ಪಪ್ಪಾಯ ಹಣ್ಣಿನ ಸೇವನೆಯಿಂದ ಪಡೆಯಿರಿ ಸರ್ವರೋಗಕ್ಕೆ ಮುಕ್ತಿ
ಪಪ್ಪಾಯಿಯು ಭಾರತದಲ್ಲಿ ವ್ಯಾಪಕವಾಗಿ ತಿನ್ನುವ ಮತ್ತು ಇಷ್ಟಪಡುವ ಹಣ್ಣಾಗಿದೆ. ಈ ಹಣ್ಣಿನ ನಿಯಮಿತ ಸೇವನೆಯನ್ನು ಆರೋಗ್ಯ ತಜ್ಞರು ಸಹ ಶಿಫಾರಸು ಮಾಡುತ್ತಾರೆ. ಆದರೆ ಅದನ್ನು ಅತಿಯಾಗಿ ಸೇವಿಸಿದರೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಬದಲು ಹಾನಿಕಾರಕವಾಗಲಿದೆ. ಕೆಲವು ರೋಗದಿಂದ ಬಳಲುತ್ತಿರುವವರು ಈ ಹಣ್ಣಿನಿಂದ ದೂರವಿರುವಂತೆ ಸಲಹೆ ನೀಡಲಾಗುತ್ತದೆ. ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ ಸಿ ಯಂತಹ ಸಮೃದ್ಧ ಪೋಷಕಾಂಶಗಳಿರುತ್ತವೆ. ಆದರೂ ಈ ಹಣ್ಣು ಕೆಲವು ಸಮಸ್ಯೆಗಳಿದ್ದವರಿಗೆ ಹಾನಿಕಾರಕವಾಗಿರುತ್ತದೆ.
ಈ ಜನರು ಪಪ್ಪಾಯಿ ತಿನ್ನಬಾರದು :
1. ಕಿಡ್ನಿ ಸ್ಟೋನ್ ರೋಗಿಗಳು :
ಪಪ್ಪಾಯವು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶವನ್ನು ಕ್ಯಾಲ್ಸಿಯಂನೊಂದಿಗೆ ಬೆರೆಸಿದರೆ, ಅದು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬಾರದು.
2. ಈ ರೀತಿಯ ಔಷಧಿಯನ್ನು ತೆಗೆದುಕೊಳ್ಳುವವರು :
ರಕ್ತ ತೆಳುಗೊಳಿಸುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಪಪ್ಪಾಯಿಯು ಹಾನಿಕಾರಕವಾಗಿ ಪರಿಣಮಿಸಬಹುದು. ರಕ್ತ ಪರಿಚಲನೆಯಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರು ಈ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಇಂಥಹ ರೋಗಿಗಳು ಪಪ್ಪಾಯ ಹಣ್ಣನ್ನು ಸೇವಿಸಿದರೆ, ತೊಂದರೆ ಎದುರಾಗಬಹುದು. ಇವರಿಗೆ ಗಾಯವಾದಾಗ ರಕ್ತಡ ಹರಿವನ್ನು ನಿಲ್ಲಿಸುವುದು ಕಷ್ಟವಾಗುತ್ತದೆ.
3. ಅಸ್ತಮಾ ರೋಗಿಗಳು :
ಉಸಿರಾಟದ ತೊಂದರೆ ಇದ್ದರೆ, ಪಪ್ಪಾಯಿಯಿಂದ ದೂರವಿರುವುದು ಒಳ್ಳೆಯದು. ಈ ಹಣ್ಣಿನಲ್ಲಿರುವ ಕಿಣ್ವಗಳು ಅಸ್ತಮಾ ರೋಗಿಗಳಿಗೆ ಹಾನಿಕಾರಕವಾಗಿರುತ್ತದೆ.
4. ಗರ್ಭಿಣಿಯರು:
ಅನೇಕ ಆರೋಗ್ಯ ತಜ್ಞರ ಪ್ರಕಾರ, ಗರ್ಭಿಣಿಯರು ಪಪ್ಪಾಯಿಯನ್ನು ತಿನ್ನಬಾರದು. ಈ ಹಣ್ಣು ಗರ್ಭಿಣಿಯರಿಗೆ ಹಾನಿಕಾರಕ ಎಂದು ಹೇಳಲಾಗಿದೆ.
5. ಅಲರ್ಜಿ ಹೊಂದಿರುವವರು :
ಅಲರ್ಜಿಯಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಪಪ್ಪಾಯಿಯನ್ನು ತಿನ್ನಬಾರದು. ಅದರಲ್ಲಿರುವ ಪಪೈನ್ ಅಂಶಗಳು ಸಮಸ್ಯೆಯನ್ನು ಹೆಚ್ಚಿಸಬಹುದು ಮತ್ತು ನಿಮಗೆ ಚರ್ಮದಲ್ಲಿ ತುರಿಕೆ ಅಥವಾ ಉರಿ ಕಾಣಿಸಿಕೊಳ್ಳಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.