Panipuri History: ಪಾನಿ ಪುರಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ದೇಶದ ಪ್ರತಿಯೊಂದು ರಸ್ತೆ ಬದಿಯ ಅಂಗಡಿಯಿಂದ ಹಿಡಿದು ಪಂಚತಾರಾ ಹೋಟೆಲ್ ಗಳಲ್ಲಿಯೂ ಇದನ್ನು ತಯಾರಿಸಲಾಗುತ್ತದೆ. ಅಷ್ಟರ ಮಟ್ಟಿಗೆ ಈ ಖಾದ್ಯ ಜನಪ್ರಿಯವಾಗಿದೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ ಪಾನಿಪುರಿಗೆ ಪ್ರದೇಶವಾರು ವಿವಿಧ ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ.ಅದರಲ್ಲೂ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದಲ್ಲಿ ಇದಕ್ಕೆ ಪಾನಿಪುರಿ ಎಂದು ಕರೆದರೆ ಹರಿಯಾಣದಲ್ಲಿ ಪಾನಿ-ಪಟಾಶಿ, ಮಧ್ಯಪ್ರದೇಶದಲ್ಲಿ ಫುಲ್ಕಿ, ಉತ್ತರ ಪ್ರದೇಶದಲ್ಲಿ ಪಾನಿ-ಕೆ-ಬತಾಶೆ ಮತ್ತು ಅಸ್ಸಾಂನಲ್ಲಿ ಫುಸ್ಕಾ ಎಂದು ಕರೆಯುತ್ತಾರೆ.ದೆಹಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಇದಕ್ಕೆ ಗೋಲ್ಗಪ್ಪ/ಫುಚ್ಕಾ ಎಂದು ಸಹ ಕರೆಯುತ್ತಾರೆ.


ಇದನ್ನೂ ಓದಿ: ಈ ರಾಶಿಯವರಿಗೆ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ !ನಿರಂತರ ರಾಜಯೋಗದಿಂದ ಕುಚೇಲ ಕೂಡಾ ಕುಬೇರನಾಗುವ ಕಾಲ ! ಬೆನ್ನ ಹಿಂದೆಯೇ ಇರುವಳು ಮಹಾ ಲಕ್ಷ್ಮೀ


ಪಾನಿ ಪುರಿ ಹುಟ್ಟಿದ್ದು ಹೇಗೆ ಗೊತ್ತೇ?


ಪಾನಿ ಪುರಿಯ ಮೂಲವನ್ನು ಹುಡುಕುತ್ತಾ ಹೊರಟಾಗ ಇದರ ಕಥನ ಮಹಾಭಾರತದವರೆಗೂ ತಲುಪುತ್ತದೆ. ಹೌದು, ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಗೆ ಅಳಿದುಳಿದ ತರಕಾರಿ ಹಾಗೂ ಹಿಟ್ಟಿನಲ್ಲಿ ಏನಾದರೂ ವಿಶೇಷ ಖಾದ್ಯವನ್ನು ತಯಾರಿಸು ಎಂದು ಅತ್ತೆ ಕುಂತಿ ದ್ರೌಪದಿಗೆ ಆದೇಶಿಸುತ್ತಾಳೆ.ಆಗ ಪಾನಿಪುರಿಯಂತ ವಿಶಿಷ್ಟ ಖಾದ್ಯವನ್ನು ಸಿದ್ದಪಡಿಸುವ ಮೂಲಕ ದ್ರೌಪದಿ ಕುಂತಿಯಿಂದ ಶಬಾಸ್ ಹೇಳಿಸಿಕೊಳ್ಳುತ್ತಾಳೆ.ಅಂದಿನಿಂದ ಭಾರತದ ಉಪಖಂಡದಾದ್ಯಂತ ಈ ಆಹಾರ ಪದಾರ್ಥವನ್ನು ಸೇವಿಸಲಾಗುತ್ತದೆ.ಹಾಗಾಗಿ ಇಂದು ದೇಶದೆಲ್ಲೆಡೆ ಈ ಆಹಾರ ಪದಾರ್ಥ ಕಂಡು ಬರುತ್ತದೆ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಘಾತ !8 ನೇ ವೇತನ ಆಯೋಗ ಜಾರಿ ಇಲ್ಲ ! ಇನ್ನು ಮುಂದೆ ಈ ನಿಯಮದಡಿ ವೇತನ ಹೆಚ್ಚಳ


ಇತಿಹಾಸ ಹೇಳುವುದೇನು?


ಪಾಕಶಾಲೆಯ ಮಾನವಶಾಸ್ತ್ರಜ್ಞ ಕುರುಷ್ ದಲಾಲ್ ಪ್ರಕಾರ ಪಾನಿಪುರಿ ಇಂದಿನ ಬಿಹಾರದಲ್ಲಿ ಆಕಸ್ಮಿಕವಾಗಿ ರಾಜ ಕಚೋರಿಯಿಂದ ಇದು ಜನ್ಮ ತಾಳಿದೆ ಎಂದು ಹೇಳುತ್ತಾರೆ.20ನೇ ಶತಮಾನದಲ್ಲಿ ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜನರು ವಲಸೆ ಹೋಗಿದ್ದರಿಂದಾಗಿ ಪಾನಿಪುರಿ ಭಾರತದ ಉಳಿದ ಭಾಗಗಳಿಗೆ ಹರಡಿದೆ. ಈಗ ಇದರ ಖ್ಯಾತಿ ಎಷ್ಟರ ಮಟ್ಟಿಗೆ ಹರಡಿದೆ ಎಂದರೆ 2005 ರಲ್ಲಿ ಪಾನಿಪುರಿ ಪದವನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿಯೂ ಸೇರಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ