Modak Recipe: ಗಣೇಶ ಚತುರ್ಥಿ ಹಬ್ಬವು ಭಾರತೀಯರಿಗೆ ಬಹಳ ವಿಶೇಷವಾಗಿದೆ. ಈ ದಿನದಂದು ಎಲ್ಲಾ ಭಕ್ತರು ಬಹಳ ಸಂತೋಷದಿಂದ ಭಗವಂತನಿಗೆ ಪೂಜೆಯನ್ನು ಮಾಡುತ್ತಾರೆ. ಭಾರತದಾದ್ಯಂತ ಹತ್ತು ದಿನಗಳ ಕಾಲ ಗಣಪತಿ ಉತ್ಸವ ನಡೆಯುತ್ತದೆ. ಪ್ರತಿ ದಿನವೂ ಒಂದೊಂದು ನೈವೇದ್ಯವನ್ನು ಗಣಪನಿಗೆ ಅರ್ಪಿಸಲಾಗುತ್ತದೆ. ಎಲ್ಲಾ ನೈವೇದ್ಯಗಳು ಗಣೇಶನಿಗೆ ಪ್ರಿಯವಾದರೂ ಕೆಲವು ನೈವೇದ್ಯಗಳು ಅವನಿಗೆ ಬಹಳ ಪ್ರಿಯವೆಂದು ಪುರಾಣಗಳು ವಿವರಿಸುತ್ತವೆ. ಮೋದಕಗಳು ಗಣೇಶನಿಗೆ ಅತ್ಯಂತ ಪ್ರಿಯವಾದ ನೈವೇದ್ಯಗಳಲ್ಲಿ ಒಂದಾಗಿದೆ. ಅವುಗಳನ್ನು ವಿವಿಧ ಆಕಾರಗಳಲ್ಲಿ ತಯಾರಿಸಲಾಗುತ್ತದೆ. ಗಣೇಶನ ಪೂಜೆಯಲ್ಲಿ ಮಾಡಲೇಬೇಕಾದ ನೈವೇದ್ಯ ಇದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮಧುಮೇಹವನ್ನು ನಿಯಂತ್ರಣದಲ್ಲಿಡಲು ಈ ಸಲಹೆಗಳನ್ನು ಅನುಸರಿಸಿ..ಬದಲಾವಣೆ ನೋಡಿ!! 


ತೆಂಗಿನಕಾಯಿ ಮೋದಕ : ತೆಂಗಿನಕಾಯಿ ಮೋದಕ ಸಾಂಪ್ರದಾಯಿಕವಾದ ಆಹಾರ ಎಂದೂ ಕರೆಯಲಾಗುತ್ತದೆ. ಇವುಗಳನ್ನು ಗಣಪತಿ ಪೂಜೆಯ ಅಂಗವಾಗಿ ನೀಡಲಾಗುತ್ತದೆ. ಆದರೆ ಇವುಗಳನ್ನು ಮಾಡಲು ಮೊದಲು ಬಾಣಲೆಯಲ್ಲಿ ನೀರು ಹಾಕಿ ಸ್ವಲ್ಪ ತುಪ್ಪ ಹಾಕಿ ಕುದಿಸಿ. ಅಕ್ಕಿ ಹಿಟ್ಟು ಸೇರಿಸಬೇಕು. ಈ ಹಿಟ್ಟನ್ನು ರೊಟ್ಟಿ ಹಿಟ್ಟಿನಂತೆ ಕಲಿಸಿ ಪಕ್ಕಕ್ಕೆ ಇಡಬೇಕು. ಬಾಣಲೆಯಲ್ಲಿ ಹೊಸದಾಗಿ ತುರಿದ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಅದರ ನಂತರ, ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ತಯಾರಿಸಿದ ತೆಂಗಿನಕಾಯಿ ಮಿಶ್ರಣವನ್ನು ತುಂಬಿಸಿ ಮೋದಕ ಆಕಾರವನ್ನು ಮಾಡಿ. ಮೋದಕಗಳನ್ನು ಹಬೆಯಲ್ಲಿ ಬೇಯಿಸಿ.


ಡ್ರೈ ಫ್ರೂಟ್ ಮೋದಕ : ಡ್ರೈ ಫ್ರೂಟ್ಸ್‌ನಿಂದ ಮಾಡಿದ ಮೋದಕ ತುಂಬಾ ರುಚಿಕರವಾಗಿರುತ್ತದೆ. ಅವು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಸಕ್ಕರೆಯ ಬದಲು ಖರ್ಜೂರದ ಮಿಶ್ರಣವನ್ನು ಸಿಹಿಗಾಗಿ ಬಳಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.


ಕಡಲೆ ಕಾಯಿ ಮೋದಕ : ಕಡಲೆ ಕಾಯಿ ಮೋದಕ ತಯಾರಿಸುವುದು ತುಂಬಾ ಸುಲಭ. ಇವುಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ದೇಸಿ ತುಪ್ಪವನ್ನು ಬಳಸಿದರೆ  ತುಂಬಾ ರುಚಿಯಾಗಿರುತ್ತದೆ. ಡ್ರೈ ಫ್ರೂಟ್‌ ಬಳಸಬಹುದು.


ಇದನ್ನೂ ಓದಿ : ಪ್ರತಿದಿನ ತುಳಸಿ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.