ಹೆಣ್ಣು ಮಕ್ಕಳು ಪ್ರತಿದಿನ ಫೋನ್ನಲ್ಲಿ ಇದನ್ನ ನೋಡದೆ ನಿದ್ದೆ ಮಾಡಲ್ಲ? ಅಷ್ಟಕ್ಕೂ ಅಂತದ್ದು ಏನು ನೋಡುತ್ತಾರೆಂದು ತಿಳಿಯಿರಿ
Women search on google: 18 ರಿಂದ 35 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಸಾಮಾನ್ಯವಾಗಿ ತಮ್ಮ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಸರ್ಚ್ ಮಾಡಿದರೆ, ಇನ್ನು ಕೆಲವರು ತಮ್ಮ ಸೌಂದರ್ಯದ ಬಗ್ಗೆ ತಿಳಿಯಲು & ತಮ್ಮ ದೇಹ ಫಿಟ್ ಆಗಿರಲು ಡಯಟ್ ಪ್ಲಾನ್‌ಗಳ ಬಗ್ಗೆ ಸರ್ಚ್ ಮಾಡುತ್ತಾರಂತೆ.
What Women Search on Internet?: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸೋಷಿಯಲ್ ಮೀಡಿಯಾ ಎಂಬ ಮಾಯಾಬಜಾರಿನಲ್ಲಿ ಮುಳುಗಿ ಹೋಗಿದ್ದಾರೆ. ಈ ಮಾಯಾಜಾಲದಲ್ಲಿ ಯಾರಾದ್ರೂ ಸಿಲುಕಿಕೊಂಡ್ರೆ ಅದರಿಂದ ಹೊರಬರುವುದು ತುಂಬಾ ಕಠಿಣವೆಂದೇ ಹೇಳಬಹುದು. ಇಂದು ಚಿಕ್ಕ ವಯಸ್ಸಿನವರಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ಸ್‌ಗಳಿವೆ. ಶಾಲೆಗೆ ಹೋಗುವ ಮಕ್ಕಳು ಸಹ ಮೊಬೈಲ್ ಹಿಡಿದು, ಆನ್‌ಲೈನ್ ಶಾಪಿಂಗ್ ಮಾಡುವ ಕಾಲ ಇದು. ಇಂದಿನ ವಿದ್ಯಾರ್ಥಿಗಳು ತಮಗೆ ಏನಾದರೂ ಅರ್ಥವಾಗದಿದ್ದರೆ ಅದನ್ನು ಗೂಗಲ್‌ನಲ್ಲಿ ಹುಡುಕಿ ಉತ್ತರ ಕಂಡುಕೊಳ್ಳುತ್ತಾರೆ.
ಇನ್ನು ಇತ್ತೀಚೆಗೆ ವಿದೇಶದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಸುಮಾರು 150 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇಂಟರ್ನೆಟ್ ಬಳಸುತ್ತಾರಂತೆ. ಈ ಪೈಕಿ 20 ಪರ್ಸೆಂಟ್‌ನಷ್ಟು ಹೆಣ್ಣು ಮಕ್ಕಳು ಇಂಟರ್ನೆಟ್ ಬಳಕೆದಾರರಂತೆ. ಹೆಣ್ಣು ಮಕ್ಕಳು ಎಂದ ತಕ್ಷಣ ಎಲ್ಲರೂ ಅದರಲ್ಲಿ ಏನಿದೆ ವಿಶೇಷ? ಎಲ್ಲರೂ ಬಳಸಿದಂತೆ ಅವರು ಬಳಸುತ್ತಾರೆಂದು ತಿಳಿದುಕೊಳ್ಳುತ್ತಾರೆ. ಆದರೆ ಒಂದು ವೆಬ್‌ಸೈಟ್ ಅನ್ನು ಮಾತ್ರ ಈ ಹೆಣ್ಣು ಮಕ್ಕಳು ಪ್ರಮುಖವಾಗಿ ಯಾವಾಗಲೂ ಬಳಸುತ್ತಾರಂತೆ.
ಇದನ್ನೂ ಓದಿ: ಹೇರ್ ಫಾಲ್ ಸಮಸ್ಯೆಗೆ ರಾಮಬಾಣ.. ಮನೆಯ ಮುಂದೆಯೇ ಸಿಗುವ ಈ ಹೂವನ್ನ ಹೀಗೆ ಬಳಸಿದ್ರೆ ಜನ್ಮದಲ್ಲೆ ಉದುರಲ್ಲ ಕೂದಲು!
ಹೌದು, ಪ್ರತಿದಿನ ಮಲಗುವ ಮುನ್ನ ಹೆಣ್ಣು ಮಕ್ಕಳು ಈ ವೆಬ್‌ಸೈಟ್‌ನಲ್ಲಿ ಕೆಲವು ಸರ್ಚ್ ಮಾಡಿ ನೋಡಿದ ನಂತರವೇ ನಿದ್ದೆ ಮಾಡುತ್ತಾರೆಂದು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಹಾಗಾದರೆ ಹೆಣ್ಣು ಮಕ್ಕಳು ಅಂತದ್ದೇನು ನೋಡುತ್ತಾರೆ? ಅವರು ಅದರಲ್ಲಿ ಏನು ಸರ್ಚ್ ಮಾಡುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಇಂದು ನಾವು ಉತ್ತರ ನೀಡಲಿದ್ದೇವೆ. ಹೌದು, ಇತ್ತೀಚೆಗೆ ವಿದೇಶದ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಹೆಣ್ಣು ಮಕ್ಕಳು ಅತಿಹೆಚ್ಚು ಇಂಟರ್ನೆಟ್‌ನಲ್ಲಿ ಏನು ಸರ್ಚ್ ಮಾಡುತ್ತಾರೆ ಅನ್ನೋ ವಿಷಯ ತಿಳಿದು ಬಂದಿದೆ.
ಇದರ ಅನುಸಾರ 18 ರಿಂದ 35 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಸಾಮಾನ್ಯವಾಗಿ ತಮ್ಮ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ಸರ್ಚ್ ಮಾಡಿದರೆ, ಇನ್ನು ಕೆಲವರು ತಮ್ಮ ಸೌಂದರ್ಯದ ಬಗ್ಗೆ ತಿಳಿಯಲು & ತಮ್ಮ ದೇಹ ಫಿಟ್ ಆಗಿರಲು ಡಯಟ್ ಪ್ಲಾನ್‌ಗಳ ಬಗ್ಗೆ ಸರ್ಚ್ ಮಾಡುತ್ತಾರಂತೆ. ಇನ್ನು ಕೆಲ ಸ್ವಾಭಿಮಾನಿ ಮಹಿಳೆಯರು ಉದ್ಯೋಗದ ಕುರಿತು ಮಾಹಿತಿಯನ್ನು ಇಂಟರ್ನೆಟ್ ಮೂಲಕ ಹುಡುಕುತ್ತಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮೊಸರಿನಲ್ಲಿ ಈ ಪದಾರ್ಥ ಬೆರೆಸಿ ಉಜ್ಜಿದ್ರೆ ಸಾಕು ಹಚ್ಚ ಹಳದಿಯಾಗಿರುವ ಹಲ್ಲು ಮುತ್ತಿನಂತಾಗುತ್ತವೆ! ಟ್ರೈ ಮಾಡಿ ನೋಡಿ..
ಇದಷ್ಟೇ ಅಲ್ಲದೆ ಇನ್ನು ಕೆಲವು ಮಹಿಳೆಯರು ಲೈಂಗಿಕ ವಿಷಯದ ಬಗ್ಗೆ ಕೂಡ ಇಂಟರ್ನೆಟ್‌ನಲ್ಲಿ ಹುಡುಕುತ್ತಾರೆ ಅಂತಾ ಈ ಸಮೀಕ್ಷೆಯ ಮೂಲಕ ತಿಳಿದು ಬಂದಿದೆ. ಬಹುತೇಕ ಹೆಣ್ಣುಮಕ್ಕಳು ಅವರವರ ಇಷ್ಟಕ್ಕೆ ತಕ್ಕಂತೆ ಇಂಟರ್ನೆಟ್‌ನಲ್ಲಿ ಸರ್ಚ್ ಮಾಡಿ ಅದರ ಸದುಪಯೋಗ ಮಾಡಿಕೊಳ್ಳುತ್ತಿದ್ದಾರಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.