Lucky Girls Name : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಹೆಸರಿನ ಪ್ರಭಾವವು ಅವನ ಜೀವನದ ಮೇಲೆ ಬೀರುತ್ತದೆ. ವ್ಯಕ್ತಿಯ ಹೆಸರು ಅವನ ಗುರುತು. ವ್ಯಕ್ತಿಯ ಜನ್ಮ ಚಿಹ್ನೆಯ ಆಧಾರದ ಮೇಲೆ ಹೆಸರಿಸಲಾಗುತ್ತದೆ. ಪ್ರತಿಯೊಂದು ಹೆಸರು ತನ್ನದೇ ಆದ ವಿಭಿನ್ನ ಅರ್ಥವನ್ನು ಹೊಂದಿರುತ್ತದೆ. ಆ ಹೆಸರಿನ ಅರ್ಥದ ಪರಿಣಾಮವು ವ್ಯಕ್ತಿಯ ಸ್ವಭಾವ, ಅದೃಷ್ಟದ ಮೇಲೆ ಕಂಡುಬರುತ್ತದೆ. ನಾಮ ಶಾಸ್ತ್ರದ ಪ್ರಕಾರ, ಜನ್ಮ ಚಿಹ್ನೆಯ ಆಧಾರದ ಮೇಲೆ ಇಡುವ ಹೆಸರುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. 


COMMERCIAL BREAK
SCROLL TO CONTINUE READING

ಈ ಹೆಸರಿನ ಹುಡುಗಿಯರು ಅದೃಷ್ಟದಲ್ಲಿ ಬಹಳ ಶ್ರೀಮಂತರು :
ಕೆ ಅಕ್ಷರದ ಹೆಸರಿನ ಹುಡುಗಿಯರು :  ಜ್ಯೋತಿಷ್ಯದ ಪ್ರಕಾರ, ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಹುಡುಗಿಯರು ತುಂಬಾ ಬುದ್ಧಿವಂತರಾಗಿರುತ್ತಾರೆ. ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಈ ಹುಡುಗಿಯರು ತಮ್ಮದೇ ಆದ ಗುರುತನ್ನು ಹೊಂದಿರುತ್ತಾರೆ. ಅವರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿರುತ್ತದೆ. ವೃತ್ತಿಜೀವನದಲ್ಲಿ ಶೀಘ್ರದಲ್ಲೇ ಅವಳು ಯಶಸ್ಸಿನ ಶಿಖರವನ್ನು ಏರುತ್ತಾಳೆ. ಈ ಹುಡುಗಿಯರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ಅವರನ್ನು ಬೆಂಬಲಿಸುತ್ತದೆ. 


ಇದನ್ನೂ ಓದಿ : Garuda Purana: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಇಂದಿನಿಂದಲೇ ಈ ಅಭ್ಯಾಸಗಳನ್ನು ಬಿಟ್ಟುಬಿಡಿ


ಎಲ್ ಅಕ್ಷರದ  ಹೆಸರಿನ ಹುಡುಗಿಯರು  :  ಈ ಹೆಸರಿನ ಹುಡುಗಿಯರ ಮೇಲೆ ಲಕ್ಷ್ಮೀಯ ವಿಶೇಷ ಆಶೀರ್ವಾದವಿರುತ್ತದೆ.  ಜೀವನದಲ್ಲಿ ಏನು ಮಾಡಬೇಕು ಎಂದು ಯೋಚಿಸುತ್ತಾರೆ ಅದೆ ರೀತಿ ಜೀವನವನ್ನು ನಿರ್ವಹಿಸುತ್ತಾಳೆ.  ಈ ಹೆಸರಿನ ಹುಡುಗಿಯರು ಬಹಳ ಶ್ರಮಜೀವಿಗಳು. ಬುದ್ಧಿವಂತಿಕೆಯ ಆಧಾರದ ಮೇಲೆ, ಅವರು ಜೀವನದಲ್ಲಿ ಬಹಳ ಮುಂದೆ ಹೋಗುತ್ತಾರೆ. ಗುರಿ ಸಾಧಿಸಲು ನಿರಂತರವಾಗಿ ಶ್ರಮಿಸುತ್ತಾರೆ.  


ಪಿ ಅಕ್ಷರದ ಹೆಸರಿನ ಹುಡುಗಿಯರು  : ಈ ಹೆಸರಿನ ಹುಡುಗಿಯರು ಸಮಾಜದಲ್ಲಿ ತಮ್ಮ ಪ್ರತ್ಯೇಕ ಐಡೆಂಟಿಟಿಯನ್ನು ಮಾಡಿಕೊಂಡು ಬದುಕಲು ಬಯಸುತ್ತಾರೆ. ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಕೂಡಾ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಈ ಹುಡುಗಿಯರು ಯಾವುದೇ ಕೆಲಸವನ್ನು ಕೂಡಾ ಅರ್ಧಕ್ಕೆ ನಿಲ್ಲಿಸುವುದೇ ಇಲ್ಲ. ವೃತ್ತಿಜೀವನದ ಆರಂಭದಲ್ಲಿಯೇ  ಉನ್ನತ ಸ್ಥಾನಗಳನ್ನು ಏರುತ್ತಾರೆ.  ಇವರಿಗೆ ಜೀವನದಲ್ಲಿ ಯಾವುದೇ ಸೌಕರ್ಯಗಳಿಗೆ ಕೊರತೆಯಿರುವುದಿಲ್ಲ. 


ಇದನ್ನೂ ಓದಿ : ಹಿಮ್ಮುಖ ಚಲನೆ ಆರಂಭಿಸಲಿರುವ ಶನಿ ಮಹಾತ್ಮ .! ಮತ್ತೆ ಕಾಡಲಿದ್ದಾನೆ ಈ ಎರಡು ರಾಶಿಯವರನ್ನು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.