ಈ ನಾಲ್ಕು ರಾಶಿಯವರ ಮೇಲಿದೆ ಗಣೇಶನ ಅಪಾರ ಕೃಪೆ, ಉದ್ಯೋಗ ಆರ್ಥಿಕ ಸ್ಥಿತಿಯಲ್ಲಿ ಆಗಲಿದೆ ಭಾರೀ ಪ್ರಗತಿ
ಈ ಬದಲಾವಣೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ, ಗಣಪತಿಯ ಅನುಗ್ರಹದಿಂದ, ಈ ರಾಶಿಯವರು ಜೀವನದಲ್ಲಿ ಪ್ರಗತಿ ಕಾಣುವುದಲ್ಲದೆ, ಜೀವನದಲ್ಲಿ ಹೊಸ ಸಂತೋಷ ಪಡೆಯುತ್ತಾರೆ.
ನವದೆಹಲಿ : ಪ್ರತಿ ಮನೆಯಲ್ಲೂ ಗಣಪತಿಯ ಪೂಜೆಯೊಂದಿಗೆ (Ganesha pooja) ಗಣೇಶ ಉತ್ಸವ ಬಹಳ ಅದ್ದೂರಿಯಾಗಿಯೇ ನಡೆದಿದೆ. ಗಣಪತಿಯ ಆಗಮನದಿಂದ ಭಕ್ತರ ಮನೆ ಮನದಲ್ಲಿ ಉಲ್ಲಾಸ ಉತ್ಸಾಹ ನೆಲೆಸಿದೆ. ಗಣೇಶ ಚತುರ್ಥಿಯಂದು (Ganesha Chathurthi) ಭಕ್ತರ ಮನೆಗೆ ಆಗಮಿಸಿದ ಗಣಪ, ಅನಂತ ಚತುರ್ದಶಿಯವರೆಗೂ ತನ್ನ ಭಕ್ತರೊಂದಿಗೆ ಇರುತ್ತಾನೆ. ಭಕ್ತರ ಮೇಲೆ ಆಶೀರ್ವಾದದ ಮಳೆ ಹರಿಸುತ್ತಾನೆ. ಈ ಸಮಯದಲ್ಲಿ ಕೆಲವು ಗ್ರಹ ಬದಲಾವಣೆಗಳೂ (Planet transit) ಆಗುತ್ತವೆ. ಈ ಬದಲಾವಣೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ, ಗಣಪತಿಯ ಅನುಗ್ರಹದಿಂದ, ಈ ರಾಶಿಯವರು ಜೀವನದಲ್ಲಿ ಪ್ರಗತಿ ಕಾಣುವುದಲ್ಲದೆ, ಜೀವನದಲ್ಲಿ ಹೊಸ ಸಂತೋಷ ಪಡೆಯುತ್ತಾರೆ.
ಈ ರಾಶಿಗಳ ಮೇಲೆ ಗಣಪತಿ ಕೃಪೆ :
ವೃಷಭ ರಾಶಿ: ಮುಂದಿನ 9 ದಿನಗಳ ಕಾಲ ಈ ರಾಶಿಚಕ್ರದ (Zodiac sign)ಜನರ ಮೇಲೆ ಗಣಪತಿಯ (Lord Ganesha) ವಿಶೇಷ ಆಶೀರ್ವಾದ ಇರಲಿದೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ನೆರೆವೇರುತ್ತವೆ. . ಹೂಡಿಕೆ ಮಾಡಲು ಇದು ಉತ್ತಮ ಸಮಯ.
ಇದನ್ನೂ ಓದಿ : Vastu Tips: ಯಾವುದೇ ರೀತಿಯ ರಿಪೇರಿ ಇಲ್ಲದೆ ಮನೆಯ ವಾಸ್ತುದೋಷವನ್ನು ಈ ರೀತಿ ನಿವಾರಿಸಿ
ಮಿಥುನ (Gemini): ಈ ರಾಶಿಚಕ್ರದ ಜನರಿಗೆ ಈ ಸಮಯವು ವೃತ್ತಿಜೀವನದ ದೃಷ್ಟಿಯಿಂದ ಅತ್ಯುತ್ತಮವಾದುದು. ಅವನು ಸ್ಥಾನ ಮತ್ತು ಹಣ ಎರಡನ್ನೂ ಪಡೆಯುತ್ತಾನೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಸಿಂಹ: ಸಿಂಹ ರಾಶಿಯವರಿಗೆ (Leo) ಈ ಸಮಯವು ವೃತ್ತಿಜೀವನದಲ್ಲಿ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಇರುತ್ತದೆ. ಅವರ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ಸಿಗುತ್ತದೆ. ಹಣಕಾಸಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಹೂಡಿಕೆ (Investment) ಮಾಡಲು ಇದು ಉತ್ತಮ ಸಮಯ.
ಇದನ್ನೂ ಓದಿ : Guru Gochar September 2021: ಮಕರ ರಾಶಿಗೆ ಗುರುವಿನ ಪ್ರವೇಶ, ನೀಚಭಂಗ ರಾಜಯೋಗದಿಂದ ಈ ನಾಲ್ಕು ರಾಶಿಗಳ ಪರಿಸ್ಥಿತಿಯಲ್ಲಿ ಬದಲಾವಣೆ
ಕನ್ಯಾ: ಕನ್ಯಾ ರಾಶಿಯವರಿಗೆ (Virgo) ಈ ಸಮಯವು ಕೌಟುಂಬಿಕ ಜೀವನದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಕುಟುಂಬದೊಂದಿಗೆ ಸ್ಮರಣೀಯ ಸಮಯವನ್ನು ಕಳೆಯುವಿರಿ. ಯಾವುದೇ ಧಾರ್ಮಿಕ ಕೆಲಸದಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.