Tea Stain Clean : ಚಹಾ ಕುಡಿಯುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಕಕೆಲವರಿಗೆ ನಿದ್ದೆ ಓಡಿಸಲು ಚಹಾ ಬೇಕು. ಇನ್ನು ಕೆಲವರಿಗೆ ಒತ್ತಡ ನಿವಾರಿಸಲು ಚಹಾ ಬೇಕು. ಹೀಗೆ ಚಹಾ ಹೀರುವಾಗ ಚಹಾ ಬಟ್ಟೆ ಮೇಲೆ ಬಿದ್ದರೆ?  ಅದು ಕೂಡಾ ಬಿಳಿ ಬಟ್ಟೆ ಮೇಲೆ ಬಿದ್ದರೆ ಚಹಾದ ಕಲೆ ಸುಲಭವಾಗಿ ಹೋಗುವುದಿಲ್ಲ. ಆದರೆ ಮನೆಯಲ್ಲಿಯೇ ಕುಳಿತು ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ  ಬಿಳಿ ಬಟ್ಟೆಯಲ್ಲಾಗುವ   ಚಹಾ ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. 


COMMERCIAL BREAK
SCROLL TO CONTINUE READING

ತಣ್ಣೀರಿನಿಂದ ತೊಳೆಯಿರಿ  :
ಬಿಳಿ ಶರ್ಟ್‌ನಿಂದ ಚಹಾ ಕಲೆಗಳನ್ನು ತೆಗೆದುಹಾಕಲು, ಮೊದಲು ಬಟ್ಟೆಯನ್ನು ತಣ್ಣನೆಯ ನೀರಿನಲ್ಲಿ ನೆನೆಸಿಡಬೇಕು. ಅದರಲ್ಲೂ ವಿಶೇಷವಾಗಿ ನೀರಿನ ರಭಸ ಹೆಚ್ಚಿರುವ ಟ್ಯಾಪ್ ಅಡಿಯಲ್ಲಿ ಕಲೆ ಇರುವ ಬಟ್ಟೆಯನ್ನು ಇಟ್ಟು ನೆನೆಸಿ. 


ಇದನ್ನೂ ಓದಿ : Relationship At Risk : ಲವರ್‌ ಜೊತೆ ಬ್ರೇಕಪ್‌ ಆಗಲಿದೆ ಎಂಬುದರ ಸೂಚನೆ ಇದು!


ಬಟ್ಟೆ ಸೋಪು : 
ಶರ್ಟ್ ಅನ್ನು ಸಂಪೂರ್ಣವಾಗಿ ನೆನೆಸಿದ ನಂತರ, ಕಲೆ ಆಗಿರುವ ಜಾಗದಲ್ಲಿ ಲಾಂಡ್ರಿ ಡಿಟರ್ಜೆಂಟ್ ಅನ್ನು ಹಾಕಿ, ಅರ್ಧ ಘಂಟೆಯವರೆಗೆ ಬಿಡಿ. ನಂತರ ಮತ್ತೊಮ್ಮೆ ಆ ಬಟ್ಟೆಯನ್ನು ಶುದ್ಧ ನೀರಿನಿಂದ ತೊಳೆಯಿರಿ.  ಇಷ್ಟು ಮಾಡಿಯೂ ಕಲೆಗಳು  ಹೋಗದಿದ್ದರೆ, ಮತ್ತೆ ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. 


ಅಡಿಗೆ ಸೋಡಾ ಬಳಸಿ :
ಬಿಳಿ ಬಟ್ಟೆಯ ಮೇಲಾದ ಚಹಾ ಕಲೆಗಳನ್ನು ತೆಗೆದುಹಾಕಲು ಅಡಿಗೆ ಸೋಡಾವನ್ನು ಬಳಸಬಹುದು. ಇದಕ್ಕಾಗಿ ಸ್ವಲ್ಪ ಬೇಕಿಂಗ್ ಸೋಡಾವನ್ನು ಟೀ ಕಲೆ ಇರುವ ಜಾಗಕ್ಕೆ ಹಚ್ಚಿ. ಇದನ್ನು 12 ಗಂಟೆಗಳ ಕಾಲ ಶರ್ಟ್ ಮೇಲೆ ಬಿಡಿ. ಇದು ಶರ್ಟ್‌ನಿಂದ ಕಲೆಯನ್ನು ಹೀರಿಕೊಳ್ಳುತ್ತದೆ. 12 ಗಂಟೆಗಳ ನಂತರ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ : ಹಳದಿ ಹಲ್ಲುಗಳ ಸಮಸ್ಯೆಯಿಂದ ಪರಿಹಾರ ಪಡೆಯಲು ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ


ಸ್ಟೇನ್  ರೆಮೊವರ್ ಬಳಸಿ : 
ಅಡಿಗೆ ಸೋಡಾದ ಬಳಕೆಯು ಬಿಳಿ ಅಂಗಿಯ ಮೇಲಿನ ಕಲೆಗಳನ್ನು ತೆಗೆದುಹಾಕದಿದ್ದರೆ, ಸ್ಟೇನ್ ರಿಮೂವರ್ ಅನ್ನು ಬಳಸಬಹುದು. ಸ್ಟೇನ್ ರಿಮೂವರ್ ಮಾರುಕಟ್ಟೆಯಲ್ಲಿ ಜೆಲ್, ಸ್ಪ್ರೇ, ಪುಡಿ ಮತ್ತು ದ್ರವ ರೂಪದಲ್ಲಿ ಸಿಗುತ್ತದೆ. ಇದರೊಂದಿಗೆ, ಮೊಂಡುತನದ ಚಹಾ ಕಲೆಗಳು ಕೆಲವೇ ನಿಮಿಷಗಳಲ್ಲಿ ಮಾಯವಾಗುತ್ತವೆ.


 



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.