ನವದೆಹಲಿ: ಕೃತಕ ಮೂತ್ರಪಿಂಡ(Artificial Kidney) ಪರೀಕ್ಷೆಯು ಯಶಸ್ವಿಯಾಗಿದ್ದು, ಆರೋಗ್ಯ ಸೌಲಭ್ಯ ಸುಧಾರಿಸುವ ಕ್ಷೇತ್ರದಲ್ಲಿ ದೊಡ್ಡ ಸಾಧನೆಯೊಂದು ಮುನ್ನೆಲೆಗೆ ಬಂದಿದೆ. ಈಗ ಕಿಡ್ನಿ ರೋಗಿಗಳು ಡಯಾಲಿಸಿಸ್ ಮತ್ತು ಕಿಡ್ನಿ ಕಸಿ ಸಮಸ್ಯೆಯಿಂದ ಮುಕ್ತರಾಗುವ ಸಮಯ ಬಂದಿದೆ. ಇದೇ ವೇಳೆ ಈ ಸಾಧನೆಯಲ್ಲಿ ಯಶಸ್ವಿಯಾದ ವೈದ್ಯರ ತಂಡಕ್ಕೆ 6 ಲಕ್ಷದ 50 ಸಾವಿರ ಡಾಲರ್ ಬಹುಮಾನವೂ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಈ ಕಂಪನಿ ಕೃತಕ ಮೂತ್ರಪಿಂಡಕ್ಕೆ ಬಹುಮಾನ ನೀಡಿದೆ


'ಸ್ಕೂಲ್ ಆಫ್ ಫಾರ್ಮಸಿ' ಅಧ್ಯಯನದ ಪ್ರಕಾರ ಹೊಸ ತಂತ್ರಜ್ಞಾನ ಕಂಡುಹಿಡಿದ ವೈದ್ಯರಿಗೆ KidneyX ಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿದೆ. ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಮತ್ತು ಅಮೇರಿಕನ್ ಸೊಸೈಟಿ ಆಫ್ ನೆಫ್ರಾಲಜಿ ನಡುವಿನ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಾಗಿ KidneyX ಸಂಸ್ಥೆ ಕೆಲಸ ಮಾಡುತ್ತಿದೆ. ಮೂತ್ರಪಿಂಡದ ಕಾಯಿಲೆಗಳ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಹೊಸ ಪ್ರಯೋಗಗಳನ್ನು ವೇಗಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.


ಇದನ್ನೂ ಓದಿ: Eggs In Fridge: ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಎಷ್ಟು ಸುರಕ್ಷಿತ?


ಕೃತಕ ಮೂತ್ರಪಿಂಡದಲ್ಲಿ ಎರಡು ಅಗತ್ಯ ಭಾಗಗಳು


ಯುಸಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಶುವೊ ರೈ  ಮತ್ತು ವಾಂಡರ್‌ಬಿಲ್ಟ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಎಂಡಿ ವಿಲಿಯಂ ಫಿಸೆಲ್ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಸಹಯೋಗದಲ್ಲಿ ಈ ಮೂತ್ರಪಿಂಡ ಯೋಜನೆ(Kidney Test) ನಡೆಯುತ್ತಿದೆ. ಕೃತಕ ಮೂತ್ರಪಿಂಡದಲ್ಲಿ ಹೆಮ್ಫಿಲ್ಟರ್ ಮತ್ತು ಜೈವಿಕ ರಿಯಾಕ್ಟರ್ ಎಂಬ ಎರಡು ಅಗತ್ಯ ಭಾಗಗಳಿವೆ, ಈ ಎರಡೂ ಸ್ಮಾರ್ಟ್‌ಫೋನ್ ಗಾತ್ರದ ಸಾಧನಗಳನ್ನು ರೋಗಿಯಲ್ಲಿ ಅಳವಡಿಸುವ ಮೂಲಕ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಇದೇ ಕಾರ್ಯವನ್ನು ಮೆಚ್ಚಿ ವೈದ್ಯರ ತಂಡಕ್ಕೆ KidneyXನಿಂದ 'Phase 1 Artificial Kidney Award' ನೀಡಲಾಗಿದೆ.


ದೊಡ್ಡ ಸಾಧನೆ & ದೊಡ್ಡ ಆವಿಷ್ಕಾರ


ಕಳೆದ ಕೆಲವು ವರ್ಷಗಳಲ್ಲಿ ಈ ಮೂತ್ರಪಿಂಡ ಯೋಜನೆ(Kidney Functions)ಯು ರಕ್ತದಿಂದ ತ್ಯಾಜ್ಯ ಉತ್ಪನ್ನಗಳನ್ನು ಮತ್ತು ವಿಷವನ್ನು ತೆಗೆದುಹಾಕುವ ಹಿಮೋಫಿಲ್ಟರ್‌ಗಳನ್ನು ಮತ್ತು ರಕ್ತದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುವಂತಹ ಇತರ ಮೂತ್ರಪಿಂಡದ ಕಾರ್ಯಗಳನ್ನು ನಿರ್ವಹಿಸುವ ಜೈವಿಕ ರಿಯಾಕ್ಟರ್‌ಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಇಲ್ಲಿಯವರೆಗೆ ಮೂತ್ರಪಿಂಡ ವೈಫಲ್ಯದ ಸಂದರ್ಭದಲ್ಲಿ ಅಂತಹ ಪರಿಹಾರ ಲಭ್ಯವಿತ್ತು. ಹೆಚ್ಚಿನ ಮೂತ್ರಪಿಂಡ ರೋಗಿಗಳು ರಕ್ತ ಪಡೆಯಲು ಪ್ರತಿ ವಾರ ಹಲವಾರು ಬಾರಿ ಡಯಾಲಿಸಿಸ್(Kidney Transplant) ಕ್ಲಿನಿಕ್‌ಗಳಿಗೆ ಹೋಗಬೇಕಾಗುತ್ತದೆ. ಇದರಲ್ಲಿ ಅವರಿಗೆ ಫಿಲ್ಟರ್ ಮಾಡಿದ ರಕ್ತವನ್ನು ನೀಡಬೇಕಾಗಿರುವುದು ಅನಾನುಕೂಲ ಮತ್ತು ಅಪಾಯಕಾರಿಯಾಗಿದೆ. ಇದಲ್ಲದೇ ಇದರ ಶಾಶ್ವತ ಚಿಕಿತ್ಸೆಗಾಗಿ ಕಿಡ್ನಿ ದಾನ ಮಾಡಬೇಕಾಗಿದ್ದು, ಹೆಚ್ಚಿನ ಬೇಡಿಕೆಯಿದೆ. ಈ ಕಾರಣದಿಂದ ಕೃತಕ ಮೂತ್ರಪಿಂಡ ಪರೀಕ್ಷೆಯು ಒಂದು ದೊಡ್ಡ ಆವಿಷ್ಕಾರವಾಗಿದೆ.


ಇದನ್ನೂ ಓದಿ: Curd - Turmeric Benefits : ಮೊಸರು ಮತ್ತು ಅರಿಶಿನವನ್ನು ಹೀಗೆ ಬಳಸಿ : ಇದರಿಂದ ಆರೋಗ್ಯಕ್ಕೆ ಸಿಗಲಿದೆ ಈ 5 ಪ್ರಯೋಜನಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.