Guru Gochar 2022: ಮೀನ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ! ಈ ರಾಶಿಗಳ ಜನರಿಗೆ ಸಮಯ ಕಠಿಣವಾಗಿರಲಿದೆ
Guru Gochar 2022 Effect: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜುಲೈ ತಿಂಗಳಿನಲ್ಲಿ ಹಲವು ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸುತ್ತಿವೆ. ಇನ್ನೊಂದೆಡೆ ಜುಲೈ 29 ರಂದು, ದೇವಗುರು ಬೃಹಸ್ಪತಿ ಮೀನ ರಾಶಿಯಲ್ಲಿ ವಕ್ರನಡೆಯನ್ನು ಅನುಸರಿಸಲಿದೆ. ಗುರುವಿನ ಈ ಹಿಮ್ಮುಖ ಚಲನೆ ಒಟ್ಟು ಮೂರು ರಾಶಿಗಳ ಜನರ ಮೇಲೆ ವಿಶೇಷ ಪ್ರಭಾವ ಬೀರಲಿದೆ.
Guru Vakri 2022: ಜ್ಯೋತಿಷ್ಯದ ಪ್ರಕಾರ, ಪ್ರತಿವರ್ಷ ಹಲವು ಗ್ರಹಗಳು ತನ್ನ ರಾಶಿಗಳನ್ನು ಬದಲಾಯಿಸುತ್ತವೆ. ಈ ಬಾರಿಯ ಜುಲೈ ತಿಂಗಳಿನಲ್ಲಿ ಹಲವು ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಿವೆ, ಜುಲೈ ಅಂತ್ಯದ ವೇಳೆಗೆ ಕೆಲ ಗ್ರಹಗಳು ತಮ್ಮ ಸ್ಥಾನವನ್ನು ಪರಿವರ್ತಿಸಲಿವೆ. ಜುಲೈ 29 ರಂದು ಗುರು ಗ್ರಹ ಮೀನ ರಾಶಿಯನ್ನು ಪ್ರವೇಶಿಸಲಿದೆ. ಈ ಪ್ರವೇಶದೊಂದಿಗೆ, ಗುರು ಗ್ರಹ ತನ್ನ ಹಿಮ್ಮುಖ ಚಲನೆ ಅಥವಾ ವಕ್ರ ನಡೆ ಅನುಸರಿಸಲಿದೆ. ನವೆಂಬರ್ 24, 2022 ರವರೆಗೆ ಗುರು ಈ ರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ. ಗುರುಗ್ರಹದ ಈ ಹಿಮ್ಮುಖ ಚಲನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ, ಆದರೆ ಗುರುವಿನ ಈ ರಾಶಿ ಪರಿವರ್ತನೆ ಮತ್ತು ವಕ್ರ ನಡೆ ಈ 3 ರಾಶಿಗಳ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಲಿದೆ ಎನ್ನಲಾಗಿದೆ. ಬನ್ನಿ ಈ ಕುರಿತು ವಿಸ್ತ್ರತ ಮಾಹಿತಿ ಪಡೆದುಕೊಳ್ಳೋಣ.
ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಈಗಾಗಲೇ ರಾಹುವಿನ ಗೋಚರ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಗುರು ಗ್ರಹದ ಪ್ರವೇಶದಿಂದಾಗಿ ಇವೆರಡರ ಸಂಯೋಜನೆಯು ಈ ರಾಶಿಯವರಿಗೆ ಅಶುಭ ಯೋಗಗಳನ್ನು ಸೃಷ್ಟಿಸುತ್ತಿದೆ. ಈ ಅವಧಿಯಲ್ಲಿ ನಿಮಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇದೇ ವೇಳೆ, ಈ ಸ್ಥಾನ ಪಲ್ಲಟದ ಅವಧಿಯಲ್ಲಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕೂಡ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ.
ಮಿಥುನ ರಾಶಿ - ಈ ರಾಶಿಯವರಿಗೆ ಗುರು ವಕ್ರ ನಡೆಯ ಅವಧಿ ಕಷ್ಟಗಳಿಂದ ಕೂಡಿರುವ ಸಾಧ್ಯತೆ ಇದೆ. ಬುಧ ಮತ್ತು ಶುಕ್ರ ಗ್ರಹಗಳು ಈಗಾಗಲೇ ಮಿಥುನ ರಾಶಿಯಲ್ಲಿ ವಿರಾಜಮಾನವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಜುಲೈ 29 ರಂದು ಗುರುವಿನ ಸ್ಥಾನ ಪಲ್ಲಟ, ಎಲ್ಲಾ ಮೂರು ಗ್ರಹಗಳ ಸಂಯೋಜನೆಯು ರೂಪುಗೊಳ್ಳುತ್ತದೆ, ಇದು ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಹಣವನ್ನು ಬೇರೆಯವರಿಂದ ಪಡೆಯುವಲ್ಲಿ ನಿಮಗೆ ಅಡೆತಡೆಗಳು ಎದುರಾಗಬಹುದು.
ಇದನ್ನೂ ಓದಿ-Dream Interpretation: ಕನಸಿನಲ್ಲಿ ಈ ಸಂಗತಿಗಳು ಕಾಣುವುದು ದೇವಿ ಲಕ್ಷ್ಮಿಯ ಆಗಮನದ ಸಂಕೇತಗಳಾಗಿವೆ
ಮೀನ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಗ್ರಹವು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ವೈವಾಹಿಕ ಸುಖಕ್ಕಾಗಿ ಮತ್ತಷ್ಟು ಕಾಯಬೇಕಾಗಲಿದೆ. ಅಷ್ಟೇ ಅಲ್ಲ, ಗುರುವಿನ ಈ ಪ್ರವೇಶ ಮೀನ ರಾಶಿಯ ಜನರಿಗೆ ಕಾರ್ಯಸಿದ್ಧಿ ಪ್ರಾಪ್ತಿಗೆ ಅಡಚಣೆಗಳನ್ನು ತಂದೊಡ್ಡಲಿದೆ. ಹೀಗಿರುವಾಗ ಶ್ರೀವಿಷ್ಣುವನ್ನು ಪೂಜಿಸಿ ಜಾತಕದಲ್ಲಿ ಗುರುಬಲ ಹೆಚ್ಚಿಸುವುದು ಉತ್ತಮ ಮಾರ್ಗವಾಗಿದೆ.
ಇದನ್ನೂ ಓದಿ-Surya Gochar 2022: ಇಂದಿನಿಂದ ‘ಸೂರ್ಯ’ ಈ ಜನರಿಗೆ ಹಣ ನೀಡಲಿದ್ದಾನೆ, ಅದೃಷ್ಟವೇ ಬದಲಾಗಲಿದೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.