Vastu Tips ಮನೆಯ ಈ ದಿಕ್ಕಿಗೆ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿದರೆ ಅಪಾರ ಸಂಪತ್ತು ನಿಮ್ಮದಾಗಲಿದೆ
ವಾಸ್ತು ಪ್ರಕಾರ ಸರಿಯಾದ ದಿಕ್ಕು ಮತ್ತು ಸ್ಥಳದಲ್ಲಿ ಪ್ರತಿಷ್ಠಾಪಿಸಿದಾಗ ಮಾತ್ರ ಗಣೇಶನ ಕೃಪೆ ನಮ್ಮ ಮೇಲಿರುತ್ತದೆ ಎಂದು ನಂಬಲಾಗಿದೆ.
ನವದೆಹಲಿ: ಹಿಂದೂ ಧರ್ಮದಲ್ಲಿ ವಿಘ್ನ ನಿವಾರಕ ವಿನಾಯಕನ ಆರಾಧನೆಗೆ ವಿಶೇಷ ಸ್ಥಾನವಿದೆ. ಗಣೇಶನ ಪೂಜೆಯೊಂದಿಗೆ ಮಂಗಳಕರ ಮತ್ತು ಶುಭ ಕಾರ್ಯ ಪ್ರಾರಂಭಿಸಿದರೆ ಆ ಕೆಲಸವು ಯಾವುದೇ ತೊಂದರೆಗಳಿಲ್ಲದೆ ಪೂರ್ಣಗೊಳ್ಳುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಗಣಪತಿಯ ಆಶೀರ್ವಾದದಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಅವರ ಸಂಕಷ್ಟಗಳು ಕೊನೆಗೊಳ್ಳುತ್ತವೆ. ಆದರೆ ವಾಸ್ತು ಪ್ರಕಾರ, ಸರಿಯಾದ ದಿಕ್ಕು ಮತ್ತು ಸ್ಥಳದಲ್ಲಿ ಪ್ರತಿಷ್ಠಾಪಿಸಿದಾಗ ಮಾತ್ರ ಗಣೇಶನ ಕೃಪೆ ನಮ್ಮ ಮೇಲಿರುತ್ತದೆ. ಹೀಗಾಗಿ ಗಣೇಶನನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಕೂರಿಸುವುದು ಅವಶ್ಯಕ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಬುಧವಾರ ಮೂಷಿಕ ವಾಹನ ಗಣೇಶನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಪೂಜೆ ಮತ್ತು ಉಪವಾಸ ಆಚರಿಸುವುದರಿಂದ ಗಣೇಶನ ಕೃಪೆಯು ಭಕ್ತರ ಮೇಲೆ ಜೀವನದುದ್ದಕ್ಕೂ ಇರುತ್ತದೆ. ಅಲ್ಲದೆ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದ್ದರೆ, ಅವರು ಬಲವನ್ನು ಪಡೆಯುತ್ತಾರೆ. ಗಣೇಶ ಶಕ್ತಿ, ವಿದ್ಯಾ-ಬುದ್ಧಿ ನೀಡಿ ನಮ್ಮ ಬಾಳನ್ನು ಬೆಳಗಿಸುತ್ತಾನೆ. ವಿನಾಯಕನ ಕೃಪೆಯಿಂದ ವ್ಯಕ್ತಿಗೆ ಅದೃಷ್ಟ ಲಭಿಸುತ್ತದೆ. ವಾಸ್ತು ಪ್ರಕಾರ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ಗಣೇಶನ ಅನುಗ್ರಹ ಪಡೆಯಬಹುದು. ವಾಸ್ತು ಪ್ರಕಾರ ಗಣೇಶನ ಮೂರ್ತಿಗೆ ಇರುವ ನಿಯಮಗಳೇನು ಎಂದು ತಿಳಿದುಕೊಳ್ಳಿರಿ.
ಇದನ್ನೂ ಓದಿ: Astrology: ಮೇ 18ರಂದು ಸೂರ್ಯನಂತೆ ಹೊಳೆಯಲಿದೆ ಈ ರಾಶಿಗಳ ಜನರ ಭಾಗ್ಯ
ಮನೆಯ ಈ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ
ವಾಸ್ತು ಶಾಸ್ತ್ರದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ವಿಶೇಷ ಮಹತ್ವ ನೀಡಲಾಗಿದೆ. ವಾಸ್ತು ಪ್ರಕಾರ ಗಣಪತಿಯ ವಿಗ್ರಹವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ. ವಾಸ್ತು ತಜ್ಞರ ಪ್ರಕಾರ ಗಣೇಶನ ಪ್ರತಿಷ್ಠಾಪನೆಗೆ ಮನೆಯ ಈಶಾನ್ಯ ದಿಕ್ಕು ಅತ್ಯುತ್ತಮವಾಗಿದೆ.
ಈ ದಿಕ್ಕಿನಲ್ಲಿ ಗಣೇಶನ ವಿಗ್ರಹ ಇಡಲು ಮರೆಯಬೇಡಿ
ವಾಸ್ತು ಶಾಸ್ತ್ರದ ಪ್ರಕಾರ ಕೆಲವು ದಿಕ್ಕುಗಳು ದೇವತೆಗಳಿಗೆ ಸೂಕ್ತವಲ್ಲ. ಅದರಂತೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಗಣಪತಿಯನ್ನು ಸ್ಥಾಪಿಸಬೇಡಿ. ಮನೆಯ ದಕ್ಷಿಣ ದಿಕ್ಕು ಯಮರಾಜನ ದಿಕ್ಕು ಎಂಬ ನಂಬಿಕೆ ಇದೆ. ಅಲ್ಲದೆ ವಿನಾಯಕ ಕುಳಿತುಕೊಳ್ಳಬೇಕಾದ ಸ್ಥಳದಲ್ಲಿ ಕಸ ಅಥವಾ ಶೌಚಾಲಯ ಇತ್ಯಾದಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಗಣೇಶನ ವಿಗ್ರಹವನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಬೇಕು.
ಇದನ್ನೂ ಓದಿ: ಜ್ಯೇಷ್ಠ ಮಾಸದಲ್ಲಿ ಬೆಳಗ್ಗೆ ಎದ್ದು ಈ ಕೆಲಸ ಮಾಡಿ: ಲಕ್ಷ್ಮಿದೇವಿ ಕೃಪೆಯಿಂದ ಜೀವನ ಸಮೃದ್ಧಿಯಾಗುತ್ತೆ
ಇಂತಹ ಪ್ರತಿಮೆ ಸ್ಥಾಪಿಸಿ
ಮನೆಯಲ್ಲಿ ಗಣಪತಿಯ ವಿಗ್ರಹ ಪ್ರತಿಷ್ಠಾಪಿಸಲು ಬಯಸಿದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲು, ಲೋಹ, ಸಗಣಿ ಅಥವಾ ಜೇಡಿಮಣ್ಣಿನಿಂದ ತಯಾರಿಸಿದ ಪ್ರತಿಮೆಯನ್ನು ಪ್ರತಿಷ್ಠಾಪಿಸಿ. ನಿಂತಿರುವ ಗಣೇಶನ ಬದಲು ಕುಳಿತುಕೊಂಡಿರುವ ಗಣೇಶನ ಮೂರ್ತಿ ಸ್ಥಾಪಿಸುವುದು ಉತ್ತಮವೆಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.