ಆಧುನಿಕ ಜೀವನಶೈಲಿಯಲ್ಲಿ ಪ್ರತಿ ಮನೆಯಲ್ಲೂ ಫ್ರಿಡ್ಜ್‌ ಇದ್ದೇ ಇರುತ್ತದೆ. ಇದು ನಮ್ಮ ಆಹಾರವನ್ನು ಸಂರಕ್ಷಿಸಲು ಮತ್ತು ಅದರ ಗುಣಮಟ್ಟವನ್ನು ಕಾಪಾಡಲು ಸಹಾಯಕ ಎಂದು ನಂಬಲಾಗಿದೆ. ಆದರೆ ಕೆಲವು ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಒಳ್ಳೆಯದಲ್ಲ. ಫ್ರಿಡ್ಜ್‌ನಲ್ಲಿ ಇಡುವುದರಿಂದ ಆಹಾರದಲ್ಲಿರುವ ಪೌಷ್ಟಿಕಾಂಶದ ಗುಣಮಟ್ಟ ಕಡಿಮೆಯಾಗುತ್ತದೆ. ಇನ್ನೂ ಕೆಲವು ಆಹಾರ ಪದಾರ್ಥಗಳು ಹಾಳಾಗಲುಬಹುದು. 


COMMERCIAL BREAK
SCROLL TO CONTINUE READING

1) ಬ್ರೆಡ್: ಬ್ರೆಡ್ ಅನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದು ವೇಗವಾಗಿ ಒಣಗಲು ಕಾರಣವಾಗುತ್ತದೆ. ಬದಲಾಗಿ, ಕೋಣೆಯ ಉಷ್ಣಾಂಶದಲ್ಲಿ ಬ್ರೆಡ್‌ ಇಡುವುದು ಉತ್ತಮ. ಆದರೆ ಇದನ್ನು ನಾಲ್ಕು ದಿನಗಳಲ್ಲಿ ಸೇವಿಸಬೇಕು. 


ಇದನ್ನೂ ಓದಿ: Yoga: ಬಂಜೆತನ ತಡೆಯಲು ಮಹಿಳೆಯರು ಈ 5 ಆಸನಗಳನ್ನು ಅಭ್ಯಾಸ ಮಾಡಿ


2) ಗಿಡಮೂಲಿಕೆಗಳು: ತಾಜಾ ಗಿಡಮೂಲಿಕೆಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಬೇಗನೆ ಒಣಗುತ್ತವೆ. ತಾಜಾ ಮತ್ತು ಗರಿಗರಿಯಾಗಿ ಇರಿಸಿಕೊಳ್ಳಲು ನೀವು ಅವುಗಳನ್ನು ನೀರು ತುಂಬಿದ ಗಾಜಿನ ಜಾರ್‌ನಲ್ಲಿ ಇರಿಸಬಹುದು.


3) ಆಲೂಗಡ್ಡೆ:  ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ವಾಸನೆ ಬರುತ್ತದೆ. ಆದ್ದರಿಂದ ಅವುಗಳನ್ನು ಕಾಗದದ ಚೀಲಗಳಲ್ಲಿ ಸಂಗ್ರಹಿಸುವುದು ಉತ್ತಮ. ನೆನಪಿಡಿ, ಪ್ಲಾಸ್ಟಿಕ್ ಚೀಲಗಳು ತೇವಾಂಶವನ್ನು ಉತ್ತೇಜಿಸುತ್ತದೆ ಮತ್ತು ಕೊಳೆಯುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.


4) ಹಣ್ಣುಗಳು: ಆವಕಾಡೊ, ಸೇಬು, ಬಾಳೆಹಣ್ಣುಗಳು, ಸಿಟ್ರಸ್ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸುತ್ತಾರೆ. ಆದರೆ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ಸುವಾಸನೆ ಮತ್ತು ಟೆಕಶ್ಚರ್ ನಷ್ಟವಾಗುತ್ತದೆ.


5) ಈರುಳ್ಳಿ:  ಕಾಗದದ ಚೀಲದಲ್ಲಿ ಈರುಳ್ಳಿಯನ್ನು ಸಂಗ್ರಹಿಸಲು ಉತ್ತಮ ಮಾರ್ಗವಾಗಿದೆ. ಫ್ರಿಡ್ಜ್‌ನಲ್ಲಿ ಇಡುವುದರಿಂದ ಈರುಳ್ಳಿ ಕೊಳೆಯಲು ಕಾರಣವಾಗಬಹುದು. 


6) ಟೊಮೆಟೊ: ಟೊಮ್ಯಾಟೊಗಳು ತಮ್ಮ ಪರಿಮಳವನ್ನು ಕಳೆದುಕೊಳ್ಳುತ್ತವೆ ಮತ್ತು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದಾಗ ಮೆತ್ತಗಾಗಲು ಪ್ರಾರಂಭಿಸುತ್ತವೆ.  


8) ಕೆಚಪ್, ಸೋಯಾ ಸಾಸ್: ಕೆಚಪ್, ಸೋಯಾ ಸಾಸ್ ಅನ್ನು ತೆರೆದ ನಂತರವೂ ಫ್ರಿಡ್ಜ್‌ನಲ್ಲಿಡದೇ ಬಳಸಬಹುದು. ಇದು ಉತ್ತಮವಾಗಿರುತ್ತದೆ. 


9) ತೈಲಗಳು: ಬಹುತೇಕ ಎಲ್ಲಾ ತೈಲಗಳು ಕೋಣೆಯ ಉಷ್ಣಾಂಶದಲ್ಲಿ ಶೇಖರಿಸಿಡಲು ಸುರಕ್ಷಿತವಾಗಿದೆ. ಆದ್ದರಿಂದ ಅದನ್ನು ಡಾರ್ಕ್ ಕ್ಯಾಬಿನೆಟ್ ಅಥವಾ ಫ್ರಿಜ್ ಬಾಗಿಲಿನಲ್ಲಿ ಸಂಗ್ರಹಿಸಿ.  


ಇದನ್ನೂ ಓದಿ: ಈ ನಾಲ್ಕು ವಸ್ತುಗಳಿಂದ ದೂರವಿದ್ದರೆ ಕೊಲೆಸ್ಟ್ರಾಲ್ ಸಮಸ್ಯೆ ಕಾಡುವುದೇ ಇಲ್ಲ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.