ಗಣೇಶ ಚತುರ್ಥಿ ಪರಿಹಾರಗಳು: ಪ್ರಪಂಚದಾದ್ಯಂತ  ಇಂದು ಅಂದರೆ 31 ಆಗಸ್ಟ್ 2022ರಂದು ವಿಘ್ನಗಳ ವಿನಾಶಕ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯನ್ನು ಗಣೇಶನ ಜನ್ಮದಿನವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ನಾವು ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ವಿಘ್ನ ವಿನಾಶಕನಿಗೆ ಮೊದಲ ಪೂಜೆಯನ್ನು ಸಲ್ಲಿಸುತ್ತೇವೆ. ಅಂತೆಯೇ, ಗಣೇಶ ಚತುರ್ಥಿಯಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವ ಮೂಲಕ ನೀವು ನಿಮ್ಮ  ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು. ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯಲು ಹಾಗೂ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇಂದು ಕೈಗೊಳ್ಳಬೇಕಾದ ವಿಶೇಷ ಕ್ರಮಗಳು ಯಾವುವು ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಶುದ್ಧ ನೀರಿನಿಂದ ಅಭಿಷೇಕ:
ಗಣೇಶ ಚತುರ್ಥಿ ದಿನದಂದು ಇಡೀ ವಿಶ್ವದಾದ್ಯಂತ  ಗಣೇಶ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮಾರುಕಟ್ಟೆಯಿಂದ ಗಣೇಶನನ್ನು ತಂದು ಹಾಗೆ ಕೂರಿಸಿ ಅಲಂಕಾರ ಮಾಡುವ ಬದಲಿಗೆ  ಗಣೇಶನ ಮೂರ್ತಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಬೇಕು. ಇದರೊಂದಿಗೆ ಗಣಪತಿ ಅಥರ್ವಶೀರ್ಷ ಪಠಿಸಿ. ಇದನ್ನು ಮಾಡುವುದರಿಂದ ಸಿದ್ಧಿ ವಿನಾಯಕನು ತನ್ನ ಭಕ್ತರ ಎಲ್ಲಾ ಸಮಸ್ಯೆಗಳನ್ನು ದೂರಮಾಡುತ್ತಾನೆ ಎಂಬ ನಂಬಿಕೆ ಇದೆ.


ಗಣೇಶ ಚತುರ್ಥಿಯಂದು ಬೆಲ್ಲದ ಪರಿಹಾರ:
ನಿಮ್ಮ ಕುಟುಂಬ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರೆ, ನೀವು ಗಣೇಶ ಚತುರ್ಥಿಯಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ. ಇದಾದ ನಂತರ ಬೆಲ್ಲದಲ್ಲಿ ದೇಸಿ ತುಪ್ಪವನ್ನು ಬೆರೆಸಿ ಗಣಪತಿಗೆ ಅರ್ಪಿಸಿ. ನಂತರ ಆ ಬೆಲ್ಲವನ್ನು ಹಸುವಿಗೆ ತಿನ್ನಿಸಿ. ನಿಮ್ಮ ಈ ಪರಿಹಾರದಿಂದ ಗಣೇಶನು ಸಂತುಷ್ಟನಾಗುತ್ತಾನೆ ಮತ್ತು ನಿಮಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Ganesh Chaturthi 2022: ಗಣೇಶ ಚತುರ್ಥಿಯ ದಿನ ಅಪ್ಪಿತಪ್ಪಿಯೂ ಸಹ ಇಂತಹ ಮೂರ್ತಿಯನ್ನು ತರಲೇಬಾರದು


ದರ್ಬೆಯ ಪರಿಹಾರ:
ಗಣೇಶ ದರ್ಬೆಯ ಪ್ರಿಯ ಎಂದು ಎಲ್ಲರಿಗೂ ತಿಳಿದಿದೆ. ಗಣೇಶ ಚತುರ್ಥಿಯಂದು ದರ್ಬೆಯ ಪರಿಹಾರ ಮಾಡುವುದರಿಂದಲೂ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ನಿಮ್ಮ ಮನೆಯಲ್ಲಿ ಹಳದಿ ಬಣ್ಣದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ. ಈ ಸಮಯದಲ್ಲಿ, ಶ್ರೀ ಗಣಾಧಿಪತಯೇ ನಮಃ ಎಂಬ ಮಂತ್ರವನ್ನು ಪಠಿಸುತ್ತಾ, ಗಣೇಶನ ವಿಗ್ರಹದ ಮೇಲೆ 5 ಅರಿಶಿನವನ್ನು ಅರ್ಪಿಸಿ. ಇದರ ನಂತರ, ಶ್ರೀ ಗಜವಕತ್ರಂ ನಮೋ ನಮಃ ಎಂದು ಪಠಿಸುತ್ತಾ 108 ದರ್ಬೆಯನ್ನು ಅರಿಶಿನ ಲೇಪಿಸಿದ ನಂತರ ಗಣೇಶನಿಗೆ ಅರ್ಪಿಸಿ. 


ವಿವಾಹದಲ್ಲಿ ವಿಘ್ನಗಳು ಎದುರಾಗುತ್ತಿದ್ದರೆ ಹೀಗೆ ಮಾಡಿ:
ನಿಮ್ಮ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದವರು ಇದ್ದು ವಿವಾಹದಲ್ಲಿ ಅಡಚಣೆ ಉಂಟಾಗುತ್ತಿದ್ದರೆ ಗಣೇಶ ಚತುರ್ಥಿಯ ದಿನ ವಿಶೇಷ ಪರಿಹಾರ ಕೈಗೊಳ್ಳುವ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು. ಗಣೇಶ ಚತುರ್ಥಿಯ ದಿನದಂದು ಮನೆಯಲ್ಲಿ ಹಳದಿ ಬಣ್ಣದ ಸಿಹಿತಿಂಡಿಗಳನ್ನು ಮಾಡಿ. ಇದರ ನಂತರ, ಆ ಸಿಹಿತಿಂಡಿಗಳನ್ನು ಗಣೇಶನಿಗೆ ಅರ್ಪಿಸಿ. ಈ ಪರಿಹಾರವನ್ನು ತೆಗೆದುಕೊಳ್ಳುವುದರಿಂದ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Ganesh Chaturthi 2022 : ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬೇಡಿ.. ದೊಡ್ಡ ನಷ್ಟ ಎದುರಿಸಬೇಕಾದೀತು


‘ಓಂ ಗಂ ಗಾಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ’ ಎಂಬ ಮಂತ್ರವನ್ನು 21 ಬಾರಿ ಪಠಿಸಿ:
ಗಣೇಶ ಚತುರ್ಥಿ ದಿನದಂದು  ನೀವು ಗಣಪತಿಯನ್ನು ನೇಮ ನಿಷ್ಠೆಯಿಂದ ಪೂಜಿಸಬೇಕು. ಇದರೊಂದಿಗೆ ‘ಓಂ ಗಂ ಗಾಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ’ ಎಂಬ ಮಂತ್ರವನ್ನು 21 ಬಾರಿ ಪಠಿಸಬೇಕು. ಹೀಗೆ ಮಾಡುವುದರಿಂದ ಸಿದ್ಧಿ ವಿನಾಯಕನು ಪ್ರಸನ್ನನಾಗುತ್ತಾನೆ ಮತ್ತು ಅವನ ಆಶೀರ್ವಾದವನ್ನು ನೀಡುತ್ತಾನೆ. ನಿಮ್ಮೆಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ.


ಅಗತ್ಯವಿರುವವರಿಗೆ ದಾನ ಮಾಡಿ:
ಗಣೇಶನನ್ನು ಮೆಚ್ಚಿಸಲು,  ಗಣೇಶ ಚತುರ್ಥಿಯಂದು ಅಗತ್ಯವಿರುವವರಿಗೆ  ಹಣ್ಣುಗಳು, ಧಾನ್ಯಗಳು, ಬಟ್ಟೆ ಅಥವಾ ನಿಮ್ಮ ಕೈಲಾದದ್ದನ್ನು ದಾನ ಮಾಡಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಿಂದ ಗಣೇಶನು ಪ್ರಸನ್ನನಾಗುತ್ತಾನೆ. ತನ್ನ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ನಂಬಿಕೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.