Garuda Purana: ಸಾವಿನ ನಂತರದ ಪ್ರಯಾಣವನ್ನು (Journey After Death) ಕೆಲವರು ನಂಬುತ್ತಾರೆ ಮತ್ತು ಕೆಲವರು ನಂಬುವುದಿಲ್ಲ. ಆದರೆ, ಪ್ರತಿಯೊಬ್ಬರಿಗೂ ಕೂಡ ಅದರ ಕುರಿತು ತಿಳಿದುಕೊಳ್ಳುವ ಕುತೂಹಲ ಹೊಂದಿರುತ್ತಾರೆ. ಈ ಕುರಿತು ಹಿಂದೂ ಧರ್ಮಗ್ರಂಥಗಳಲ್ಲಿ (Hindu Dharma Granth) ಹಾಗೂ ಗರುಡ ಪುರಾಣಗಳಲ್ಲಿ (Garuda Purana) ಸಾಕಷ್ಟು ಸಂಗತಿಗಳನ್ನು ಸವಿಸ್ತಾರವಾಗಿ ಉಲ್ಲೇಖಿಸಲಾಗಿದೆ. ಈ ಸಂಗತಿಗಳು (Karmic Account Of Person) ಕೇವಲ ಆತ್ಮಗಳ ಪ್ರಯಾಣದ ಕುರಿತು ಮಾತ್ರವೇ ಹೇಳುವುದಿಲ್ಲ. ಅವು ವ್ಯಕ್ತಿಯ ಕರ್ಮಗಳ (Karma) ಆಧಾರದ ಮೇಲೆ ಆತ್ಮವನ್ನು ಹೇಗೆ ಪರಿಗಣಿಸಲಾಗುತ್ತದೆ ಮತ್ತು ಯಾವ ಆಧಾರದ ಮೇಲೆ ಆ ವ್ಯಕ್ತಿಗೆ ಸ್ವರ್ಗ (Heaven) ಸಿಗುತ್ತದೆ ಅಥವಾ ನರಕ (Hell) ಸಿಗುತ್ತದೆ ಎಂದೂ ಕೂಡ ಹೇಳುತ್ತವೆ. 


COMMERCIAL BREAK
SCROLL TO CONTINUE READING

ಮನುಷ್ಯನ ಈ ಕರ್ಮಗಳು ಆತನಿಗೆ ಸ್ವರ್ಗ ನೀಡುತ್ತವೆ
ಗರುಡ ಪುರಾಣದ ಪ್ರಕಾರ ವ್ಯಕ್ತಿಯ  ಕೆಲ ಕರ್ಮಗಳು ಮರಣಾನಂತರ ಆತನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತವೆ.  ಇದಕ್ಕಾಗಿ ವ್ಯಕ್ತಿ ತನ್ನ ಜೀವನದಲ್ಲಿ ಪ್ರಜ್ಞಾಪೂರ್ವಕವಾಗಿ ವರ್ತಿಸಬೇಕು. ತನ್ನ ಪಂಚೆಂದ್ರಿಯಗಳನ್ನು ಆತ ನಿಯಂತ್ರಣದಲ್ಲಿಡಬೇಕು. ಮಡದಿಯನ್ನು ಹೊರತುಪಡಿಸಿ ಆತ ಪ್ರಪಂಚದ ಇತರ ಮಹಿಳೆಯರನ್ನು ತಾಯಿ ಸಹೋದರಿ ಅಥವಾ ಮಗಳಂತೆ ನೋಡಬೇಕು. ಒಟ್ಟಾರೆ ಹೇಳುವುದಾದರೆ ಸ್ವರ್ಗ ಪಡೆಯಲು ಆತ ಸ್ತ್ರೀಯರನ್ನು ಗೌರವಿಸಬೇಕು.


ಇದನ್ನೂ ಓದಿ-Astrology: ಈ ನಾಲ್ಕು ರಾಶಿಗಳ ಪಾಲಿಗೆ ವರದಾನ ಸಾಬೀತಾಗಲಿದೆ ಅಕ್ಟೋಬರ್ ತಿಂಗಳು, ನಿಮ್ಮ ರಾಶಿ ಇದರಲ್ಲಿದೆಯಾ ?


ಇದಲ್ಲದೆ ದಾನ-ಪುಣ್ಯ ಕರ್ಮಗಳಲ್ಲಿ ತೊಡಗಿರುವವವರು, ಇತರರಿಗೆ ನೀರಿನ ಸೌಕರ್ಯವನ್ನು ಒದಗಿಸುವವರಿಗೂ ಕೂಡ ಸ್ವರ್ಗ ಸಿಗುತ್ತದೆ. ಇತರರಿಗೆ ನೀರು ನೀಡುವುದು ಪುಣ್ಯದ ಕೆಲಸ ಎನ್ನಲಾಗುತ್ತದೆ.


ಇದನ್ನೂ ಓದಿ-Navratri 2021 : ನವರಾತ್ರಿಯ ಮೊದಲು ತಿಳಿದಿರಲಿ ಈ ನಿಯಮಗಳು : ಯಾರು ಉಪವಾಸ ಮಾಡಬಾರದು? 


ಇಂತಹ ಕೆಲಸ ಮಾಡುವುದರಿಂದ ಸಿಗುತ್ತದೆ ನರಕ
ಆಸೆ ಪಡುವವರು, ದುರಾಚಾರಿಗಳು, ಇತರರಿಗೆ ಹಾನಿ ತಲುಪಿಸುವ ಜನರಿಗೆ ನರಕ ಸಿಗುತ್ತದೆ. ಅದರಲ್ಲೂ ವಿಶೇಷವಾಗಿ ಬಡವರು, ಕಾಯಿಲೆಗೆ ಗುರಿಯಾಗಿರುವವರು, ಅನಾಥ ಹಾಗೂ ವೃದ್ಧರಿಗೆ ಕಷ್ಟ ನೀಡುವವ ಜನರ ಸ್ಥಿತಿ ಸಾವಿನ ಬಳಿಕ ತುಂಬಾ ಕಷ್ಟಕರವಾಗಿರುತ್ತದೆ. ಮಹಿಳೆಯರಿಗೆ ಅವಮಾನ ಮಾಡುವ, ಕನ್ಯೆಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವವರು, ಪಿತೃರ ಶ್ರಾದ್ಧ-ಪಕ್ಷಗಳನ್ನು ನೆರವೆರಿಸದೆ ಇರುವವರಿಗೆ ನರಕದಲ್ಲಿಯೇ ಜಾಗ ಸಿಗುತ್ತದೆ. ಇತರರ ಹಣವನ್ನು ಲಪಟಾಯಿಸುವವರ ಜೊತೆಗೂ ಕೂಡ ಇದೆ ರೀತಿ ಆಗುತ್ತದೆ.


ಇದನ್ನೂ ಓದಿ-Kitchen Vastu Tips : ಮನೆಯ ವಾಸ್ತು ದೋಷಕ್ಕೆ ಮೂಲ ಕಾರಣ 'ಲಟ್ಟಣಿಗೆ' : ಅದಕ್ಕೆ ಸಂಬಂಧಿಸಿದ ಪ್ರಮುಖ ನಿಯಮ ತಿಳಿದುಕೊಳ್ಳಿ  


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಸಲಹೆಗಳನ್ನು ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಿದ ವ್ಯಕ್ತಿಗಳ ಸಲಹೆ ಪಡೆಯಲು ಮರೆಯಬೇಡಿ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.