Easy Home Remedies for White Hair: ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಮಸ್ಯೆ ಎದುರಾಗಬಹುದು. ಇನ್ನು ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ನೆಲ್ಲಿಕಾಯಿ, ಮೆಹೆಂದಿ ಅಥವಾ ಶೀಕಕಾಯಿ ಅಂದರೆ ಸೀಗೆಕಾಯಿ ಪುಡಿಯನ್ನು ಬಳಸಬಹುದು. ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಸೀಸ್ ವಿರುದ್ಧದ ಪಂದ್ಯದಿಂದ ಈ ಸ್ಟಾರ್ ಆಟಗಾರನನ್ನೇ ಹೊರಗಿಟ್ಟ ರೋಹಿತ್!


ಆಮ್ಲಾ ಅಥವಾ ನೆಲ್ಲಿಕಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ನಂತಹ ಗುಣಗಳನ್ನು ಹೊಂದಿದೆ. ಇದು ಕೂದಲಿಗೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಉತ್ತೇಜನಗೊಳ್ಳುತ್ತದೆ ಮತ್ತು ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಬಿಳಿ ಕೂದಲನ್ನು ಕಪ್ಪಾಗಿಸಲು ಸಹ ನೆಲ್ಲಿಕಾಯಿ ಪೌಡರ್ ಬಳಸಬಹುದು.


ಕೊಂಚ ನೀರನ್ನು ಬಿಸಿ ಮಾಡಿ ಅದಕ್ಕೆ ಗೋರಂಟಿ ಮತ್ತು ನೆಲ್ಲಿಕಾಯಿ ಪುಡಿಯನ್ನು ಹಾಕಿ. ರಾತ್ರಿ ಪೂರ್ತಿ ಆ ಮಿಶ್ರಣವನ್ನು ಹಾಗೆ ಇಟ್ಟು ಮರುದಿನ ಬೆಳಗ್ಗೆ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಕಪ್ಪಾಗುವುದಲ್ಲದೆ, ಪೋಷಣೆ ಕೂಡ ದೊರೆಯುತ್ತದೆ.


ಸೀಗೆಕಾಯಿ ಮತ್ತು ಅಂಟುವಾಳ:


ಕಬ್ಬಿಣದ ಬಾಣಲೆಯಲ್ಲಿ ಕೊಂಚ ನೀರಿಗೆ ಸೀಗೆಕಾಯಿ, ನೆಲ್ಲಿಕಾಯಿ ಮತ್ತು ಅಂಟುವಾಳದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಮುಚ್ಚಿ ರಾತ್ರಿಯಿಡೀ ಬಿಡಿ. ಮರುದಿನ ಇದನ್ನು ನಿಮ್ಮ ಕೂದಲಿಗೆ ಹಚ್ಚಿ ನಂತರ ಒಂದು ಗಂಟೆ ಬಿಡಿ. ಒಂದು ಗಂಟೆಯ ನಂತರ ಕೂದಲು ತೊಳೆಯಿರಿ.


ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ:


ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಬಿಸಿ ಮಾಡಿ. ಕೆಲವು ನಿಮಿಷಗಳ ನಂತರ ಅದಕ್ಕೆ ನೆಲ್ಲಿಕಾಯಿ ಪುಡಿಯನ್ನು ಹಾಕಿ. (2 ಚಮಚ ತೆಂಗಿನ ಎಣ್ಣೆಗೆ ಒಂದು ಚಮಚ ನೆಲ್ಲಿಕಾಯಿ ಪುಡಿ) ಈ ಎರಡೂ ಪದಾರ್ಥಗಳು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಅದನ್ನು ಬಿಸಿ ಮಾಡಿ. ನಂತರ ತಣ್ಣಗಾಗಲು ಬಿಡಿ. ಸ್ವಲ್ಪ ಸಮಯದ ನಂತರ, ಅದನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಕಾಲ ಹಾಗೆ ಇರಿಸಿ ನಂತರ ಸರಳ ನೀರಿನಿಂದ ಕೂದಲನ್ನು ತೊಳೆಯಿರಿ.


ಇದನ್ನೂ ಓದಿ: ಮುಂದಿನ ಒಂದೂವರೆ ವರ್ಷ ಈ ರಾಶಿಗೆ ಸೋಲೆಂಬುದೇ ಇಲ್ಲ: ದುಡ್ಡಿನ ಮಳೆ ಗ್ಯಾರಂಟಿ, ಹೆಜ್ಜೆಹೆಜ್ಜೆಗೂ ಯಶಸ್ಸು ನೀಡಿ ಬಾಳು ಬೆಳಗಲಿದೆ ಶನಿ ಅಮವಾಸ್ಯೆ


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ