ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಆಗಸ್ಟ್ 31 ರಂದು ಶುಕ್ರ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ ಸಿಂಹ ರಾಶಿಯನ್ನು ಪ್ರವೇಶಿಸುತ್ತಿದೆ. ಸೂರ್ಯನು ಸಿಂಹ ರಾಶಿಯ ಅಧಿಪತಿ.  ಸೂರ್ಯ ಈಗಾಗಲೇ ಸಿಂಹ ರಾಶಿಯಲ್ಲಿದ್ದಾನೆ. ಶುಕ್ರ ಸಂಪತ್ತು, ಸೌಂದರ್ಯ, ಪ್ರೀತಿಯ  ಪ್ರತೀಕವಾದರೆ, ಸೂರ್ಯ ಯಶಸ್ಸು, ಆತ್ಮವಿಶ್ವಾಸ, ಆರೋಗ್ಯವನ್ನು  ಕರುಣಿಸುತ್ತಾನೆ. ಗಣೇಶ ಚತುರ್ಥಿಯ ದಿನದಂದು ಈ ಎರಡು ಪ್ರಮುಖ ಗ್ರಹಗಳ ಸಂಯೋಜನೆಯಾಗಲಿದೆ. ಇದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.  ಈ ಪೈಕಿ ನಾಲ್ಕು ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ವಿಶೇಷ ಕೃಪೆ ಇರಲಿದೆ. 


COMMERCIAL BREAK
SCROLL TO CONTINUE READING

ಮೇಷ: ಶುಕ್ರನ ಸಂಕ್ರಮವು ಮೇಷ ರಾಶಿಯವರಿಗೆ ಅಪಾರ ಲಾಭವನ್ನು ನೀಡಲ್ಲಿದೆ. ಮೇಷ ರಾಶಿಯವರ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ತಂದೆಯ ಸಹಾಯದಿಂದ ಎದುರಾಗುವ ಅನೇಕ ಸಮಸ್ಯೆಗಳು ಬಗೆಹರಿಯಲಿವೆ. ಆದಾಯ ಹೆಚ್ಚಲಿದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಅತಿ ಹೆಚ್ಚು ಹಣವನ್ನು ಈ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು. 


ಇದನ್ನೂ ಓದಿ : Pitru Paksha 2022: ಪಿತೃಪಕ್ಷದಲ್ಲಿ ಈ ಆಹಾರ ಸೇವನೆ ಅಶುಭ: ತಿಂದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ


ವೃಷಭ: ಈ ರಾಶಿಯ ಅಧಿಪತಿ ಶುಕ್ರ. ಹಾಗಾಗಿ ಶುಕ್ರನ ರಾಶಿಯಸ್ಥಾನ ಬದಲಾವಣೆಯು ವೃಷಭ ರಾಶಿಯವರಿಗೆ ಬಹಳ ಶುಭಕರವಾಗಿರುತ್ತದೆ. ಆರ್ಥಿಕವಾಗಿ ಪ್ರಗತಿ ಸಾಧಿಸಲಿದ್ದಾರೆ. ಬೇಕಾದಷ್ಟು ಹಣ ಸಿಗುವುದರಿಂದ ನೆಮ್ಮದಿಯ ಜೀವನ ನಡೆಸುಲಿದ್ದಾರೆ. ಗೌರವ ಹೆಚ್ಚಾಗಲಿದೆ. 


ಸಿಂಹ: ಶುಕ್ರನು ತನ್ನ ರಾಶಿಯನ್ನು ಬದಲಿಸಿ ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ರಾಶಿಯಲ್ಲಿ ಶುಕ್ರ ಮತ್ತು ಸೂರ್ಯನ ಸಂಯೋಗವು ಈ ರಾಶಿಯ ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಹೊಸ ಉದ್ಯೋಗದ ಆಫರ್ ಸಿಗಬಹುದು. ಸಂಬಳ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಯು ಸಂತೋಷವನ್ನು ನೀಡುತ್ತದೆ. 


ಇದನ್ನೂ ಓದಿ : Pitru Paksha 2022: ಪಿತೃಪಕ್ಷದಲ್ಲಿ ಈ ಆಹಾರ ಸೇವನೆ ಅಶುಭ: ತಿಂದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ


ಕುಂಭ: ಶುಕ್ರ ಸಂಕ್ರಮವು ಕುಂಭ ರಾಶಿಯವರ ಜೀವನದಲ್ಲಿ ಸಂತಸವನ್ನು ತುಂಬಲಿದೆ.  ಈ ರಾಶಿಯವರಿಗೆ ಪ್ರೀತಿ, ಹಣ, ಗೌರವ ಎಲ್ಲವೂ ಸಿಗಲಿದೆ.  ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ವ್ಯಾಪಾರಸ್ಥರ ವ್ಯಾಪಾರ ವೃದ್ಧಿಯಾಗಲಿದೆ. ಹಿರಿಯರಿಂದ ಬೆಂಬಲ ಸಿಗಲಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.