ಹೆಚ್ಚುತ್ತಿರುವ ತೂಕವನ್ನು ಈ ಆಹಾರಗಳಿಂದಲೇ ನಿಯಂತ್ರಣ ಮಾಡಬಹುದು!ಯಾವ ಅಡ್ಡ ಪರಿಣಾಮವೂ ಇಲ್ಲದೆ !
Vegetables to loose weight :ಬೊಜ್ಜು ಹೋಗಲಾಡಿಸಲು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಅದರಲ್ಲಿಯೂ ಬೊಜ್ಜು ತಡೆಯಲು ತೂಕ ಇಳಿಸುವ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ.
Vegetables to loose weight : ಸ್ಥೂಲಕಾಯತೆ ಇಂದು ಅನೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ದೇಹದ ತೂಕವನ್ನು ಕಳೆದುಕೊಳ್ಳಲು ಜನರು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಕೆಲವರು ಇದಕ್ಕಾಗಿ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ. ಇದಕ್ಕಾಗಿ ಜಿಮ್ ನಲ್ಲಿ ಬೆವರಿಳಿಸುತ್ತಾರೆ. ಇಷ್ಟೆಲ್ಲಾ ಇದ್ದರೂ ಕೆಲವು ಮುಖ್ಯವಾದ ವಿಷಯಗಳನ್ನು ಮರೆತುಬಿಡುತ್ತಾರೆ. ಅದೆಂದರೆ, ತೂಕವನ್ನು ಕಳೆದುಕೊಳ್ಳುವ ಭರದಲ್ಲಿ ನಾವು ಅನುಸರಿಸುವ ಕ್ರಮಗಳು ಅಡ್ಡ ಪರಿಣಾಮಗಳನ್ನು ಕೂಡಾ ಉಂಟುಮಾಡಬಾರದು.
ದೇಹ ತೂಕ ಹೆಚ್ಚಾದಂತೆ ಅದು ಆರೋಗ್ಯವನ್ನು ಹೆಚ್ಚು ಹೆಚ್ಚು ಹದಗೆಡಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ, ಟೈಪ್ 2 ಮಧುಮೇಹ, ಹೃದ್ರೋಗ, ಕೆಲವು ರೀತಿಯ ಕ್ಯಾನ್ಸರ್, ಮೂಳೆಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : Fennel Seeds Benefits: ಕೂದಲುದುರುವ ಸಮಸ್ಯೆಗೂ ರಾಮಬಾಣ ಸೊಂಫು, ಬಳಸುವ ವಿಧಾನ ನಿಮಗೂ ತಿಳಿದಿರಲಿ!
ಬೊಜ್ಜು ಹೋಗಲಾಡಿಸಲು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಅದರಲ್ಲಿಯೂ ಬೊಜ್ಜು ತಡೆಯಲು ತೂಕ ಇಳಿಸುವ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಆರೋಗ್ಯಕರ ಮತ್ತು ನೈಸರ್ಗಿಕ ಮಾರ್ಗವನ್ನು ಅನುಸರಿಸುವುದು ಹೆಚ್ಚು ಸೂಕ್ತ. ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಅದು ಯಾವುದೇ ಅಡ್ಡ ಪರಿಣಾಮಗಳ ನ್ನು ಉಂಟು ಮಾಡುವುದಿಲ್ಲ.
ಹಸಿರು ಮೆಣಸಿನಕಾಯಿ :
ಹಸಿರು ಮೆಣಸಿನಕಾಯಿಯನ್ನು ತಿನ್ನುವುದರ ಮೂಲಕ ಬೊಜ್ಜು ಕಡಿಮೆ ಮಾಡಬಹುದು. ಇದು ಚಯಾಪಚಯವನ್ನು ಸುಧಾರಿಸುತ್ತದೆ.ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಪ್ರತಿದಿನ 2-3 ಹಸಿರು ಮೆಣಸಿನಕಾಯಿಗಳನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿರಲಿದೆ.
ಇದನ್ನೂ ಓದಿ : 9 ನಿಂಬೆ ಹಣ್ಣು 2 ಲಕ್ಷಕ್ಕೆ ಹರಾಜು ! ಈ ದೇವಾಲಯದ ನಿಂಬೆಗಾಗಿ ಜನ ಮುಗಿ ಬೀಳುವುದು ಈ ಪವಾಡಕ್ಕಾಗಿ !
ಹೆಸರು ಕಾಳು :
ಹೆಸರು ಕಾಳು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಇಯಲ್ಲಿ ಸಮೃದ್ದವಾಗಿದೆ.ಇದಲ್ಲದೆ, ಇದರಲ್ಲಿ ಕ್ಯಾಲ್ಸಿಯಂ,ಕಬ್ಬಿಣ, ಫೈಬರ್ ಮತ್ತು ಪ್ರೋಟೀನ್ ಕೂಡಾ ಹೇರಳವಾಗಿದೆ. ಇದನ್ನು ಸೇವಿಸುವುದರಿಂದ ಇದರಲ್ಲಿರುವ ಫೈಬರ್ ಅಂಶದಿಂದಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಏಲಕ್ಕಿ :
ಏಲಕ್ಕಿ ತಿನ್ನುವುದರಿಂದ ದೇಹದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ಅಲ್ಲದೆ, ಏಲಕ್ಕಿ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.ಆದ್ದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರು ಏಲಕ್ಕಿಯನ್ನು ನಿಯಮಿತವಾಗಿ ಸೇವಿಸಬೇಕು.
ಕರಿಬೇವು :
ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕ ಮತ್ತು ಸ್ಥೂಲಕಾಯತೆಯನ್ನು ತಡೆಯುವ ಗುಣಗಳನ್ನು ಹೊಂದಿವೆ. ಕರಿಬೇವಿನ ಎಲೆಗಳು ತೂಕ ಇಳಿಸಲು ಸಹಾಯ ಮಾಡುವುದಲ್ಲದೆ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ : White Hair Home Remedy: ವಾರದಲ್ಲಿ ನೈಸರ್ಗಿಕವಾಗಿ ಕೂದಲನ್ನು ಕಂಪ್ಲೇಟ್ ಕಪ್ಪಾಗಿಸಲು ಇಲ್ಲಿವೆ ಶಾಶ್ವತ ಉಪಾಯಗಳು!
ಗ್ರೀನ್ ಟೀ :
ಗ್ರೀನ್ ಟೀ ಅತ್ಯಂತ ಜನಪ್ರಿಯ ತೂಕ ನಷ್ಟ ಪಾನೀಯವಾಗಿದೆ. ಇದರ ಸೇವನೆಯು ನೇರವಾಗಿ ತೂಕ ನಷ್ಟಕ್ಕೆ ಕಾರಣವಾಗದಿದ್ದರೂ, ಫ್ಯಾಟ್ ಬರ್ನ್ ಮಾಡುವಲ್ಲಿ ಪ್ರಮಖ ಪಾತ್ರ ವಹಿಸುತ್ತದೆ. ಪ್ರತಿದಿನ ಗ್ರೀನ್ ಟೀ ಕುಡಿಯುವುದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಕ್ಯಾಲೊರಿಗಳನ್ನು ಕೂಡಾ ವೇಗವಾಗಿ ಬರ್ನ್ ಮಾಡುವುದು ಸಾಧ್ಯವಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ