Garuda Purana: ದಿನದ ಯಾವುದೇ ಸಮಯದಲ್ಲಿ ಈ 4 ಸಂಗತಿಗಳು ಕಂಡರೆ, ಕೆಟ್ಟ ಕಾಲ ತೊಲಗಿ ಜೀವನ ಸುಖಮಯವಾಗುತ್ತದೆ
Teachings Of Garun Purana - ಹಿಂದೂ ಧರ್ಮಶಾಸ್ತ್ರಗಳಲ್ಲಿ ಹಸುವನ್ನು ಅತ್ಯಂತ ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿದೆ. ಇದೆ ಕಾರಣದಿಂದ ಹಸು ವಿಶ್ವಕ್ಕೆ ತಾಯಿ ಎಂದೂ ಕೂಡ ಹೇಳಲಾಗುತ್ತದೆ. ಏಕೆಂದರೆ ಸಮುದ್ರ ಮಂಥನದಿಂದಲೇ ಗೋವು ಹುಟ್ಟಿ ಕೊಂಡಿದೆ ಎಂಬುದು ಪುರಾಣಗಳಲ್ಲಿ ಉಲ್ಲೇಖಿತ. ಬೆಳಗ್ಗೆ ಆಗಲಿ ಅಥವಾ ದಿನದ ಯಾವುದೇ ಸಮಯದಲ್ಲಿ ಹಸು ಕಂಡರೆ ಕೆಟ್ಟ ಗಳಿಗೆ ತೊಲಗುತ್ತದೆ ಎನ್ನಲಾಗುತ್ತದೆ.
ನವದೆಹಲಿ: Garud Purana Path - ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ (Garud Dev Worship) ವಿಶೇಷ ಸ್ಥಾನಮಾನ ಇದೆ. ಈ ಪುಸ್ತಕವನ್ನು ಸಾವಿನ ನಂತರ ನಡೆಯುವ ಆಚರಣೆಗಳೊಂದಿಗೆ ಜೋಡಿಸಿ ನೋಡಲಾಗಿದೆ. ಹಿಂದೂ ಧರ್ಮದ ನಂಬಿಕೆಗಳಲ್ಲಿ, ಯಾವುದೇ ಓರ್ವ ವ್ಯಕ್ತಿಯ ಮರಣದ ನಂತರ ಗರುಡ (Garud Dev) ಪುರಾಣವನ್ನು ಓದಲಾಗುತ್ತದೆ. ಇದರ ಪಾರಾಯಣದಿಂದ ಮರಣ ಹೊಂದಿದವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆದರೆ ಇದಲ್ಲದೇ ಗುರುಪುರಾಣದಲ್ಲಿ ಹಲವು ವಿಶೇಷ ವಿಷಯಗಳನ್ನು ಹೇಳಲಾಗಿದೆ. ಇದರೊಂದಿಗೆ ಶಕುನ, ಅಪಶಕುನ ವಿಷಯಗಳನ್ನೂ ಇದರಲ್ಲಿ ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ, ಒಂದು ದಿನದಲ್ಲಿ 4 ವಿಷಯಗಳನ್ನು ನೋಡುವುದರಿಂದ ಕೆಟ್ಟ ಸಮಯ ತೊಲಗುತ್ತದೆ ಎನ್ನಲಾಗಿದೆ.
ಹಸು
ಹಿಂದೂ ಧರ್ಮಶಾಸ್ತ್ರಗಳಲ್ಲಿ ಹಸುವನ್ನು ಅತ್ಯಂತ ಪವಿತ್ರ ಪ್ರಾಣಿ ಎಂದು ಪರಿಗಣಿಸಲಾಗಿದೆ. ಇದೆ ಕಾರಣದಿಂದ ಹಸು ವಿಶ್ವಕ್ಕೆ ತಾಯಿ ಎಂದೂ ಕೂಡ ಹೇಳಲಾಗುತ್ತದೆ. ಏಕೆಂದರೆ ಸಮುದ್ರ ಮಂಥನದಿಂದಲೇ ಗೋವು ಹುಟ್ಟಿ ಕೊಂಡಿದೆ ಎಂಬುದು ಪುರಾಣಗಳಲ್ಲಿ ಉಲ್ಲೇಖಿತ. ಬೆಳಗ್ಗೆ ಆಗಲಿ ಅಥವಾ ದಿನದ ಯಾವುದೇ ಸಮಯದಲ್ಲಿ ಹಸು ಕಂಡರೆ ಕೆಟ್ಟ ಗಳಿಗೆ ತೊಲಗುತ್ತದೆ ಎನ್ನಲಾಗುತ್ತದೆ. ಹೀಗಾಗಿ ಹಸು ದಿನದಲ್ಲಿ ನಿಮಗೆ ಎಲ್ಲಿಯೇ ಕಂಡರೂ ಕೂಡ ಅದಕ್ಕೆ ನಮಸ್ಕರಿಸಿ.
ಗೋಮೂತ್ರ
ಹಿಂದೂ ಧರ್ಮದಲ್ಲಿ ಗೋಮೂತ್ರವನ್ನು ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಇದನ್ನು ಪೂಜೆ ಅಥವಾ ಇತರ ಶುಭ ಕಾರ್ಯಗಳಿಗೆ ಬಳಸಲಾಗುತ್ತದೆ. ಆದ್ದರಿಂದ, ಗೋಮೂತ್ರವನ್ನು ನೋಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಗೋಮೂತ್ರದ ಸೇವನೆಯು ಧರ್ಮಗ್ರಂಥಗಳಲ್ಲಿ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ಆಯುರ್ವೇದದಲ್ಲಿ ಹಲವು ಬಗೆಯ ಔಷಧಗಳ ತಯಾರಿಕೆಯಲ್ಲಿ ಗೋಮೂತ್ರವನ್ನು ಬಳಸಲಾಗುತ್ತದೆ.
ಮಾಗಿದ ಬೆಳೆ
ಗರುಡ ಪುರಾಣದ ಪ್ರಕಾರ, ದಾರಿಯಲ್ಲಿ ಫಸಲು ಬೆಳೆದಿರುವುದು ನೋಡುವುದು ಶುಭ ಸಂಕೇತವಾಗಿದೆ. ಮತ್ತೊಂದೆಡೆ, ಬೆಳೆ ಪರಿಪಕ್ವವಾಗಿದ್ದರೆ ಅದು ಇನ್ನೂ ಹೆಚ್ಚು ಮಂಗಳಕರವಾಗಿರುತ್ತದೆ. ಗರುಡ ಪುರಾಣದಲ್ಲಿ ಮಾಗಿದ ಬೆಳೆಗಳಿಂದ ತುಂಬಿದ ಹೊಲವನ್ನು ನೋಡುವುದರಿಂದ ವ್ಯಕ್ತಿಗೆ ಪುಣ್ಯದ ಜೊತೆಗೆ ಲಾಭ ಪ್ರಾಪ್ತಿಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿ-Black Pepper Tricks : ಕರಿಮೆಣಸಿನ ಈ 5 ಟ್ರಿಕ್ಸ್ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ! ಹೇಗೆ ಇಲ್ಲಿದೆ ನೋಡಿ
ಹಸುವಿನ ಗೊರಸಿನ ಧೂಳು
ಹಸು ತನ್ನ ಪಾದಗಳಿಂದ ನೆಲವನ್ನು ಗೀಚುತ್ತದೆ. ಇದರಿಂದ ನೆಲದಿಂದ ಧೂಳು ಏಳುತ್ತದೆ. ಇದನ್ನುಗೋಧೂಳಿ ಎಂದು ಕರೆಯಲಾಗುತ್ತದೆ, ಅಂದರೆ ಹಸುವಿನ ಗೊರಸಿನ ಧೂಳು. ಹಸುವಿನ ಪಾದಗಳಿಂದ ಹೊರಬರುವ ಧೂಳು ಕೂಡ ಪವಿತ್ರವಾಗುತ್ತದೆ ಎಂದು ನಂಬಲಾಗಿದೆ. ಸಂಧ್ಯಾಕಾಲದಲ್ಲಿ ಗೋಧೂಳಿಯನ್ನು ನೋಡುವುದರಿಂದಲೇ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಇದನ್ನೂ ಓದಿ-Health Tips: ದಾಳಿಂಬೆ ಸಿಪ್ಪೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ
(ಹಕ್ಕುತ್ಯಾಗ: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕೂ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪದಿಸುವುದಿಲ್ಲ)
ಇದನ್ನೂ ಓದಿ-Shani Dev: ಶನಿವಾರದಂದು ಈ 4 ವಸ್ತುಗಳನ್ನು ಖರೀದಿಸಬೇಡಿ, ಇಲ್ಲದಿದ್ದರೆ ಶನಿದೇವನ ಕೃಪೆ ನಿಲ್ಲುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.