Chilli Halwa Recipe : ನೀವು ಹಲವು ಬಗೆಯ ಹಲ್ವಾಗಳನ್ನು ತಿಂದಿರಬೇಕು. ಆದರೆ ನೀವು ಎಂದಾದರೂ ಮೆಣಸಿನಕಾಯಿ ಹಲ್ವಾ ತಿಂದಿದ್ದೀರಾ? ಇದು ಭೋಪಾಲ್‌ನಲ್ಲಿ ಸಿಗುವ ಭಕ್ಷ್ಯವಾಗಿದೆ. ಈ ಹಲ್ವಾವನ್ನು ಹಸಿರು ಮೆಣಸಿನಕಾಯಿಯಿಂದ ತಯಾರಿಸಲಾಗುತ್ತದೆ. ಈ ಹಲ್ವಾ ತಿನ್ನಲು ಸಿಹಿಯಾಗಿರುತ್ತದೆ. 


COMMERCIAL BREAK
SCROLL TO CONTINUE READING

ಮೆಣಸಿನಕಾಯಿ ಹಲ್ವಾ ಹೆಸರಿನಿಂದಲೇ ವಿಶಿಷ್ಟವಾದ ಪಾಕವಿಧಾನದಂತೆ ಕಾಣುತ್ತದೆ. ಎಷ್ಟು ವಿಚಿತ್ರ ಎನಿಸಿದರೂ ಅದರ ರುಚಿಯೂ ಅಷ್ಟೇ ರುಚಿಕರವಾಗಿರುತ್ತದೆ. ಈ ಹಸಿರು ಮೆಣಸಿನಕಾಯಿ ಹಲ್ವಾ ತಿನ್ನಲು ಸಿಹಿಯಾಗಿರುತ್ತದೆ. ಆದರೆ ತಿಂದ ನಂತರ ಅದು ಗಂಟಲಿನಲ್ಲಿ ಖಾರದ ಅನುಭವ ನೀಡುತ್ತದೆ.


ಇದನ್ನೂ ಓದಿ : ತೂಕ ಇಳಿಕೆ : 5 ರೂಪಾಯಿಯ ಈ ಚಹಾ ಶಾಶ್ವತವಾಗಿ ಬೊಜನ್ನು ಕಡಿಮೆ ಮಾಡುತ್ತೆ 


ಈ ಹಲ್ವಾ ಮಾಡಲು 3 ರಿಂದ 4 ಗಂಟೆಗಳು ಬೇಕಾಗುತ್ತದೆ. ಮೊದಲು ಮೆಣಸಿನಕಾಯಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಕುದಿಸಲಾಗುತ್ತದೆ. ನಂತರ ಅವುಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ಬೇಯಿಸಲಾಗುತ್ತದೆ. ಅದನ್ನು ಬೇಯಿಸುವ ವಿಧಾನವು ತುಂಬಾ ಕಷ್ಟಕರವಾಗಿದೆ. 
 
ಮೆಣಸಿನಕಾಯಿ ಹಲ್ವಾ ಮಾಡಲು ಬೇಕಾದ ಸಾಮಗ್ರಿ : 


1/2 ಕೆಜಿ ಭಾವನಗರಿ ಮೆಣಸಿನಕಾಯಿ


300 ಗ್ರಾಂ ಸಕ್ಕರೆ


1/2 ಕಪ್ ಖೊವಾ


1/2 ಕಪ್ ದೇಸಿ ತುಪ್ಪ


1 ಟೀಸ್ಪೂನ್ ಏಲಕ್ಕಿ ಪುಡಿ


2 ಟೀಸ್ಪೂನ್ ಡ್ರೈ ಫ್ರೂಟ್ಸ್‌ 


ಮೆಣಸಿನಕಾಯಿ ಹಲ್ವಾ ಮಾಡುವ ವಿಧಾನ 


ಮೊದಲನೆಯದಾಗಿ, ಮೆಣಸಿನಕಾಯಿಯನ್ನು ಕತ್ತರಿಸಿ, ಅದರ ಬೀಜಗಳನ್ನು ತೆಗೆದು ತುರಿ ಮಾಡಿ. ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಅದಕ್ಕೆ ಖೊವಾ ಸೇರಿಸಿ. ಸ್ವಲ್ಪ ಹೊತ್ತು ಚೆನ್ನಾಗಿ ಮಿಶ್ರಣ ಮಾಡಿ, ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ. ಹಲ್ವಾ ಬಾಣಲಿನ್ನು ಬಿಡಲು ಪ್ರಾರಂಭಿಸಿದಾಗ, ಏಲಕ್ಕಿ ಪುಡಿ ಮತ್ತು ಡ್ರೈ ಫ್ರೂಟ್ಸ್‌ ಸೇರಿಸಿ. ಈಗ ರುಚಿಯಾದ ಮೆಣಸಿನಕಾಯಿ ಹಲ್ವಾ ಸವಿಯಲು ಸಿದ್ಧ. 


ಇದನ್ನೂ ಓದಿ: ಕೇವಲ ಗೋಧಿ ಚಪಾತಿ ತಿಂದರೆ ಸಣ್ಣಗಾಗುವುದಿಲ್ಲ! ಗೋಧಿ ಜೊತೆಗೆ ಈ ಹಿಟ್ಟನ್ನೂ ಬೆರೆಸಿ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.