಲದಲ್ಲಿ ಹೆಚ್ಚು ಬೆಳೆಯುತ್ತದೆ. ಇದರಿಂದಾಗಿ ಕೂದಲಿನಲ್ಲಿ ತಲೆಹೊಟ್ಟು ಬೆಳೆಯಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ತಲೆಹೊಟ್ಟು ತೊಡೆದುಹಾಕುವುದು ಬಹಳ ಮುಖ್ಯವಾಗಿದೆ. ಕೆಲವು ಮನೆಮದ್ದುಗಳ ಸಹಾಯದಿಂದಲೂ ತಲೆಹೊಟ್ಟನ್ನು ನಿವಾರಿಸಬಹುದು. ಈ ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಕೆಲವೇ ದಿನಗಳಲ್ಲಿ ತಲೆಹೊಟ್ಟನ್ನು ನಿವಾರಿಸಬಹುದು. 


COMMERCIAL BREAK
SCROLL TO CONTINUE READING

ಡ್ಯಾಂಡ್ರಫ್ ತಡೆಗೆ ಸಲಹೆಗಳು :
1. ಕೂದಲಿಗೆ ಎಣ್ಣೆ ಹಚ್ಚಬೇಡಿ :  ತಲೆಹೊಟ್ಟು ಸಮಸ್ಯೆ ಇದ್ದರೆ, ಕೂದಲಿಗೆ ಯಾವುದೇ ಕಾರಣಕ್ಕೂ ಎಣ್ಣೆ ಹಚ್ಚಬೇಡಿ. ತಲೆಹೊಟ್ಟು ಸಮಸ್ಯೆ ಇದ್ದಾಗ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಾಗುತ್ತದೆ.  ಅದಕ್ಕಾಗಿಯೇ  ತಲೆಹೊಟ್ಟಿನ ಸಮಸ್ಯೆ ಇದ್ದಾಗ ಕೂದಲಿಗೆ ಎಣ್ಣೆ ಹಚ್ಚಲು ಹೋಗಬೇಡಿ.   


ಇದನ್ನೂ ಓದಿ : ಕೂದಲ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಜ್ಯೂಸ್


2. ಕೊಳಕು ಬಾಚಣಿಗೆಯನ್ನು ಬಳಸಬೇಡಿ : ತಲೆಹೊಟ್ಟು ಸಮಸ್ಯೆಯಿಂದ  ಬಳಲುತ್ತಿದ್ದರೆ, ಬೇರೆಯವರು ಬಳಸಿರುವ ಬಾಚಣಿಕೆಯನ್ನು ಬಳಸಲು ಹೋಗಬೇಡಿ. ನಿಮಗಾಗಿಯೇ ಪ್ರತ್ಯೇಕ ಬಾಚಣಿಕೆಯನ್ನು ಬಳಸಿ. ನೀವು ಬಳಸುವ ಬಾಚಣಿಕೆಯನ್ನು ಕೂಡಾ ಆಗಾಗ ಸ್ವಚ್ಛಗೊಳಿಸುತ್ತಿರಿ.  


3. ವ್ಯಾಯಾಮದ ನಂತರ ಕೂದಲನ್ನು ತೊಳೆಯಿರಿ :  ನೀವು ದೈನಂದಿನ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯನ್ನು ಮಾಡುತ್ತಿದ್ದರೆ, ಕೂದಲು ಬೆವರುತ್ತದೆ. ಈ ಸಂದರ್ಭದಲ್ಲಿ, ತಕ್ಷಣ ನಿಮ್ಮ ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ಇಲ್ಲವಾದರೆ ತಲೆಹೊಟ್ಟಿನ ಸಮಸ್ಯೆ ಅಧಿಕವಾಗುತ್ತದೆ. 


4. ಕೂದಲನ್ನು ಸ್ವಚ್ಛವಾಗಿಡಿ : ತಲೆಹೊಟ್ಟು ಹೋಗಲಾಡಿಸಲು, ನೆತ್ತಿಯ ನೈರ್ಮಲ್ಯಕ್ಕೆ ಗಮನ ಕೊಡಿ.  ಅಂದರೆ ವಾರಕ್ಕೆ 3-4 ಬಾರಿ ಕೂದಲನ್ನು ತೊಳೆಯಿರಿ. ಇದಕ್ಕಾಗಿ ನೀವು ಶೇಕಡಾ 2 ರಷ್ಟು ಕೆಟೋಕೊನಜೋಲ್ ಅಥವಾ ಜಿಂಕ್ ಪೈರಿಥಿಯೋನ್ ಆಧಾರಿತ ಶಾಂಪೂವನ್ನು ಬಳಸಬಹುದು. 


ಇದನ್ನೂ ಓದಿ : Health Tips: ಸಕ್ಕರೆ ಕಾಯಿಲೆ ಇರುವವರಿಗೆ ಈ ಸಿಹಿ ಹಣ್ಣು ಒಂದು ವರದಾನವಿದ್ದಂತೆ!


5. ಕೂದಲನ್ನು ಹೆಚ್ಚು ಹೊತ್ತು ಕವರ್ ಮಾಡಿ ಇಟ್ಟುಕೊಳ್ಳಬೇಡಿ : ನೀವು ಬಿಸಿಲಿಗೆ ಹೋಗುವಾಗ ಟೋಪಿ ಅಥವಾ ಕ್ಯಾಪ್ ಧರಿಸುವ ಅಭ್ಯಾಸವಿದ್ದರೆ ಹೆಚ್ಚು ಹೊತ್ತು ಆ ರೀತಿ ಮಾಡಬೇಡಿ. ಕೂದಲನ್ನು ದೀರ್ಘಕಾಲದವರೆಗೆ ಮುಚ್ಚಿಕೊಳ್ಳುವುದರಿಂದ ಹೆಚ್ಚು ಬೆವರುತ್ತದೆ. ಇದು ಕೂದಲಿನ ತಲೆಹೊಟ್ಟು ಸಮಸ್ಯೆಗೆ ಕಾರಣವಾಗುತ್ತದೆ.


( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.