Fruit vs Fruit Juice: ಪ್ರತಿದಿನ ಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಹಣ್ಣುಗಳಿಲ್ಲದ ಆಹಾರವನ್ನು ಸಂಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ನಿತ್ಯ ಆಹಾರದಲ್ಲಿ ಹಣ್ಣುಗಳನ್ನು ಸೇರಿಸಲು ಸೂಚಿಸಲಾಗುತ್ತದೆ. ಹಣ್ಣುಗಳಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು ಹೇರಳವಾಗಿರುತ್ತದೆ. ಹಣ್ಣುಗಳ ಸೇವನೆಯು ದೇಹಕ್ಕೆ ಆಂತರಿಕವಾಗಿ ಹಾಗೂ ಬಾಹ್ಯವಾಗಿಯೂ ಪ್ರಯೋಜನಗಳನ್ನು ನೀಡುತ್ತವೆ. 


COMMERCIAL BREAK
SCROLL TO CONTINUE READING

ಹಣ್ಣಿನಲ್ಲಿರುವ ಪೋಷಕಾಂಶಗಳೇ ಹಣ್ಣಿನ ರಸದಲ್ಲಿಯೂ ಇರುತ್ತದೆ. ಹಾಗಾಗಿ, ಎರಡರಲ್ಲಿ ಯಾವುದನ್ನು ಸವಿದರೂ ಉತ್ತಮವೇ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಆಹಾರದ ಜೊತೆಗೆ ಹಣ್ಣುಗಳನ್ನು ಸೇವಿಸುವುದು ಉತ್ತಮವೇ? ಇಲ್ಲವೇ ಹಣ್ಣಿನ ರಸ ಉತ್ತಮವೇ? ಅದರಲ್ಲೂ ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಹಣ್ಣು vs ಹಣ್ಣಿನ ಜ್ಯೂಸ್ ಇವೆರಡರಲ್ಲಿ ಯಾವುದು ಉತ್ತಮ .  ಈ ಬಗ್ಗೆ ವೈದ್ಯರ ಸಲಹೆ ಏನು? ಇಲ್ಲಿದೆ ಮಹತ್ವದ ಮಾಹಿತಿ. 


ಹಣ್ಣು vs ಹಣ್ಣಿನ ಜ್ಯೂಸ್ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್ ಎಂಬ ಬಗ್ಗೆ ಏಮ್ಸ್ ವೈದ್ಯರಾದ ಪ್ರಿಯಾಂಕಾ ಸಹರಾವತ್ ಸಲಹೆ ನೀಡಿದ್ದಾರೆ. ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ತೊಡೆದುಹಾಕಲು ಆಹಾರದ ಫೈಬರ್ ಅಗತ್ಯವಿದೆ.  ಡಾ. ಪ್ರಿಯಾಂಕಾ ಅವರ ಪ್ರಕಾರ, ಹಣ್ಣಿನ ಜ್ಯೂಸ್ ಕೇವಲ ಒಂದು ಪೂರಕವೇ ಹೊರತು ಅದು ತಾಜಾ ಹಣ್ಣುಗಳಷ್ಟು ಉತ್ತಮವಲ್ಲ. ಇವರ ಪ್ರಕಾರ, ಹಣ್ಣುಗಳನ್ನು ಜ್ಯೂಸ್ ರೂಪದಲ್ಲಿ ಸವಿಯುವುದರಿಂದ ಅವುಗಳಲ್ಲಿರುವ ಆಹಾರದ ಫೈಬರ್ ಕಡಿಮೆಯಾಗುತ್ತದೆ. ಬಹುತೇಕ ನಗಣ್ಯವಾಗುತ್ತದೆ. ಹಾಗಾಗಿ, ಹಣ್ಣಿನ ಜ್ಯೂಸ್ ಬದಲಿಗೆ ಹಣ್ಣನ್ನೇ ಸವಿಯುವಂತೆ ಸಲಹೆ ನೀಡಿದ್ದಾರೆ. 


ಇದನ್ನೂ ಓದಿ- ಸಾಸಿವೆ ಎಣ್ಣೆಯಲ್ಲಿ ಇವೆರಡು ವಸ್ತುಗಳನ್ನು ಬೆರೆಸಿಟ್ಟು ಬಳಸಿ, ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ..!


ತೂಕ ಇಳಿಕೆಗೆ ಹಣ್ಣು vs ಹಣ್ಣಿನ ಜ್ಯೂಸ್ ಗಳಲ್ಲಿ ಯಾವುದು ಉತ್ತಮ? 
ವೈದ್ಯರ ಪ್ರಕಾರ, ತೂಕ ಇಳಿಕೆಗೂ ಕೂಡ ಹಣ್ಣಿನ ಜ್ಯೂಸ್ ಗಿಂತ ಹಣ್ಣನ್ನು ನೇರವಾಗಿ ಸವಿಯುವುದು ಹೆಚ್ಚು ಪ್ರಯೋಜನವನ್ನು ನೀಡುತ್ತದೆ.  ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಫೈಬರ್ ದೊರೆಯುತ್ತದೆ. ಇದರಿಂದ ಜೀರ್ಣಕ್ರಿಯೆ ಸುಧಾರಿಸಿ, ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. 



ಹಣ್ಣುಗಳು ಕಡಿಮೆ ಕ್ಯಾಲೋರಿ, ಕಡಿಮೆ ಕೊಬ್ಬಿನಾಂಶಗಳನ್ನು ಹೊಂದಿರುತ್ತದೆ. ಹಾಗಾಗಿ, ಇವುಗಳ ಸೇವನೆಯು ತೂಕ ನಿರ್ವಹಣೆಗೆ ಸಹಾಯಕವಾಗಿದೆ. ಸೇಬು, ಪೇರಲದಂತಹ ಹಣ್ಣುಗಳನ್ನು ತಿನ್ನುವುದರಿಂದತೂಕ ಕಡಿಮೆ ಮಾಡಲು ಸಹಾಯಕವಾಗಿದೆ. 


ಇದನ್ನೂ ಓದಿ- ನಿತ್ಯ ಬೆಳಿಗ್ಗೆ 4 ಕರಿಬೇವಿನ ಎಲೆ ಅಗಿದು ತಿಂದ್ರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ...! 


ಹಣ್ಣುಗಳಲ್ಲಿ ಸೋಡಿಯಮ್ ಪ್ರಮಾಣ ಕಡಿಮೆ ಇರುವುದರಿಂದ ಇವು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.