ನವದೆಹಲಿ: Grah Yuti Yog Effect On Zodiac - ಜೋತಿಷ್ಯ ಶಾಷ್ಟ್ರದ ಲೆಕ್ಕಾಚಾರದ ಪ್ರಕಾರ, ಸದ್ಯ ಮಂಗಳ ಹಾಗೂ ಶುಕ್ರರು ಧನು ರಾಶಿಯಲ್ಲಿದ್ದಾರೆ. ಬುಧ ಹಾಗೂ ಶನಿ ಮಕರರಾಶಿಯಲ್ಲಿದ್ದಾರೆ. ಇದಲ್ಲದೆ ಸೂರ್ಯ ಹಾಗೂ ಬೃಹಸ್ಪತಿ ಕುಂಭ ರಾಶಿಯಲ್ಲಿ ಗೋಚರಿಸುತ್ತಿದ್ದಾರೆ. ಈ ಮಂಗಳ-ಶುಕ್ರ, ಬುಧ-ಶನಿ ಹಾಗೂ ಸೂರ್ಯ-ಬೃಹಸ್ಪತಿಗಳ (Brihaspati Gochar 2022) ಸಂಯೋಜನೆಯ ಯೋಗ ಕೆಲ ರಾಶಿಗಳಿಗೆ ಲಾಭದಾಯಕ ಸಾಬೀತಾಗಲಿದೆ. ಹಾಗಾದರೆ ಬನ್ನಿ ಈ ಯೋಗ ನಿರ್ಮಾಣ ಯಾವ ಯಾವ ರಾಶಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಮೇಷ: ನೌಕರಿಯಲ್ಲಿ ಬಡ್ತಿಯ ಯೋಗ ನಿರ್ಮಾಣಗೊಳ್ಳುತ್ತಿದೆ.. ಜೊತೆಗೆ ಸ್ಥಾನ ಪರಿವರ್ತನೆಯಾಗುವ ಸಾಧ್ಯತೆ ಇದೆ. ಕೌಟುಂಬಿಕ ಸುಖದಲ್ಲಿ ಇಳಿಕೆಯಾಗಬಹುದು. ಭಾಷೆಯಲ್ಲಿ ಮೃದುತ್ವ ಇರಲಿದೆ.


ವೃಷಭ: ಕುಟುಂಬ ಸಮೇತ ಪ್ರವಾಸ ಹೋಗಬಹುದು. ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ಸಂಪತ್ತಿನಲ್ಲಿ ಹೆಚ್ಚಳ ಸಾಧ್ಯ.


ಮಿಥುನ: ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಸ್ನೇಹಿತರ ಬೆಂಬಲ ಸಿಗಲಿದೆ. ಕೆಲಸದ ಸ್ಥಳ ಬದಲಾವಣೆ ಸಾಧ್ಯ. ಕೌಟುಂಬಿಕ ಸಂತೋಷ ಹೆಚ್ಚಾಗಲಿದೆ.


ಕರ್ಕ: ಮನಃಶಾಂತಿ ಇರುತ್ತದೆ. ಕುಟುಂಬದಲ್ಲಿ ಮಾಂಗ್ಲಿಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಖರ್ಚು ಹೆಚ್ಚಾಗಲಿದೆ. ಮನೆಯಲ್ಲಿ ಹಣ ವ್ಯಯವಾಗಲಿದೆ.


ಇದನ್ನೂ ಓದಿ-Vastu Tips : ಮನೆಯ ಈ ಸ್ಥಳದಲ್ಲಿ ಔಷಧಿ ಇಡುವುದರಿಂದ ವಾಸಿಯಾಗಲ್ಲ ರೋಗಗಳು : ಈ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಿ


ಸಿಂಹ: ಸುಖದ ಸಾಧನಗಳು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಆರ್ಥಿಕ ಪ್ರಗತಿ ಕಂಡುಬರಲಿದೆ. ಇದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಯಶಸ್ಸಿನ ಯೋಗ. ವ್ಯಾಪಾರದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.


ಕನ್ಯಾ: ವ್ಯಾಪಾರದಲ್ಲಿ ಆರ್ಥಿಕ ಲಾಭವಾಗಲಿದೆ. ದೈನಂದಿನ ಆದಾಯ ಹೆಚ್ಚಾಗಲಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗಾವಕಾಶ ಸಿಗಲಿದೆ.


ತುಲಾ: ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ.


ವೃಶ್ಚಿಕ: ತಾಳ್ಮೆಯಿಂದಿರಿ. ಪಾಲುದಾರರಿಂದ ಆರ್ಥಿಕ ಲಾಭವಾಗಬಹುದು. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವಿರಿ. ನೀವು ಪೋಷಕರಿಂದ ಹಣಕಾಸಿನ ನೆರವು ಸಿಗಬಹುದು.


ಇದನ್ನೂ ಓದಿ-Maha Shivratri 2022: ಶಿವರಾತ್ರಿಯ ದಿನ ಈ ಮಂತ್ರಗಳನ್ನು ಹೇಳುತ್ತಾ ಶಿವನಿಗೆ ಬೆಲ್ಪತ್ರಿ ನೀರು ಅರ್ಪಿಸಿ, ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ


ಧನು: ಕಲಾ ಕ್ಷೇತ್ರದಲ್ಲಿ ಒಲವು ಹೆಚ್ಚಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಪಾಲುದಾರರು ಬೆಂಬಲ ಸಿಗಲಿದೆ. ಆದರೆ ವ್ಯಥಾ ಚರ್ಚೆಯನ್ನು ತಪ್ಪಿಸಬೇಕು. ಆದಾಯ ಹೆಚ್ಚಾಗಬಹುದು.


ಮಕರ: ಕೆಲಸದ ಸ್ಥಳದಲ್ಲಿ ಕೆಲಸದಲ್ಲಿ ಆಸಕ್ತಿ ಇರಲಿದೆ. ವ್ಯಾಪಾರದಲ್ಲಿ ಲಾಭ ಇರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರಯಾಣದಿಂದ ಆರ್ಥಿಕ ನಷ್ಟ ಉಂಟಾಗಬಹುದು.


ಕುಂಭ: ಉದ್ಯೋಗದಲ್ಲಿ ಬಡ್ತಿಗೆ ಅವಕಾಶ ಸಿಗಬಹುದು. ವ್ಯಾಪಾರದಲ್ಲಿ ಆದಾಯ ಹೆಚ್ಚಾಗಲಿದೆ. ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಆದಾಯ ಹೆಚ್ಚಾಗಲಿದೆ.


ಮೀನ: ಮಾನಸಿಕ ನೆಮ್ಮದಿ ಸಿಗಲಿದೆ. ಆದರೆ ಸಂಭಾಷಣೆಯಲ್ಲಿ ನೀವು ಸಂಯಮವನ್ನು ಹೊಂದಿರಬೇಕು. ಸಂತೋಷದ ಸಾಧನಗಳಿಗೆ ಖರ್ಚು ಹೆಚ್ಚಾಗಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ.


ಇದನ್ನೂ  ಓದಿ-Surya Dev: ಭಾನುವಾರ ಸೂರ್ಯದೇವನಿಗೆ ಈ ರೀತಿ ಪೂಜಿಸಿದರೆ ಸಾಕಷ್ಟು ಸಂಪತ್ತು, ಗೌರವ ಲಭಿಸಲಿದೆ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ