Planatory Transit 2022 - ಜೋತಿಷ್ಯ ಶಾಸ್ತ್ರದಲ್ಲಿ ಗುರುಗ್ರಹಕ್ಕೆ ವಿಶೇಷ ಸ್ಥಾನವಿದೆ. ಗುರುಗ್ರಹದ ರಾಶಿ ಪರಿವರ್ತನೆ, ಗುರು ಅಸ್ತ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ. ಗುರುವು ಜ್ಞಾನ, ಬೆಳವಣಿಗೆ, ಶಿಕ್ಷಕ, ಮಕ್ಕಳು, ಸಂಪತ್ತು, ದಾನ ಮತ್ತು ಪುಣ್ಯ ಇತ್ಯಾದಿಗಳಿಗೆ ಸಂಬಂಧಿಸಿದೆ. ಹೀಗಾಗಿ ಗುರಿವಿನ ಸ್ಥಾನಪಲ್ಲಟ ಹಲವು ರಾಶಿಗಳ ಪಾಲಿಗೆ ಶುಭಾವಾಗಿರಲಿದೆ. ಗುರು 13ನೇ ಏಪ್ರಿಲ್ 2022 ರಂದು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ನಂತರೆ ಗುರುವಿನ ರಾಶಿ ಪರಿವರ್ತನೆ ಏಪ್ರಿಲ್ 2023 ರಲ್ಲಿ ಮತ್ತೆ ಸಂಭವಿಸಲಿದೆ. ಇಂತಹ  ಪರಿಸ್ಥಿತಿಯಲ್ಲಿ, ಗುರು ಸುಮಾರು ಒಂದು ವರ್ಷದವರೆಗೆ ಒಂದೇ ರಾಶಿಯಲ್ಲಿ ಇರಲಿದ್ದಾನೆ ಎಂದರೆ ತಪ್ಪಾಗಲಾರದು. ಗುರುವಿನ ಈ ಸ್ಥಾನದಿಂದ ಹಲವು ರಾಶಿಗಳಿಗೆ ಲಾಭ ಸಿಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 

COMMERCIAL BREAK
SCROLL TO CONTINUE READING

ವೃಷಭ ರಾಶಿ - ನಿಮ್ಮ ಜನ್ಮ ಜಾತಕದ 11ನೇ ಭಾವದಲ್ಲಿ ಗುರು ಗೋಚರ ಸಂಭವಿಸಿದೆ. ಸಾಮಾನ್ಯವಾಗಿ ಈ ಭಾವವನ್ನು ಆದಾಯ ಹಾಗೂ ಲಾಭದ ಭಾವ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಗುರುಗ್ರಹದ ಪ್ರಭಾವದಿಂದ ವ್ಯಾಪಾರಿಗಳ ಲಾಭ ಹೆಚ್ಚಾಗಲಿದೆ. ಆದಾಯದ ಹೊಸ ಮಾರ್ಗಗಳು ಹುಟ್ಟಿಕೊಳ್ಳಲಿವೆ. ನಿಮ್ಮ ಕಾರ್ಯಕ್ಷಮತೆಯಲ್ಲಿ ವೇಗ ಕಾಣಿಸಿಕೊಳ್ಳುವ ಕಾರಣ ಮೇಲಾಧಿಕಾರಿಗಳು ಸಂತಸಗೊಳ್ಳಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾಯಕಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಪಾಲಿಗೆ ಸಮಯ ಅದ್ಭುತವಾಗಿರಲಿದೆ. ದೀರ್ಘಾವಧಿಯ ಕಾಯಿಲೆಯಿಂದ ಮುಕ್ತಿ ಸಿಗಲಿದೆ.

ಮಿಥುನ ರಾಶಿ -  ಗುರು ಗ್ರಹದ ಗೋಚರ ನಿಮ್ಮ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ. ಮುಂದಿನ ಒಂದು ವರ್ಷ ಗುರುಗ್ರಹದ ಕೃಪೆಯಿಂದ ನಿಮಗೆ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ. ಗುರು ನಿಮ್ಮ ಜನ್ಮ ಜಾತಕದ ದಶಮ ಭಾವದಲ್ಲಿ ಗೋಚರಿಸಿದ್ದಾನೆ. ಇದನ್ನು ನೌಕರಿ ಹಾಗೂ ಕಾರ್ಯಕ್ಷೇತ್ರದ ಭಾವ ಎಂದು ಕರೆಯಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಹೊಸ ನೌಕರಿಯ ಆಫರ್ ಬರುವ ಸಸಾಧ್ಯತೆ ಇದೆ. ಪದೋನ್ನತಿ, ಆದಾಯ ವೃದ್ಧಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನೌಕರಿಯನ್ನು ಬದಲಾಯಿಸುವಾಗ ಧೈರ್ಯದಿಂದ ವರ್ತಿಸಬೇಕಾಗಲಿದೆ. ಮಾರ್ಕೆಟಿಂಗ್ ಹಾಗೂ ಮೀಡಿಯಾಗೆ ಸಂಬಂಧಿಸಿದ ಜನರಿಗೆ ಈ ಸಮಯ ವಿಶೇಷ ಲಾಭಕಾರಿ ಸಾಬೀತಾಗಲಿದೆ. ಬುಧ ಮಿಥುನ ರಾಶಿಗೆ ರಾಷ್ಯಾಧಿಪನಾಗಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಹಾಗೂ ಗುರುವಿನ ನಡುವೆ ಸ್ನೇಹಭಾವದ ಸಂಬಂಧವಿದೆ. ಹೀಗಾಗಿ ಈ ಸಮಯ ನಿಮಗೆ ಲಾಭಕಾರಿಯಾಗಿರಲಿದೆ.


ಇದನ್ನೂ ಓದಿ-Zodiac signs: ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುವವರು ಈ ರಾಶಿಯವರೇ..!

ಕರ್ಕ ರಾಶಿ - ಕರ್ಕ ರಾಶಿಯ ಜನರ ಜೀವನವನ್ನು ಗುರು ಸುಖದಿಂದ ತುಂಬಲಿದ್ದಾನೆ. ನಿಮ್ಮ ರಾಶಿಯ ನವಮ ಭಾವದಲ್ಲಿ ಗುರುವಿನ ಗೋಚರ ಸಂಭವಿಸಿದೆ. ಇದನ್ನು ಭಾಗ್ಯ ಹಾಗೂ ವಿದೇಶ ಯಾತ್ರೆಯ ಸ್ಥಾನ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ದೀರ್ಘಾವಧಿಯಿಂದ ನಿಂತು ಹೋದ ಕೆಲಸಕಾರ್ಯಗಳು ಪೂರ್ಣಗೊಳ್ಳಲಿವೆ. ಉದ್ಯಮಕ್ಕೆ ಸಂಬಂಧಿಸಿದ ಯಾತ್ರೆಯಿಂದ ಲಾಭ ಸಿಗಲಿದೆ. ಆಹಾರ, ಹೋಟೆಲ್ ಅಥವಾ ರೆಸ್ಟಾರೆಂಟ್ ಗಳಿಗೆ ಸಂಬಂಧಿಸಿದ ವ್ಯಾಪಾರಿಗೆಲಿಗೆ ಧನಲಾಗದ ಪ್ರಬಲ ಯೋಗಗಳು ಗೋಚರಿಸುತ್ತಿವೆ. ಗುರುಗ್ರಹ ನಿಮ್ಮ ರಾಶಿಗ್ಯ ಆರನೇ ಭಾವದ ಅಧಿಪತಿಯಾಗಿದ್ದಾನೆ. ಇದನ್ನು ಶತ್ರುವಿನ ಭಾವ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ನೀವು ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ಜಾತಕದವರಿಗೆ ಈ ಸಮಯ ಶುಭವಾಗಿರಲಿದೆ. 


ಇದನ್ನೂ ಓದಿ-ಗಾಯತ್ರಿ ಮಂತ್ರ ಜಪಿಸುವಾಗ ಈ ರೀತಿಯ ತಪ್ಪು ಮಾಡಬೇಡಿ.. ಯಾವುದೇ ಫಲ ಸಿಗುವುದಿಲ್ಲ!

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ