ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿಯನ್ನು ಬಹಳ ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ (Astrology)ಪ್ರಕಾರ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬರಲು ಸುಮಾರು ಎರಡೂವರೆ ವರ್ಷ ಬೇಕಾಗುತ್ತದೆ (Shani Rashi parivarthane). ಪ್ರಸ್ತುತ ಶನಿಯು ಮಕರ ರಾಶಿಯಲ್ಲಿದ್ದಾನೆ.   ಆದರೆ ಶೀಘ್ರದಲ್ಲೇ ಶನಿ ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಶನಿದೇವನು (Shani deva) ರಾಶಿಚಕ್ರವನ್ನು ಬದಲಾಯಿಸಿದಾಗ, ಕೆಲವು ರಾಶಿಯವರಿಗೆ ಶನಿ ಧೈಯ್ಯಾ (Shani Dhaiyya)ಅಥವಾ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗುತ್ತದೆ. ಇನ್ನು ಕೆಲವು ರಾಶಿಯವರಿಗೆ ಶನಿ ಸಾಡೇ ಸಾತಿ (Shani sadesati) ಅಥವಾ ಏಳೂವರೆ  ವರ್ಷದ ಶನಿ ದೆಸೆ ಶುರುವಾಗುತ್ತದೆ.  ಯಾರ ಜೀವನದಲ್ಲಿ ಶನಿ ದೆಸೆ ಆರಂಭವಾಗುತ್ತದೆಯೋ ಅಲ್ಲಿ ಕಷ್ಟ-ನಷ್ಟ ನೋವುಗಳು ಕೂಡಾ  ಆರಂಭ ಎಂದೇ ಹೇಳಲಾಗುತ್ತದೆ.  ಈ ಬಾರಿ ಶನಿ ಸಂಕ್ರಮಣದ ನಂತರ ಕೆಲವು ರಾಶಿಗಳು ಶನಿ ಮಹಾ ದೆಸೆಯಿಂದ ಸಂಪೂರ್ಣ ಮುಕ್ತಿ ಪಡೆಯಲಿದೆ. 


ಇದನ್ನೂ ಓದಿ : Weekly Horoscope: ಮುಂದಿನ 7 ದಿನ ಈ ರಾಶಿಗಳ ಜನರ ಭಾಗ್ಯ ಹೊಳೆಯಲಿದೆ, ನಿಮ್ಮ ರಾಶಿ ಯಾವುದು?


2022 ರಲ್ಲಿ ಈ ರಾಶಿಯ ಜನರಿಗೆ ಶನಿ ಸಾಡೇ ಸಾತಿಯಿಂದ ಸಿಗಲಿದೆ ಮುಕ್ತಿ  :
29 ಏಪ್ರಿಲ್ 2022 ರಂದು, ಶನಿಯು ಮಕರ ರಾಶಿಯನ್ನು (Capricorn)ತೊರೆದು ಕುಂಭ ರಾಶಿಯನ್ನು (Aquarius) ಪ್ರವೇಶಿಸುತ್ತಾನೆ. ಶನಿಯ ರಾಶಿ ಬದಲಾವಣೆಯ ಪರಿಣಾಮವಾಗಿ  ಧನು ರಾಶಿಯವರೂ ಶನಿ ಸಾಡೇಸಾತಿ ಅಂದರೆ ಏಳೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಹೊಂದುತ್ತಾರೆ.  ಮಾತ್ರವಲ್ಲ, ಮಿಥುನ ಮತ್ತು ತುಲಾ ರಾಶಿಯವರಿಗೂ (Libra) ಕೂಡಾ ಶನಿ ಧೈಯ್ಯಾದಿಂದ ಪರಿಹಾರ ಸಿಗುತ್ತದೆ.  


ಈ ರಾಶಿಚಕ್ರ ಚಿಹ್ನೆಗಳಿಗೆ ಎದುರಾಗಲಿದೆ ಸಂಕಷ್ಟ : 
ಶನಿಯು ಸುಮಾರು 30 ವರ್ಷಗಳ ನಂತರ ಏಪ್ರಿಲ್ 29, 2022 ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಸಾಗಲಿದ್ದಾನೆ.  ಆದರೆ ಜುಲೈ 12 ರಿಂದ, ಮತ್ತೆ ಹಿಮ್ಮುಖವಾಗಿ ಚಲಿಸಿ ಮಕರ ರಾಶಿಗೆ ಬರಲಿದ್ದಾನೆ.  ಆಗ ಮತ್ತೆ ಶನಿಯದೆಸೆ (shani dese) ಈ ಮೂರೂ ರಾಶಿಯವರನ್ನು ಬಾಧಿಸಲಿದೆ.  ಈ ಮೂರು ರಾಶಿಚಕ್ರದ ಚಿಹ್ನೆಗಳು 2023 ರಲ್ಲಿ ಶನಿಯ ದೆಸೆಯಿಂದ ಸಂಪೂರ್ಣ ಮುಕ್ತಿ ಹೊಂದಲಿದೆ. 


ಇದನ್ನೂ ಓದಿ : Chanakya Niti: ಮನುಷ್ಯನ ಇಂತಹ ವರ್ತನೆ ಮನೆ ಕುಟುಂಬವನ್ನೇ ಸರ್ವನಾಶ ಮಾಡುತ್ತದೆ, ಈಗಲೇ ಎಚ್ಚೆತ್ತುಕೊಳ್ಳಿ!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.