ಬೆಂಗಳೂರು : ಶ್ರಾವಣ ತಿಂಗಳ ಎಲ್ಲಾ ಸೋಮವಾರಗಳು ಬಹಳ ವಿಶೇಷವಾದವು. ಶಿವನ ಮೇಲಿನ ಭಕ್ತಿಗಾಗಿ  ಶ್ರಾವಣ ಸೋಮವಾರವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇನ್ನು ಈ ಬಾರಿ ಗಜಕೇಸರಿ ಯೋಗದಲ್ಲಿ ಮೊದಲ ಶ್ರಾವಣ ಸೋಮವಾರ ಬಂದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಮತ್ತು ಚಂದ್ರರು ಯಾವುದೇ ರಾಶಿಯೊಂದಿಗೆ ಸೇರಿದಾಗ ಗಜಕೇಸರಿ ಯೋಗ ಉಂಟಾಗುತ್ತದೆ. ಈ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಬಹಳ ಮಂಗಳಕರವಾಗಿ ಪರಿಣಮಿಸಲಿದೆ. ಗಜಕೇಸರಿ ಯೋಗವು  ಈ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ . 


COMMERCIAL BREAK
SCROLL TO CONTINUE READING

ವೃಷಭ :  ವೃಷಭ ರಾಶಿಯವರಿಗೆ ಗಜಕೇಸರಿ ಯೋಗವು ತುಂಬಾ ಶುಭಕರವಾಗಿದೆ. ಈ ರಾಶಿಯವರು ಅಧಿಕ ಹಣ ಗಳಿಸುತ್ತಾರೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಬಾಕಿ ಉಳಿದಿರುವ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಬಹುದು. ಆಸ್ತಿ ಸಂಬಂಧಿತ  ಸಮಸ್ಯೆಗಳಿದ್ದರೆ ಶೀಘ್ರವೇ ಪರಿಹಾರವಾಗಲಿದೆ. 


ಇದನ್ನೂ ಓದಿ : Vastu Shastra: ಮನೆಯ ಯಾವ ದಿಕ್ಕಿನಲ್ಲಿ ನವಿಲುಗರಿಯನ್ನು ಸ್ಥಾಪಿಸಿದರೆ ಧನಲಾಭ, ಈ ರೀತಿ ಬಳಸಿ


ಕರ್ಕಾಟಕ : ಶ್ರಾವಣದ ಮೊದಲ ಸೋಮವಾರದಂದು ರೂಪುಗೊಳ್ಳುವ ಗಜಕೇಸರಿ ಯೋಗವು ಕರ್ಕ ರಾಶಿಯವರ ವೃತ್ತಿಜೀವನದಲ್ಲಿ ದೊಡ್ಡ ಲಾಭವನ್ನು ನೀಡುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮಕ್ಕಳ ವಿಷಯದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಈ ಸಮಯವು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ. 


ಸಿಂಹ : ಗಜಕೇಸರಿ ಯೋಗವು ಸಿಂಹ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಪರಿಸ್ಥಿತಿ ಉತ್ತಮವಾಗಿರುತ್ತದೆ. ಉದ್ವೇಗ ದೂರವಾಗುತ್ತದೆ. ನಿಂತು ಹೋಗಿದ್ದ ಕೆಲಸ ಚು ರುಕು ಪಡೆಯಲಿದೆ. ಈ ಸಂದರ್ಭದಲ್ಲಿ ಶಿವಲಿಂಗದ ಮೇಲೆ ಬಿಲ್ವ ಪತ್ರೆಗಳನ್ನು ಅರ್ಪಿಸಿದರೆ ಹೆಚ್ಚಿನ ಪ್ರಯೋಜನವಾಗಲಿದೆ.  


ಇದನ್ನೂ ಓದಿ : Nag Panchami 2022: ನಾಗರ ಪಂಚಮಿಗೆ ಎಷ್ಟು ದಿನ ಬಾಕಿ? ಈ ರೀತಿ ಹಾವುಗಳ ಆಯಸ್ಸು ಹಾಗೂ ವಿಷಕಾರಿ ಅಂಶ ನಿರ್ಧರಿಸಲಾಗುತ್ತದೆ


ಮಕರ ರಾಶಿ : ಗಜಕೇಸರಿ ಯೋಗವು ಮಕರ ರಾಶಿಯವರಿಗೆ ಫಲಪ್ರದವಾಗುವುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ವೃತ್ತಿ ಜೀವನದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಮ್ದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರುವುದು. 


ಮೀನ ರಾಶಿ : ಗಜಕೇಸರಿ ಯೋಗ ಕೂಡ ಮೀನ ರಾಶಿಯವರಿಗೆ ಸಾಕಷ್ಟು ಲಾಭವನ್ನು ನೀಡುತ್ತದೆ.  ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ. ಹಣಕಾಸಿನ  ಪ್ರಯೋಜನವಾಗಲಿದೆ. ಎಲ್ಲೋ ಸಿಕ್ಕಿ ಹಾಕಿಕೊಂಡಿದ್ದ ಹಣ ಕೈ ಸೇರಲಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ