Garlic Remedies: ಜೀವನದುದ್ದಕ್ಕೂ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ಯಾವುದೇ ರೀತಿಯ ವಿಶೇಷ ಸಾಧನೆ ಮಾಡದೆ ಇರುವ ಹಲವರನ್ನು ನೀವು ನೋಡಿರಬಹುದು. ಅಷ್ಟೇ ಅಲ್ಲ ಇದರಿಂದ ಅವರ ಇಡೀ ಜೀವನ  ಹತಾಶೆಗೆ ಗುರಿಯಾಗಿ, ಕುಟುಂಬವೇ ಕೀಳರಿಮೆಗೆ ಗುರಿಯಾಗುತ್ತಿರುತ್ತದೆ. ಇಂತಹ ಪರಿಸ್ಥಿತಿಯು ನಿಮ್ಮ ಜೀವನದಲ್ಲಿಯೂ ಬರಬಾರದು ಎಂದಾದಲ್ಲಿ, ಅದನ್ನು ತಪ್ಪಿಸಲು ನೀವು ಬೆಳ್ಳುಳ್ಳಿ ಪರಿಹಾರಗಳನ್ನು ಅನುಸರಿಸಬೇಕು. ಭಾರತದ ಪ್ರತಿ ಮನೆಯ ಅಡುಗೆಮನೆಯಲ್ಲಿ ಕಂಡುಬರುವ ಬೆಳ್ಳುಳ್ಳಿಯ ರುಚಿ ಮತ್ತು ಔಷಧೀಯ ಗುಣಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಂದು ನಾವು ನಿಮಗೆ ಬಡತನ ಅಥವಾ ಆರ್ಥಿಕ ಮುಗ್ಗಟ್ಟು ನಿವಾರಣೆಗೆ ಸಹಾಯ ಮಾಡುವ ಬೆಳ್ಳುಳ್ಳಿ ಸಂಬಂಧಿಸಿದ ಕೆಲ ಉಪಾಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.


COMMERCIAL BREAK
SCROLL TO CONTINUE READING

ಕುಟುಂಬದಲ್ಲಿನ ಕ್ಲೇಶ ನಿವಾರಣೆ
ಮನೆಯಲ್ಲಿ ಆಗಾಗ್ಗೆ ಅಪಶ್ರುತಿ ಇದ್ದರೆ. ಕುಟುಂಬ ಸದಸ್ಯರ ಮಧ್ಯೆ ಪರಸ್ಪರ ಜಗಳ ಅಥವಾ ವ್ಯಾಜ್ಯ ಸಂಭವಿಸುತ್ತಿದ್ದರೆ, ನೀವು ಬೆಳ್ಳುಳ್ಳಿಯ ಪರಿಹಾರವನ್ನು ಅನುಸರಿಸಬಹುದು. ನೀವು ಶನಿವಾರದಂದು ಸಣ್ಣ ಕೋಲನ್ನು ತೆಗೆದುಕೊಂಡು ಅದರಲ್ಲಿ 7 ಬೆಳ್ಳುಳ್ಳಿಯ ಮೊಗ್ಗುಗಳನ್ನು ನೇತುಹಾಕಿ ಮತ್ತು ಅದನ್ನು ಛಾವಣಿಯ ಮೇಲೆ ಇರಿಸಿ. ಈ ಉಪಾಯದಿಂದ ನಿಮ್ಮ ಕೌಟುಂಬಿಕ ಕಲಹಗಳು ದೂರವಾಗುತ್ತವೆ ಮತ್ತು ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.


ಭಯಾನಕ ಕನಸುಗಳು ಕಾಣಿಸಿಕೊಳ್ಳುವುದನ್ನು ತಪ್ಪಿಸಿಸಲು ಈ ಸಲಹೆ ಅನುಸರಿಸಿ
ರಾತ್ರಿ ಮಲಗಿದಾಗ ಭಯಾನಕ ಕನಸುಗಳನ್ನು ನೋಡಿ ತೊಂದರೆಗೊಳಗುವ ಜನರು ಅಥವಾ ಮಕ್ಕಳು ಬೆಳ್ಳುಳ್ಳಿ ಉಪಾಯ ಅನುಸರಿಸಬಹುದು. ರಾತ್ರಿ ಮಲಗುವಾಗ 2 ಎಸಳು ಬೆಳ್ಳುಳ್ಳಿಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಳ್ಳಬೇಕು. ಬೆಳಗ್ಗೆ ಎದ್ದ ನಂತರ, ಆ ಬೆಳ್ಳುಳ್ಳಿಯನ್ನು ಮನೆಯಿಂದ ಅಡ್ಡರಸ್ತೆ ಅಥವಾ ತೆರೆದ ಪ್ರದೇಶದಲ್ಲಿ ಎಸೆಯಿರಿ. ಹೀಗೆ ಮಾಡುವುದರಿಂದ ನೀವು ಭಯಾನಕ ಕನಸುಗಳಿಂದ ತೊಂದರೆಗೊಳಗಾಗುವುದಿಲ್ಲ.


ನಿಮ್ಮ ಕೆಲಸ ನಿಧಾನ ಗತಿಯಲ್ಲಿ ಸಾಗುತ್ತಿದ್ದರೆ ಈ ಉಪಾಯ ಅನುಸರಿಸಿ
ನಿಮ್ಮ ಕೆಲಸ ಸರಿಯಾಗಿ ನಡೆಯದಿದ್ದರೆ ಚಿಂತಿಸಬೇಡಿ. ಕೆಂಪು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ 5 ಎಸಳು ಬೆಳ್ಳುಳ್ಳಿಯನ್ನು ಕಟ್ಟಿ ಶನಿವಾರದಂದು ನಿಮ್ಮ ಕೆಲಸದ ಸ್ಥಳದಲ್ಲಿ ನೇತುಹಾಕಿ. ಈ ಪರಿಹಾರದಿಂದ, ಕೆಲಸವು ವೇಗವಾಗಿ ಮುಂದುವರಿಯುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.


ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲು ಈ ಉಪಾಯ ಅನುಸರಿಸಿ
ಕೆಲವೊಮ್ಮೆ ಜನರ ಕೈಯಲ್ಲಿ ಅವರು ಕಷ್ಟಪಟ್ಟು ದುಡಿದ ಹಣ ಉಳಿಯುವುದಿಲ್ಲ. ವೇತನ ಬಂದ ಕೆಲವೇ ದಿನಗಳಲ್ಲಿ ಜೇಬು ಖಾಲಿಯಾಗುತ್ತದೆ, ಇಂತಹ ಜನರೂ ಕೂಡ ಬೆಳ್ಳುಳ್ಳಿ ಉಪಾಯ ಅನುಸರಿಸಿ ಶ್ರೀಮಂತರಾಗಬಹುದು. ಇದಕ್ಕಾಗಿ ನೀವು ನಿಮ್ಮ ಪರ್ಸ್‌ನಲ್ಲಿ ಬೆಳ್ಳುಳ್ಳಿಯ ಎಸಳನ್ನು ಇಟ್ಟುಕೊಳ್ಳಬೇಕು. ಇದನ್ನು ಶನಿವಾರದಿಂದ ಪ್ರಾರಂಭಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಕ್ರಮೇಣ ದೂರವಾಗುತ್ತವೆ.


ಇದನ್ನೂ ಓದಿ-Rudraksha Benefit: ನವಗ್ರಹಗಳ ಅಶುಭ ಪ್ರಭಾವಗಳಿಂದ ರಕ್ಷಿಸುತ್ತದೆ ಈ ಅದ್ಭುತ ರುದ್ರಾಕ್ಷ


ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಈ ಉಪಾಯ ಅನುಸರಿಸಿ
ನಿಮ್ಮ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಎಷ್ಟೇ ಚಿಕಿತ್ಸೆ ನೀಡಿದರೂ ಅವನ ಅನಾರೋಗ್ಯದ ಕಾರಣ ಅರ್ಥವಾಗುತ್ತಿಲ್ಲ ಎಂದಾದರೆ, ಅದು ಅವನ ಮೇಲೆ ಕೆಟ್ಟ ದೃಷ್ಟಿಯ ಪರಿಣಾಮವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ಬೆಳ್ಳುಳ್ಳಿಯ 7 ಎಸಳು ಹಾಗೂ 5 ಸಂಪೂರ್ಣ ಕೆಂಪು ಮೆಣಸಿನ ಕಾಯಿಗಳನ್ನು ಮಕ್ಕಳ ಮೇಲೆ ನಿವಾಳಿಸಿ  ಸುಟ್ಟುಹಾಕಿ. ಇದನ್ನು ಮಾಡುವುದರಿಂದ ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗುತ್ತದೆ ಮತ್ತು ಮಗು ಆರೋಗ್ಯವಾಗಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.


ಇದನ್ನೂ ಓದಿ-Astrology : ಆರೋಗ್ಯದ ಜೊತೆಗೆ ಅದೃಷ್ಟವನ್ನು ಬೆಳಗಿಸುತ್ತೆ ಹಿತ್ತಾಳೆ ಪಾತ್ರೆ.!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.