Health Tips: ಆಹಾರ ಹಾಳಾಗದಂತೆ ರಕ್ಷಿಸಲು ರೆಫ್ರಿಜರೇಟರ್‌ ಅನ್ನು ಬಳಸಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದಲೇ ಅವು ಕೆಡುತ್ತವೆ. ಅಷ್ಟೇ ಅಲ್ಲ, ಆ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಲೂಬಹುದು. 


COMMERCIAL BREAK
SCROLL TO CONTINUE READING

ಹೌದು, ರೆಫ್ರಿಜರೇಟರ್‌ (Refrigerator) ಬಳಸುವಾಗ ಯಾವ ರೀತಿಯ ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸಬಹುದು ಮತ್ತು ಯಾವ ಆಹಾರಗಳನ್ನು ಅದರಲ್ಲಿ ಇಡಬಾರದು ಎಂಬ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಅದರಿಂದ ಪ್ರಯೋಜನವಾಗುವ ಬದಲಿಗೆ ಮಾರಕವಾಗಬಹುದು. 


ವಾಸ್ತವವಾಗಿ, ಕೆಲವು ಆಹಾರ (Food) ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರ ರುಚಿ ಕೆಡುತ್ತದೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಕೆಲವು ಆಹಾರಗಳನ್ನು ಶೈತ್ಯೀಕರಣಗೊಳಿಸುವುದರಿಂದ ಅದರ ರುಚಿ, ವಿನ್ಯಾಸವಷ್ಟೇ ಅಲ್ಲ ಅದು ಆರೋಗ್ಯಕ್ಕೂ ಮಾರಕವಾಗಿ ಪರಿಣಮಿಸಬಹುದು. ಹಾಗಿದ್ದರೆ, ಯಾವ ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು ಎಂದು ನೋಡುವುದಾದರೆ... 


ಇದನ್ನೂ ಓದಿ- ಮೊಟ್ಟೆಗೆ ಈ ಕಾಯಿಯ ಪುಡಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು 10 ನಿಮಿಷದಲ್ಲಿ ಬುಡ ಸಮೇತ ಕಪ್ಪಾಗುವುದು !


ಈ ಆಹಾರಗಳನ್ನು ಮರೆತೂ ಸಹ ರೆಫ್ರಿಜರೇಟರ್‌ನಲ್ಲಿ ಇಡುವ ತಪ್ಪನ್ನು ಮಾಡಬೇಡಿ: 
ಕಲ್ಲಂಗಡಿ: 

ಕಲ್ಲಂಗಡಿಗಳಲ್ಲಿ (Watermelon) 40 ಪ್ರತಿಶತ ಹೆಚ್ಚು ಲೈಕೋಪೀನ್ ಮತ್ತು 139 ಪ್ರತಿಶತದಷ್ಟು ಬೀಟಾ ಕ್ಯಾರೋಟಿನ್ ಅಂಶವಿದೆ. ಕತ್ತರಿಸದ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಇದು ಇದರ ರುಚಿ, ವಿನ್ಯಾಸ ಎರಡೂ ಬದಲಾಗುತ್ತದೆ. 


ಟೊಮಾಟೊ: 
ನಮ್ಮಲ್ಲಿ ಬಹಳಷ್ಟು ಜನರು ಟೊಮಾಟೊ (Tomato) ಹಾಳಾಗದಂತೆ ತಪ್ಪಿಸಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುತ್ತಾರೆ. ಆದರೆ, ಟೊಮಾಟೊವನ್ನು ಫ್ರಿಡ್ಜ್ ಗಿಂತ ಕೋಣೆಯ ಸಾಮಾನ್ಯ ತಾಪಮಾನದಲ್ಲಿ ಆದರೆ ಸೂರ್ಯನ ನೇರ ಕಿರಣಗಳು ಬೀಳದಂತೆ ಇಡುವುದು ಹೆಚ್ಚು ಸೂಕ್ತ. 


ಆಲೂಗಡ್ಡೆ: 
ಆಹಾರದ ರುಚಿ ಹೆಚ್ಚಿಸುವ ಆಲೂಗಡ್ಡೆಯನ್ನು (Potato) ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದಾಗ ಅದರ ಸ್ವಾದದ ಜೊತೆಗೆ ಅದರಲ್ಲಿರುವ ಉತ್ತಮ ಅಂಶಗಳು ಕೂಡ ಕಳೆದು ಹೋಗುತ್ತದೆ. ಇಂತಹ ಆಲೂಗಡ್ಡೆ ಸೇವನೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. 


ಇದನ್ನೂ ಓದಿ- Belly Fat Loss: ಹೊಟ್ಟೆಯನ್ನು ಕರಗಿಸಲು ಬಲು ಲಾಭದಾಯಕ ಈ 5 ಮಾರ್ನಿಂಗ್ ಡ್ರಿಂಕ್ಸ್


ಈರುಳ್ಳಿ: 
ಈರುಳ್ಳಿಯನ್ನು (Onion) ರೆಫ್ರಿಜರೇಟರ್‌ನಲ್ಲಿ ಇಟ್ಟಾಗ ಅದರ ಬಣ್ಣ ನಿಧಾನವಾಗಿ ಬದಲಾಗುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಬಹುದು. ಹಾಗಾಗಿ ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡದಂತೆ ಸಲಹೆ ನೀಡಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.