ಗೌರಿ- ಗಣೇಶ ಹಬ್ಬದ ಸಂಭ್ರಮ: ನೋಟು - ನಾಣ್ಯದಿಂದ ಗಣೇಶನಿಗೆ ವಿಶೇಷ ಅಲಂಕಾರ
Ganesha Chaturti: ಇಂದು ಪುಟ್ಟೆನಹಳ್ಳಿಯ ಸತ್ಯಸಾಯಿ ಗಣೇಶ ದೇವಸ್ಥಾನದಲ್ಲಿ ಹೂವಿನಂದ ಅಷ್ಟೇ ಅಲ್ಲದೇ ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ನೋಟು ಹಾಗೂ 50 ಲಕ್ಷ ಮೌಲ್ಯದ ನಾಣ್ಯದ ಸಿಂಗಾರ ಮಾಡಲಾಗಿತ್ತು.
Ganesha Chaturti: ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ. ಹೀಗಾಗಿ ನಗರದ ಹಲವೆಡೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆಯವರೆಗೂ ಭಕ್ತದಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಇಂದು ನಾಡಿನೆಲ್ಲೆಡೆ ಗೌರಿ - ಗಣೇಶ ಹಬ್ಬದ ಸಂಭ್ರಮ. ಹೀಗಾಗಿ ಸಿಲಿಕಾನ್ ಸಿಲಿಕಾನ್ ಸಿಟಿಯಲ್ಲಿ ಹಬ್ಬದ ಸೊಬಗು ಜೋರಾಗಿತ್ತು. ಅದ್ರಲ್ಲೂ ನಗರದ ಜೆಪಿನಗರದ ಪುಟ್ಟೆನಹಳ್ಳಿ ಶ್ರೀ ಸತ್ಯಗ್ರಹ ಗಣಪತಿ ಶಿರಡಿ ಬಾಬ ಹಾಗೂ ದೊಡ್ಡ ಗಣೇಶ ದೇವಸ್ಥಾನದಲ್ಲಿ ಬೆಳ್ಳಗ್ಗೆಯಿಂದಲೇ ದೇವಸ್ಥಾನದ ಸುತ್ತಲೂ ವಿಷೇಶ ಅಲಂಕಾರ ಮಾಡುವುದರ ಜೊತೆಗೆ ಬೆಳ್ಳಗ್ಗೆ 4 ಗಂಟೆಯಿಂದಲೇ ಶ್ರೀ ಗಣೇಶನಿಗೆ ಅಭಿಷೇಕ, ಪೂಜೆ ಮಾಡಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಸರಧಿ ಸಾಲಿನಲ್ಲಿ ಬಂದು ಸಾವಿರಾರು ಜನ ಭಕ್ತದಿಗಳು ದೇವರ ದರ್ಶನ ಮಾಡಿದ್ರು...
ಇದನ್ನೂ ಓದಿ- Ganesh Chaturthi 2023: ‘ಗಣಪತಿ ಬಪ್ಪ ಮೋರ್ಯ’ ಎನ್ನುವುದೇಕೆ? ಇದರ ಹಿಂದಿನ ಕಥೆ ತಿಳಿಯಿರಿ
ಅದ್ರಲ್ಲೂ ಇಂದು ಪುಟ್ಟೆನಹಳ್ಳಿಯ ಸತ್ಯಸಾಯಿ ಗಣೇಶ ದೇವಸ್ಥಾನದಲ್ಲಿ ಹೂವಿನಂದ ಅಷ್ಟೇ ಅಲ್ಲದೇ ಹಣದಿಂದ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ನೋಟು ಹಾಗೂ 50 ಲಕ್ಷ ಮೌಲ್ಯದ ನಾಣ್ಯದ ಸಿಂಗಾರ ಮಾಡಲಾಗಿತ್ತು. ಇಡೀ ದೇಗುಲದ ಆವರಣದಲ್ಲಿ ನೋಟು, ನಾಣ್ಯದ ಡೆಕೋರೇಷನ್ ಮಾಡಿಲಾಗಿತ್ತು. ಅಂದಹಾಗೇ ಈ ಡೆಕೋರೇಷನ್ ಗೆ 58 ಲಕ್ಷ ಮೌಲ್ಯದ 5, 10, 20 ನಾಣ್ಯಗಳು ಹಾಗೂ 10, 20, 50, 100, 200, 500, 2000 ನೋಟುಗಳಿಂದ ಹೂವಿನ ಸರಮಾಲೆ ಮಾಡಲಾಗಿತ್ತು. ಇನ್ನು ಗಣ ಅಲಂಕಾರ ಮಾಡಿದ್ದರಿಂದ ಅಲಂಕಾರ ನೋಡುವ ಭಕ್ತರ ಮೇಲೆ ಸಿಸಿಟಿವಿ ಕಣ್ಗಾವಲು ಇಡಲಾಗಿತ್ತು. ಬ್ಯಾರಿಕೇಡ್ ಹಾಕಿ ಅಲಂಕಾರ ಹಣವನ್ನ ಮುಟ್ಟದಂತೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ದೇವಸ್ಥಾನದ ಸುತ್ತ 22 ಸಿಸಿಟಿವಿ ಅಳವಡಿಕೆ, ಗನ್ ಮ್ಯಾನ್, ಸೆಕ್ಯುರಟಿ ಮಾಡಿ ಚಂದ್ರಯಾನ - 3, ಜೈ ಕರ್ನಾಟಕ, ಜೈ ಜವಾನ್ ಜೈ ಕಿಸಾನ್, ಮೇರಾ ಭಾರತ್ ಮಹಾನ್ ಥೀಮ್ ನಲ್ಲಿ ಅಲಂಕರಿಸಲಾಗಿತ್ತು. ಇನ್ನು ಶ್ರೀ ಗಣೇಶನಿಗೆ 8:30 ರ ಸುಮಾರಿಗೆ ಗಣೇಶನಿಗೆ ಬೆಣ್ಣೆ ಅಲಂಕಾರ ಮಾಡಿ ಅದರ ಮೇಲೆ ನಾಣ್ಯಗಳನ್ನ ಅಂಟಿಸಿ ವಿಶೇಷ ಪೂಜೆ ಮಾಡಿ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ವಿತರಣೆಯನ್ನ ಮಾಡಿ ವಿಜೃಂಭಣೆಯಿಂದ ಗಣೇಶ ಚತುರ್ಥಿಯನ್ನ ಆಚರಿಸಲಾಯಿತು.
ಇನ್ನು, ದೊಡ್ಡ ಗಣೇಶ ದೇವಸ್ಥಾನದಲ್ಲಿ ಬೆಳ್ಳಗ್ಗೆ 6 ಗಂಟೆಯಿಂದಲೇ ಶ್ರೀ ಗಣೇಶನಿಗೆ ಪಂಚಾಭಿಷೇಕವನ್ನ ಮಾಡಿ ಬೆಳ್ಳಿಯ ಅಲಂಕಾರ ಮಾಡಿ ಭಕ್ತಾದಿಗಳಿಗ ಗಣೇಶನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಬಂದಂತಹ ಭಕ್ತಾದಿಗಳು ಕಿಲೋಮೀಟರ್ ಗಟ್ಟಲೇ ಕ್ಯೂನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕಕ್ತಾದಿಗಳು ಬಂದಿದ್ದರಿಂದ ದೇವಸ್ಥಾನದಲ್ಲಿ ನೂಕು ನೂಗ್ಗಲಾಗಿತ್ತು. ಒಂದೇ ದಿನ ಗೌರಿ ಗಣೇಶ ಹಬ್ಬ ಬಂದಿದ್ರಿಂದ ನಿರೀಕ್ಷೆಗಿಂತಲೂ ಹೆಚ್ಚಿನ ಭಕ್ತದಿಗಳು ದೇವಸ್ಥಾನಕ್ಕೆ ಬಂದಿದ್ದರು.
ಇದನ್ನೂ ಓದಿ- Ganesh Chaturthi 2023: ಇಂತಹ ಗಣೇಶ ವಿಗ್ರಹ ಪ್ರತಿಷ್ಠಾಪಿಸುವುದು ಅತ್ಯಂತ ಮಂಗಳಕರ!
ಮುಜುರಾಯಿ ಇಲಾಖೆಯಿಂದ ಹಿರಿಯ ನಾಗಾರಿಕರಿಗೆ ವಿಶೇಷ ಸರದಿ ಸಾಲನ್ನ ಮಾಡಿ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದ್ದರಿಂದ ದೇವಸ್ಥಾನದಲ್ಲಿ ಎರಡು ಬದಿಯಲ್ಲಿ ವಿಶೇಷ ಸಾಲುಗಳನ್ನ ಮಾಡಲಾಗಿತ್ತು. ಇನ್ನು ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳು ಗಣೇಶನ ದರ್ಶನ ಪಡೆದು ಸಂತೋಷ ವ್ಯಕ್ತಪಡಿಸಿಡರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.