ನವದೆಹಲಿ: ಎಸ್‌ಪ್ರೆಸೊ ಯಂತ್ರ(ಕಾಫಿ ತಯಾರಿಕಾ ಯಂತ್ರ)ಗಳ ಗಾಡ್‌ಫಾದರ್‌ ಎಂದು ಕರೆಯಲ್ಪಡುವ ಆವಿಷ್ಕಾರಕ ಏಂಜೆಲೊ ಮೊರಿಯೊಂಡೋ ಅವರ 171ನೇ ಜನ್ಮದಿನವನ್ನು ಗೂಗಲ್ ಕಲಾತ್ಮಕ ಡೂಡಲ್‌ನೊಂದಿಗೆ ಆಚರಿಸುತ್ತಿದೆ. ಮೊರಿಯೊಂಡೊ 1884 ರಲ್ಲಿ ಎಸ್ಪ್ರೆಸೊ ಯಂತ್ರವನ್ನು ಪೇಟೆಂಟ್ ಮಾಡಿದ್ದರು. 


COMMERCIAL BREAK
SCROLL TO CONTINUE READING

ಒಲಿವಿಯಾ ವೆನ್ ರಚಿಸಿದ ಗೂಗಲ್ ಡೂಡಲ್, ಎಸ್ಪ್ರೆಸೊ ಯಂತ್ರದ GIF ಮತ್ತು ಕಾಫಿಯನ್ನು ಒಳಗೊಂಡಿದೆ. ಜೂನ್ 6,1851 ರಂದು ಇಟಲಿಯ ಟುರಿನ್‌ನಲ್ಲಿ ಜನಿಸಿದ ಏಂಜೆಲೊ ಮೊರಿಯೊಂಡೋ "ಹೊಸ ಆವಿಷ್ಕಾರಗಳನ್ನು ಮಾಡುವಲ್ಲಿ ಎಂದಿಗೂ ದಣಿವಾಗದ ಉದ್ಯಮಿಗಳ ಕುಟುಂಬಕ್ಕೆ ಸೇರಿದವರು" ಎಂದು ಗೂಗಲ್ ಅಸಾಧಾರಣ ಆವಿಷ್ಕಾರದ ಟಿಪ್ಪಣಿಯಲ್ಲಿ ತಿಳಿಸಿದೆ. 


ಇದನ್ನು ಓದಿ: ದಿನಭವಿಷ್ಯ 05-06-2022: ಈ ರಾಶಿಯವರು ತಮ್ಮ ಕೆಲಸದಲ್ಲಿ ಅಜಾಗರೂಕರಾಗಿರಬಾರದು


ಮೊರಿಯೊಂಡೋ ಅವರ ತಾತ ಮದ್ಯ ಉತ್ಪಾದನಾ ಕಂಪನಿಯನ್ನು ಸ್ಥಾಪಿಸಿದ್ದಾರೆ. ಅದನ್ನು ಅವರ ತಂದೆ ನಿರ್ವಹಿಸುತ್ತಿದ್ದರು. ಮೊರಿಯೊಂಡೊ ತನ್ನ ಸಹೋದರ ಮತ್ತು ಸೋದರಸಂಬಂಧಿಯೊಂದಿಗೆ ಜನಪ್ರಿಯ ಚಾಕೊಲೇಟ್ ಕಂಪನಿ "ಮೊರಿಯೊಂಡೊ ಮತ್ತು ಗ್ಯಾರಿಗ್ಲಿಯೊ"ವನ್ನು ಹುಟ್ಟುಹಾಕಿದರು. ನವೋದ್ಯಮಿಗಳ ಕಾಲದಲ್ಲಿ ಇಟಲಿಯಲ್ಲಿ ಕಾಫಿ ತಯಾರಿಕೆ ಉತ್ತುಂಗದ ಶಿಖರವೇರಿತ್ತು. 


ಎಸ್ಪ್ರೆಸೊ ಅಂದರೆ: 
ಎಸ್ಪ್ರೆಸೊ ಅನ್ನೋದು ಕಂದು ಬಣ್ಣದ ಫೋಮ್ ಆಗಿದ್ದು, ಇದನ್ನು ಕಾಫಿಯಲ್ಲಿ ಸೇರಿಸಲಾಗುತ್ತದೆ. ಇದು ಕಾಫಿಯ ರುಚಿಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಶಾಟ್‌ಗಳಲ್ಲಿ ನೀಡಲಾಗುವ ಇದನ್ನು ನೀಡಲಾಗುತ್ತದೆ. ಎಸ್ಪ್ರೆಸೊ ಯಂತ್ರದ ಸಹಾಯದಿಂದ ಕಾಫಿ ಬೀಜಗಳನ್ನು ಪುಡಿ ಮಾಡಿ, ದ್ರವ ರೂಪದಲ್ಲಿ ಸಿದ್ಧಪಡಿಸಲಾಗುತ್ತದೆ. ಈ ಯಂತ್ರವನ್ನು ಏಂಜೆಲೊ ಮೊರಿಯೊಂಡೋ ಆವಿಷ್ಕಾರ ಮಾಡಿದ್ದಾರೆ. 


ಇದನ್ನು ಓದಿ: ವಾಟ್ಸಾಪ್‌ನಲ್ಲಿ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಲು ಈ ಸಣ್ಣ ಟ್ರಿಕ್ ಟ್ರೈ ಮಾಡಿ


ಎಸ್ಪ್ರೆಸೊ ಆರೋಗ್ಯಕ್ಕೆ ಉತ್ತಮವೇ? 
ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಎಸ್ಪ್ರೆಸೊಗಳನ್ನು ಪುರುಷರು ಸೇವನೆ ಮಾಡೋದ್ರಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತದೆ. ಆದರೆ ಮಹಿಳೆಯರಿಗೆ ಯಾವುದೇ ಸಮಸ್ಯೆಗಳು ಇಲ್ಲ ಎಂದು ಹೇಳುತ್ತದೆ. ನಾರ್ವೆಯ ಸಂಶೋಧಕರು ಈ ಸಂಬಂಧ ಸಂಶೋಧನೆಯನ್ನು ಮಾಡಿದ್ದರು. ಕಾಫಿ ಸೇವಿಸುವ ಪುರುಷರು ಮತ್ತು ಮಹಿಳೆಯರ ರಕ್ತ ಪರಿಶೀಲನೆ ನಡೆಸಿದಾಗ ಕೊಲೆಸ್ಟ್ರಾಲ್ ಮಟ್ಟವು ಪುರುಷರಲ್ಲಿ ಹೆಚ್ಚಾಗಿ ಕಂಡುಬಂದಿತ್ತು. ಫಿಲ್ಟರ್ ಮಾಡಿದ ಕಾಫಿ ಮಹಿಳೆಯರಿಗೆ ಸೂಕ್ತವಲ್ಲ ಎಂದು ಈ ವರದಿ ತಿಳಿಸಿತ್ತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ