Appu Printed Saree: ಹೆಣ್ಣಿಗೆ ಸೀರೆ ಏಕೆ ಅಂದ... ಸೀರೆಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಇತ್ತೀಚಿನ ದಿನಗಳಲ್ಲಿ  ಹೆಣ್ಣು ಮಕ್ಕಳು ಪ್ಯಾಶನ್ ಗೀಳಿಗೆ ಬಿದ್ದು, ನಮ್ಮ ಸಂಪ್ರದಾಯವನ್ನೇ ಮರೆಯುತ್ತಿದ್ದಾರೆ. ಸೀರೆ ಎಂದರೆ ಮೂಗು ಮುರಿಯುವ ಕೆಲವು ಹೆಣ್ಣು ಮಕ್ಕಳಿಗಾಗಿ ಈಗ, ಒಂದು ಟ್ರೆಂಡಿಂಗ್ ಸೀರೆ ಮಾರುಕಟ್ಟೆಗೆ ಪ್ರವೇಶಿಸಿದೆ. ಅದು ಏನಪ್ಪಾ ಅಂದ್ರೆ  'ಅಪ್ಪು ಸೀರೆ'... 


COMMERCIAL BREAK
SCROLL TO CONTINUE READING

ಹೌದು, ಅಪ್ಪು ನಮ್ಮನ್ನಗಲಿ ವರ್ಷಗಳುರುಳಿದರೂ ಸಹ ಅವರ ನಗುಮುಖ, ಅವರ ನಟನೆ, ಅವರ ವ್ಯಕ್ತಿತ್ವ ಅಚ್ಚ ಹಸಿರಾಗಿದೆ. ಇದೀಗ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಮಾರುಕಟ್ಟೆಯಲ್ಲಿ ಸೀರೆಯ ಮೇಲೆ ಅಪ್ಪು ನಟಿಸಿರುವ ಪಾತ್ರಗಳ ಭಾವಚಿತ್ರವಿರುವ ಸೀರೆ ಬಹಳ ಸದ್ಧು ಮಾಡುತ್ತಿದೆ. 


ಇದನ್ನೂ ಓದಿ- ಚಾಣಕ್ಯನ ಪ್ರಕಾರ ಗಂಡ-ಹೆಂಡತಿಯರ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು? ಏಕಿರಬೇಕು?


ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮ ಜೊತೆ ಇಲ್ಲದಿದ್ದರೂ ಅವರೊಂದಿಗಿನ ನೆನೆಪು ಅವರ ಮೇಲಿನ ಅಭಿಮಾನ ಮಾತ್ರ ಒಂದಿಷ್ಟು ಕಡಿಮೆಯಾಗಿಲ್ಲ. ಅವರು ನಮ್ಮೊಂದಿಗಿದ್ದ ಸುಮಧುರ ಕ್ಷಣಗಳು ನೆನಪುಗಳನ್ನು  ಸದಾ ತಮ್ಮ ಮನದಲ್ಲಿ ಜೀವಂತವಾಗಿಡಲು ಜನರು ನಾನಾ ರೀತಿಯಲ್ಲಿ  ಪ್ರಯತ್ನ ಮಾಡುತ್ತಾರೆ. ಅಂತಹದೇ ಒಂದು  ಪ್ರಯತ್ನ ಸೀರೆಯ ಮೇಲು ಮೂಡಿದೆ. ಅಭಿಮಾನಿಗಳ ಅಭಿಮಾನ ಈಗ ಸೀರೆಯ ಮೇಲೂ ಮೂಡಿರುವುದು ಅದ್ಭುತವಾಗಿದೆ.


ಇತ್ತೀಚೆಗೆ ಈ ಅಪ್ಪು ಸೀರೆ ಹೆಚ್ಚು ಟ್ರೆಂಡಿಂಗ್‌ನಲ್ಲಿದ್ದು, ಆಕರ್ಷಕ ವಿನ್ಯಾಸದೊಂದಿಗೆ ಈ ಸೀರೆಗಳು ಜನರ ಗಮನ ಸೆಳೆಯುತ್ತಿವೆ. ಈ ಸೀರೆಗಳ ಮೇಲೆ ಪುನೀತ್ ರಾಜಕುಮಾರ್ ಅಭಿನಯಿಸಿರುವ ಸಿನೆಮಾಗಳ ಝಲಕ್ ಅನ್ನು ಪ್ರಿಂಟ್ ಹಾಕಿಸುವ ಮೂಲಕ ಅವರ ಮೇಲಿನ ಅಭಿಮಾನದ ಜೊತೆಗೆ ಗೌರವವನ್ನೂ ಸೂಚಿಸಲಾಗಿದೆ. 


ಇದನ್ನೂ ಓದಿ- ಚಳಿಗಾಲದಲ್ಲಿ ಕೂದಲಿನ ಸಮಸ್ಯೆಗಳಿಂದ ಪರಿಹಾರಕ್ಕಾಗಿ ಈ ಸುಲಭ ಟಿಪ್ಸ್ ಅನುಸರಿಸಿ!


ಈ  ಹಿಂದೆ ಪುನೀತ್ ರಾಜಕುಮಾರ್ ಅವರ ವಿವಿಧ ಭಾವಚಿತ್ರಗಳಿರುವ ಸೀರೆಯನ್ನು ಧರಿಸಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸ್ಯಾಂಡಲ್ ವುಡ್ ನಟಿ ʼಸುಕೃತಾ ವಾಗ್ಲೆʼ ಅವರ ಅಭಿಮಾನವನ್ನು ವ್ಯಕ್ತಪಡಿಸಿದ್ದರು. ಇವರ ಈ ಲುಕ್ ಗೆ ಪುನೀತ್ ಅಭಿಮಾನಿಗಳು ಫಿದಾ ಆಗಿದ್ದರು.


ಈ ರೀತಿಯ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ತಮ್ಮ ಅಭಿಮಾನ ಪ್ರೀತಿ, ಗೌರವ ಸಮರ್ಪಣೆಯ ರೀತಿಯಲ್ಲಿ ಸೀರೆಗಳ ಮೇಲೆ ಪ್ರಿಂಟ್ ಮಾಡಿಸಿಕೊಳ್ಳುವ  ಟ್ರೆಂಡ್ ಹೆಚ್ಚಿದೆ. ಇದರ ಜೊತೆಗೆ ಅದರ ರವಿಕೆಗಳು ಸಹ ಅಷ್ಟೇ ಆಕರ್ಷಕವಾಗಿರುವುದರೊಂದಿಗೆ ಅದರ ಇಡೀ ಲುಕ್ ಅನ್ನು ದುಪ್ಪಟ್ಟಾಗಿಸುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.