ನವದೆಹಲಿ: ಹಿಂದೂ ಧರ್ಮದಲ್ಲಿ 18 ಮಹಾಪುರಾಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪೈಕಿ ಗರುಡ ಮಹಾಪುರಾಣವೂ ಒಂದು. ಇದರಲ್ಲಿ ವ್ಯಕ್ತಿಯ ಯಶಸ್ಸು ಮತ್ತು ಸಂತೋಷದ ಜೀವನದ ಆಳವಾದ ರಹಸ್ಯಗಳ ಬಗ್ಗೆ ಹೇಳಲಾಗಿದೆ. ಇದನ್ನು ಪಠಿಸುವುದರಿಂದ ವ್ಯಕ್ತಿಯು ಅನೇಕ ಜ್ಞಾನವನ್ನು ತಿಳಿದುಕೊಳ್ಳುತ್ತಾನೆಂದು ಹೇಳಲಾಗುತ್ತದೆ. ಗರುಡ ಪುರಾಣದಲ್ಲಿ ಹುಟ್ಟಿನಿಂದ ಸಾಯುವವರೆಗಿನ ವಿಷಯಗಳನ್ನು ವಿವರಿಸಲಾಗಿದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗರುಡ ಪುರಾಣದಲ್ಲಿ ಜನರು ಸರಳ ರೀತಿಯಲ್ಲಿ ಜೀವನ ನಡೆಸುವಂತೆ ಹೇಳಲಾಗಿದೆ. ಆದರೆ ಜನರು ಗರುಡ ಪುರಾಣ ಮಂತ್ರ ಪಠಿಸಲು ಹಿಂದೇಟು ಹಾಕುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಮನೆಯಲ್ಲಿ ಒಬ್ಬ ವ್ಯಕ್ತಿ ಸತ್ತ ನಂತರ 13 ದಿನಗಳ ಕಾಲ ಗರುಡ ಪುರಾಣ ಪಠಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮನೆಯಲ್ಲಿಯೇ ಮಾಡಬಹುದು.


ಗರುಡ ಪುರಾಣದಲ್ಲಿನ ಮಂತ್ರಗಳು


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗರುಡ ಪುರಾಣದಲ್ಲಿ ಕೆಲವು ಮಂತ್ರಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ನಿಯಮಿತವಾಗಿ ಜಪಿಸುವುದರಿಂದ ವ್ಯಕ್ತಿಯು ದೀರ್ಘಾಯುಷ್ಯ ಹೊಂದುವ ಮೂಲಕ, ರೋಗಗಳು ಮತ್ತು ಆರ್ಥಿಕ ತೊಂದರೆಗಳಿಂದ ಮುಕ್ತಿ ಪಡೆಯುತ್ತಾನೆ. ಈ ಮಂತ್ರಗಳ ಬಗ್ಗೆ ತಿಳಿಯಿರಿ.


ಇದನ್ನೂ ಓದಿ: Dreams: ಇಂತಹ ಕನಸುಗಳು ಭವಿಷ್ಯದಲ್ಲಿ ಕೆಟ್ಟ ಘಟನೆಯನ್ನು ಸೂಚಿಸುತ್ತವೆ!


ಬಡತನ ತೊಡೆದುಹಾಕಲು ಮಂತ್ರ


ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಮಂತ್ರವನ್ನು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಜಪಿಸುವುದರಿಂದ ವ್ಯಕ್ತಿಯು ಆರ್ಥಿಕ ಮುಗ್ಗಟ್ಟು ದೂರವಾಗುತ್ತಾನೆ ಮತ್ತು ವ್ಯಕ್ತಿಯ ಜೀವನವು ಸುಖ-ಸಂಪತ್ತಿನಿಂದ ಕೂಡಿರುತ್ತದೆ ಎಂದು ಹೇಳಲಾಗಿದೆ.


ಮಂತ್ರ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ‘ಓಂ ಜುನ್ ಸಾಹ್’ ಮಂತ್ರವನ್ನು ಪಠಿಸುವುದರಿಂದ ತ್ವರಿತ ಪ್ರಯೋಜನ ಸಿಗುತ್ತದೆ. ಇದರೊಂದಿಗೆ ಶ್ರೀ ವಿಷ್ಣು ಸಹಸ್ತ್ರನಾಮವನ್ನು ಪಠಿಸಲು ಸಹ ಸಲಹೆ ನೀಡಲಾಗುತ್ತದೆ. ಇದನ್ನು 6 ತಿಂಗಳ ಕಾಲ ನಿರಂತರವಾಗಿ ಮಾಡಿದರೆ ವ್ಯಕ್ತಿಯು ಶೀಘ್ರದಲ್ಲೇ ಹಣದ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ.


ದೀರ್ಘಾಯುಷ್ಯ ಮತ್ತು ಆರೋಗ್ಯಕರ ದೇಹಕ್ಕಾಗಿ


ಭಗವಾನ್ ವಿಷ್ಣುವು ಹೇಳಿದ ಸಂಜೀವನಿ ಮಂತ್ರವನ್ನು ಗರುಡ ಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯು ಆರೋಗ್ಯಕರ ದೇಹ ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ಆಯಸ್ಸು ಇದರಿಂದ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.


ಮಂತ್ರ- 'ಯಕ್ಷಿ ಓಂ ಓಂ ಸ್ವಾಹಾ' ಈ ಮಂತ್ರವನ್ನು ಸಂಪೂರ್ಣ ನಿಯಮಗಳೊಂದಿಗೆ ಜಪಿಸಬೇಕು. ನಿಯಮಗಳ ಅರಿವಿಲ್ಲದೆ ಜಪ ಮಾಡಿದರೆ ಫಲ ಸಿಗುವುದಿಲ್ಲವೆಂದು ಹೇಳಲಾಗಿದೆ.  


ಇದನ್ನೂ ಓದಿShani Gochar 2023: ರಾಹು ಜೊತೆ ಶನಿ ಅಪಾಯಕಾರಿ ಮೈತ್ರಿ, ಈ ರಾಶಿಯವರಿಗೆ 7 ತಿಂಗಳು ಸಂಕಷ್ಟ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.