Guru Purnima 2022: ಗುರು ಪೂರ್ಣಿಮಾ ದಿನ ಸೂರ್ಯ, ಬುಧ ಹಾಗೂ ಶುಕ್ರರಿಂದ ನಿರ್ಮಾಣಗೊಳ್ಳುತ್ತಿದೆ ಈ ಯೋಗ, 3 ರಾಶಿಗಳ ಜನರಿಗೆ ಭಾರಿ ಲಾಭ
Guru Purnima 2022 Date: ವೇದಗಳ ರಚಿತ ಮಹರ್ಷಿ ವೇದವ್ಯಾಸ ಜಯಂತಿಯನ್ನು ದೇಶಾದ್ಯಂತ ಗುರು ಪೂರ್ಣಿಮಾ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಸೂರ್ಯ, ಬುಧ ಹಾಗೂ ಶುಕ್ರರಿಂದ ಶುಭ ಕಾಕತಾಳೀಯ ಸೃಷ್ಟಿಯಾಗುತ್ತಿದ್ದು, ಈ ಮೂರು ರಾಶಿಗಳ ಜನರಿಗೆ ಭಾರಿ ಧನಲಾಭ ತರಲಿದೆ.
Guru Purnima 2022 Date, Trigrahi Yoga: ಹಿಂದೂ ಪಂಚಾಂಗದ ಪ್ರಕಾರ ಪ್ರತ್ರಿವರ್ಷದ ಆಷಾಢ ಮಾಸದ ಹುಣ್ಣಿಮೆಯ ತಿಥಿಯನ್ನು ಗುರು ಪೂರ್ಣಿಮಾ ಪರ್ವದ ರೂಪದಲ್ಲಿ ಆಚರಿಸಲಾಗುತ್ತದೆ. ಈ ವರ್ಷದ ಗುರು ಪೌರ್ಣಿಮೆಯ ಪರ್ವವನ್ನು ಜುಲೈ 13, 2022 ರಂದು ಆಚರಿಸಲಾಗುತ್ತಿದೆ. ಗುರು ಪೌರ್ಣಿಮೆಯ ಪರ್ವವನ್ನು ಮಹರ್ಷಿ ವೇದವ್ಯಾಸರ ಜಯಂತಿಯ ರೂಪದಲ್ಲಿ ಆಚರಿಸಲಾಗುತ್ತದೆ. ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಈ ತಿಥಿಯಲ್ಲಿ ವೇದಗಳ ರಚಿತ ಮಹರ್ಷಿ ವೇದವ್ಯಾಸರ ಜನ್ಮವಾಗಿತ್ತು ಎನ್ನಲಾಗುತ್ತದೆ.
ಜೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷ 2022 ರ ಗುರು ಪೌರ್ಣಿಮೆಯ ದಿನ ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ ಹಾಗೂ ಶುಕ್ರಗ್ರಹಗಳು ಮಿಥುನ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದು. ಮಿಥುನ ರಾಶಿಯಲ್ಲಿ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳಲಿದೆ. ಈ ಯೋಗವನ್ನು ಅತ್ಯಂತ ಫಲಪ್ರದಾಯಿ ಯೋಗ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಭಾವಿಸಲಾಗುತ್ತದೆ. ಈ ಅತ್ಯಂತ ಶುಭಯೋಗದ ಕಾರಣ ಮಿಥುನ, ವೃಷಭ ಹಾಗೂ ಧನು ರಾಶಿಯ ಜಾತಕದವರಿಗೆ ಭರಪೂರ ಲಾಭ ಸಿಗುವ ನಿರೀಕ್ಷೆ ಇದೆ.
ಮಿಥುನ ರಾಶಿ- ಗುರು ಪೌರ್ಣಿಮೆಯ ದಿನ ನಿರ್ಮಾಣಗೊಳುತ್ತಿರುವ ಈ ತ್ರೀಗ್ರಹಿ ಯೋಗದ ಕಾರಣ ಮಿಥುನ ರಾಶಿಯ ಜಾತಕವರಿಗೆ ಸಮಯ ಅತ್ಯಂತ ಶುಭ-ಲಾಭದಾಯಕ ಇರಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಸಾಥ್ ಸಿಗಲಿದೆ. ವೃತ್ತಿಜೀವನದಲ್ಲಿ ಬಡ್ತಿ ಇರಲಿದೆ. ವ್ಯಾಪಾರದಲ್ಲಿ ಲಾಭ ಇರಲಿದೆ. ಒಟ್ಟಾರೆ ಹೇಳುವುದಾದರೆ ಈ ಜಾತಕದ ಜನರ ಆರ್ಥಿಕ ಸ್ಥಿತಿ ಬಲಿಷ್ಠವಾಗಿರಲಿದೆ. ಶುಭ ಸಮಾಚಾರ ಸಿಗುವ ಶುಭ ಯೋಗಗಳು ನಿರ್ಮಾಣಗೊಳ್ಳುತ್ತಿವೆ.
ವೃಷಭ ರಾಶಿ- ಗುರು ಪೌರ್ಣಿಮೆಯಂದು ನಿರ್ಮಾಣ ಗೊಳ್ಳುತ್ತಿರುವ ಶುಭ ಕಾಕತಾಳೀಯದಿಂದ ವೃಷಭ ರಷಿಯ ಜಾತಕದವರ ಜೀವನದಲ್ಲಿ ಶುಭ ಬದಲಾವಣೆಗಳು ಸಂಭವಿಸಲಿವೆ. ಸಮಾಜದಲ್ಲಿ ಘನತೆ-ಗೌರವ ಪ್ರಾಪ್ತಿಯಾಗಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೂ ಕೂಡ ಸಿಗಲಿದೆ. ಸಾಲದ ರೂಪದಲ್ಲಿ ನೀವು ನೀಡಿರುವ ಹಣ ಅಥವಾ ದೀರ್ಘಕಾಲದಿಂದ ನಿಮ್ಮ ಕೈಸೇರಬೇಕಿದ್ದ ಹಣ ನಿಮಗೆ ಸಿಗಲಿದೆ. ಅವಿವಾಹಿತರಿಗೆ ವಿವಾಹದ ಪ್ರಸ್ತಾವನೆ ಬರುವ ಸಾಧ್ಯತೆ ಇದೆ.
ಧನು ರಾಶಿ- ಧನು ರಾಶಿಯ ಜಾತಕದವರ ಪಾಲಿಗೆ ಈ ಬಾರಿಯ ಗುರುಪೌರ್ಣಿಮೆ ಅತ್ಯಂತ ವಿಶೇಷವಾಗಿರಲಿದೆ. ಈ ಗುರು ಪೌರ್ಣಿಮೆಯ ದಿನ ನಿರ್ಮಾಣಗೊಳ್ಳುತ್ತಿರುವ ಶುಭ ತ್ರೀಗ್ರಹಿ ಯೋಗದಿಂದ ಈ ರಾಶಿಯ ಜಾತಕದವರಿಗೆ ನೌಕರಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಈ ರಾಶಿಯ ಅರ್ಹ ಜನರಿಗೆ ಸರ್ಕಾರಿ ನೌಕರಿಯೂ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆರ್ಥಿಕ ಸ್ಥಿತಿ ಬಲಿಷ್ಠವಾಗಿರಲಿದೆ. ವ್ಯಾಪಾರದಲ್ಲಿ ತೊಡಗಿರುವವರ ಲಾಭ ಹೆಚ್ಚಾಗಲಿದೆ.
ಇದನ್ನೂ ಓದಿ-Guru Purnima 2022: ಗುರು ಪೂರ್ಣಿಮಾ ದಿನ ರಾಶಿಗಳಿಗೆ ಅನುಗುಣವಾಗಿ ದಾನ ಮಾಡುವುದು ಸಾಕಷ್ಟು ಲಾಭ ನೀಡುತ್ತದೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.